ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ SPB ಅಂತಿಮ ವಿಧಿವಿಧಾನ

|

Updated on: Sep 26, 2020 | 8:16 AM

ಚೆನ್ನೈ: ಗಾನಗಾರುಡಿಗ ಎಸ್​.ಪಿ.ಬಾಲಸುಬ್ರಹ್ಮಣ್ಯಂ(74) ನಮ್ಮನ್ನು ಬಿಟ್ಟು ಬಾರದ ಊರಿಗೆ ಹೊರಟ್ಟಿದ್ದಾರೆ. ಇಂದು ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ ಹೌಸ್​ನಲ್ಲಿ SPB ಅಂತ್ಯಕ್ರಿಯೆ ನೆರವೇರಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದರಾಬಾದ್‌ನಿಂದ ಚೆನ್ನೈನತ್ತ ಪುರೋಹಿತರ ತಂಡ ಹೊರಟಿದೆ. ಈಗಾಗಲೇ ಗುಂಡಿ ತೆಗೆಯುವ ಕಾರ್ಯ ಆರಂಭವಾಗಿದೆ. ಕಂದಾಯ ಇಲಾಖೆ‌,‌ ಪೊಲೀಸ್ ಇಲಾಖೆ, ತಿರುವಳ್ಳೂರ್ ಜಿಲ್ಲಾಡಳಿತ ಕುಟುಂಬದ ಸದಸ್ಯರ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ. ತಮಿಳುನಾಡು ಸರ್ಕಾರ SPBಗೆ […]

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ SPB ಅಂತಿಮ ವಿಧಿವಿಧಾನ
Follow us on

ಚೆನ್ನೈ: ಗಾನಗಾರುಡಿಗ ಎಸ್​.ಪಿ.ಬಾಲಸುಬ್ರಹ್ಮಣ್ಯಂ(74) ನಮ್ಮನ್ನು ಬಿಟ್ಟು ಬಾರದ ಊರಿಗೆ ಹೊರಟ್ಟಿದ್ದಾರೆ. ಇಂದು ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ ಹೌಸ್​ನಲ್ಲಿ SPB ಅಂತ್ಯಕ್ರಿಯೆ ನೆರವೇರಲಿದೆ.

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ. ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದರಾಬಾದ್‌ನಿಂದ ಚೆನ್ನೈನತ್ತ ಪುರೋಹಿತರ ತಂಡ ಹೊರಟಿದೆ. ಈಗಾಗಲೇ ಗುಂಡಿ ತೆಗೆಯುವ ಕಾರ್ಯ ಆರಂಭವಾಗಿದೆ. ಕಂದಾಯ ಇಲಾಖೆ‌,‌ ಪೊಲೀಸ್ ಇಲಾಖೆ, ತಿರುವಳ್ಳೂರ್ ಜಿಲ್ಲಾಡಳಿತ ಕುಟುಂಬದ ಸದಸ್ಯರ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ. ತಮಿಳುನಾಡು ಸರ್ಕಾರ SPBಗೆ ಪೊಲೀಸ್ ಗೌರವ ಸಲ್ಲಿಸಲಿದೆ.

ಅಂತ್ಯಕ್ರಿಯೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11ರವರೆಗೆ SPB ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬೆಳಗ್ಗೆ 11ರ ನಂತರ ಅಂತ್ಯಕ್ರಿಯೆಗೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.