ತಾಂತ್ರಿಕ ದೋಷ: ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

| Updated By: ರಶ್ಮಿ ಕಲ್ಲಕಟ್ಟ

Updated on: Jul 05, 2022 | 4:43 PM

ಇಂಧನ ಸೂಚಕವು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರಿಂದ ಸ್ಪೈಸ್‌ಜೆಟ್‌ನ ದೆಹಲಿ-ದುಬೈ ವಿಮಾನವನ್ನು ಕರಾಚಿಗೆ ತಿರುಗಿಸಿದ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತನಿಖೆಗೆ ಆದೇಶಿಸಿದೆ.

ತಾಂತ್ರಿಕ ದೋಷ:  ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ಕರಾಚಿಯಲ್ಲಿ ತುರ್ತು ಭೂಸ್ಪರ್ಶ
ಸ್ಪೈಸ್ ಜೆಟ್
Follow us on

ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್​​ನ (SpiceJet) ಇಂಡಿಕೇಟರ್ ಲೈಟ್​​ನಲ್ಲಿ ಸಮಸ್ಯೆ ಕಂಡು ಬಂದಿದ್ದರಿಂದ ಕರಾಚಿಯಲ್ಲಿ (Karachi) ತುರ್ತು ಭೂಸ್ಪರ್ಶ (emergency landing )ಮಾಡಲಾಗಿದೆ ಎಂದು ವಿಮಾನ ಸಂಸ್ಥೆಯ ವಕ್ತಾರ ಹೇಳಿದ್ದಾರೆ. ಸ್ಪೈಸ್ ಜೆಟ್ B737 ಕರಾಚಿಯಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು ಪ್ರಯಾಣಿಕರನ್ನು ಸರುಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ. ಯಾವುದೇ ತುರ್ತು ಘೋಷಿಸಲಾಗಿಲ್ಲ. ವಿಮಾನವನ್ನು ನಾರ್ಮಲ್ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಯಾವುದೇ ರೀತಿಯ ತೊಂದರೆ ಇರುವುದು ಮೊದಲಿಗೆ ಗಮನಕ್ಕೆ ಬರಲಿಲ್ಲ. ಪ್ರಯಾಣಿಕರಿಗೆ ಆಹಾರ ನೀಡಲಾಗಿದೆ. ಈ ವಿಮಾನದ ಬದಲಿಗೆ ಬೇರೊಂದು ವಿಮಾನವನ್ನು ಕರಾಚಿಗೆ ಕಳುಹಿಸಿದ್ದು, ಆ ವಿಮಾನ ಪ್ರಯಾಣಿಕರನ್ನು ದುಬೈಗೆ ಕರೆದೊಯ್ಯಲಿದೆ. ವಿಮಾನದಲ್ಲಿ ಇಂಧನ ಪ್ರಮಾಣವು ಕಡಿಮೆಯಾಗುತ್ತಲೇ ಇತ್ತು. ಪಿಐಸಿ ವಿಮಾನವನ್ನು ಕರಾಚಿಗೆ (KHI) ತಿರುಗಿಸಲು ನಿರ್ಧರಿಸಿತು. ಎಟಿಸಿಯ ಸಮನ್ವಯದಲ್ಲಿ ವಿಮಾನವನ್ನು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ವಕ್ತಾರರು ತಿಳಿಸಿದ್ದಾರೆ.

“ಯಾವುದೇ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿಲ್ಲ. ಹಾರಾಟದ ನಂತರದ ತಪಾಸಣೆಯ ಸಮಯದಲ್ಲಿ, ಎಡ ಮುಖ್ಯ ಟ್ಯಾಂಕ್‌ನಿಂದ ಯಾವುದೇ ಸೋರಿಕೆ ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಇಂಧನ ಸೂಚಕವು ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದರಿಂದ ಸ್ಪೈಸ್‌ಜೆಟ್‌ನ ದೆಹಲಿ-ದುಬೈ ವಿಮಾನವನ್ನು ಕರಾಚಿಗೆ ತಿರುಗಿಸಿದ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ತನಿಖೆಗೆ ಆದೇಶಿಸಿದೆ. 150 ಕ್ಕೂ ಹೆಚ್ಚು ಪ್ರಯಾಣಿಕರು ಸ್ಪೈಸ್‌ಜೆಟ್ ವಿಮಾನದಲ್ಲಿದ್ದರು. ತಾಂತ್ರಿಕ ದೋಷವನ್ನು ಕಂಡು ಬಂದ ನಂತರ ವಿಮಾನವನ್ನು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಲಾಗಿತ್ತು .