ಸ್ಟ್ಯಾಚ್ಯು ಆಫ್​ ಲಿಬರ್ಟಿಗಿಂತ ಏಕತಾ ಪ್ರತಿಮೆಗೆ ಪ್ರವಾಸಿಗರು ಹೆಚ್ಚು: ನರೇಂದ್ರ ಮೋದಿ

ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರ ಏಕತಾ ಪ್ರತಿಮೆ ಗುಜರಾತ್‌ನ ಕೆವಾಡಿಯಾದಲ್ಲಿದೆ. ಇಲ್ಲಿಗೆ ತೆರಳುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು. ಈ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ.

ಸ್ಟ್ಯಾಚ್ಯು ಆಫ್​ ಲಿಬರ್ಟಿಗಿಂತ ಏಕತಾ ಪ್ರತಿಮೆಗೆ ಪ್ರವಾಸಿಗರು ಹೆಚ್ಚು: ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

Updated on: Jan 17, 2021 | 8:13 PM

ಅಹಮದಾಬಾದ್​: ಅಮೆರಿಕದಲ್ಲಿರುವ ಸ್ಟ್ಯಾಚ್ಯು ಆಫ್​ ಲಿಬರ್ಟಿಗಿಂತ ಗುಜರಾತ್​ನಲ್ಲಿರುವ ಏಕತಾ ಪ್ರತಿಮೆಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರ ಏಕತಾ ಪ್ರತಿಮೆ ಗುಜರಾತ್‌ನ ಕೆವಾಡಿಯಾದಲ್ಲಿದೆ. ಇಲ್ಲಿಗೆ ತೆರಳುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಈ ಯೋಜನೆಯಿಂದ ಕೆವಾಡಿಯಾಗೆ ಬರುವ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಕೇವಲ ಎರಡು ವರ್ಷಗಳಲ್ಲಿ 50 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದರು.

ಕೆವಾಡಿಯಾ ಈಗ ಸಣ್ಣ ಗ್ರಾಮವಲ್ಲ. ಇದು ಅತಿ ಹೆಚ್ಚು ಪ್ರವಾಸಿಗರು ಬರುವ ವಿಶ್ವದ ಪ್ರಮುಖ ಪ್ರವಾಸಿ ತಾಣ. ಅಮೆರಿಕದ ಸ್ಟ್ಯಾಚ್ಯು ಆಫ್​ ಲಿಬರ್ಟಿಗೆ ಹೋಲಿಕೆ ಮಾಡಿದರೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೇ ಹೆಚ್ಚು. ಕೊರೊನಾ ಭೀತಿ ನಡುವೆಯೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿಲ್ಲ ಎಂದು ಮೋದಿ ಹೆಮ್ಮೆ ವ್ಯಕ್ತಪಡಿಸಿದರು.

ಏಕತಾ ಪ್ರತಿಮೆ ನೋಡಲು ಬಂದ ಪ್ರವಾಸಿಗರಿಂದ ಸಂಗ್ರಹಿಸಿದ್ದ ಟಿಕೆಟ್ ಹಣ ದುರುಪಯೋಗ