ಕಳವಾಗಿದ್ದ 8 ಕೋಟಿ ರೂ.ಮೌಲ್ಯದ ಸಂಪತ್ತನ್ನು 22 ವರ್ಷಗಳ ಬಳಿಕ ಪಡೆದ ಕುಟುಂಬ; ಕೋರ್ಟ್​ ಆದೇಶದ ಬೆನ್ನಲ್ಲೇ ಹಿಂದಿರುಗಿಸಿದ ಪೊಲೀಸರು

| Updated By: Lakshmi Hegde

Updated on: Jan 13, 2022 | 3:56 PM

ಅಂದು ಕಳ್ಳರಿಂದ ವಶಪಡಿಸಿಕೊಂಡಿದ್ದ, ವಿಕ್ಟೋರಿಯಾ ರಾಣಿಯ ಚಿತ್ರವುಳ್ಳ ಗೋಲ್ಡ್ ಕಾಯ್ನ್​ಗಳು, ಎರಡು ಬಂಗಾರದ ಕಡಗಗಳು, 100 ಗ್ರಾಂ ಮತ್ತು 200 ಮಿಲಿಗ್ರಾಂ ತೂಕವುಳ್ಳ ಎರಡು ಬಂಗಾರದ ಗಟ್ಟಿಗಳು ಸೇರಿ ಒಟ್ಟು 8 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಪೊಲೀಸರ ಬಳಿಯೇ ಉಳಿದುಹೋಗಿದ್ದವು. 

ಕಳವಾಗಿದ್ದ 8 ಕೋಟಿ ರೂ.ಮೌಲ್ಯದ ಸಂಪತ್ತನ್ನು 22 ವರ್ಷಗಳ ಬಳಿಕ ಪಡೆದ ಕುಟುಂಬ; ಕೋರ್ಟ್​ ಆದೇಶದ ಬೆನ್ನಲ್ಲೇ ಹಿಂದಿರುಗಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
Follow us on

ಉತ್ಕೃಷ್ಟ ಫ್ಯಾಷನ್​ ಬ್ರ್ಯಾಂಡ್​ ಚರಗ್​ ದಿನ್​ ಮಾಲೀಕರು, ಕಳವಾಗಿ ಹೋಗಿದ್ದ ಸುಮಾರು 8 ಕೋಟಿ ರೂ.ಮೌಲ್ಯದ ಸಂಪತ್ತನ್ನು ಬರೋಬ್ಬರಿ 22 ವರ್ಷಗಳ ನಂತರ ವಾಪಸ್ ಪಡೆದಿದ್ದಾರೆ. ಚರಗ್​ ದಿನ್ ಸಂಸ್ಥಾಪಕ ಅರ್ಜನ್ ದಾಸ್ವಾಮಿ ಪುತ್ರ ರಾಜು ದಾಸ್ವಾನಿಗೆ ಈ ಸಂಪತ್ತನ್ನು ಹಿಂದಿರುಗಿಸಲಾಗಿದೆ.  22 ವರ್ಷಗಳ ಹಿಂದೆ ಕಳವಾಗುವಾಗ ಸಂಪತ್ತಿನ ಮೌಲ್ಯ 13 ಲಕ್ಷ ರೂಪಾಯಿ. ಆದರೀಗ ಅವುಗಳ ಬೆಲೆ 8 ಕೋಟಿ ರೂ. ಅಂದಹಾಗೆ, 1998ರಲ್ಲಿ ಕಳ್ಳರು ಇವರ ಒಡವೆಗಳನ್ನು ಕದ್ದನಂತರ ಪೊಲೀಸರು ಅವರನ್ನು ಹಿಡಿದಿದ್ದರು. ಆದರೆ ಹಣ, ಒಡವೆಯೆಲ್ಲ ಪೊಲೀಸರ ಬಳಿಯೇ ಉಳಿದುಹೋಗಿತ್ತು. ಅದನ್ನೀಗ ಪೊಲೀಸರು ವಾಪಸ್ ಮಾಡಿದ್ದಾರೆ. 

ಅರ್ಜನ್​ ದಾಸ್ವಾನಿಯವರ ಮುಂಬೈನ ಕೋಲಾಬಾದಲ್ಲಿರುವ ಮನೆಯನ್ನು 1998ರ ಮೇ 8ರಂದು ದುಷ್ಕರ್ಮಿಗಳು ಲೂಟಿ ಮಾಡಿದ್ದರು. ಸಶಸ್ತ್ರಗಳೊಂದಿಗೆ ಬಂದಿದ್ದ ಅವರು, ಮನೆಯ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ದಾಸ್ವಾನಿ ಮತ್ತು ಅವರ ಪತ್ನಿಯನ್ನು ಕಟ್ಟಿ ಹಾಕಿ, ಬೆದರಿಸಿ ಅವರಿಂದಲೇ ಕೀ ಪಡೆದು ಸಂಪತ್ತನ್ನು ಲೂಟಿ ಮಾಡಿದ್ದರು.  1998ರಲ್ಲಿಯೇ ಮೂವರು ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಚಿನ್ನಾಭರಣಗಳ ಒಂದು ಭಾಗವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆದರೆ ಈ ಮೂವರೂ 1999ರಲ್ಲಿಯೇ ಬಿಡುಗಡೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟ ಇನ್ನೂ ಮೂವರು ಇನ್ನೂ ಪತ್ತೆಯಾಗಿಲ್ಲ. ಈ ಮಧ್ಯೆ 2007ರಲ್ಲಿ ಅರ್ಜನ್​ ದಾಸ್ವಾನಿ ಮೃತಪಟ್ಟಿದ್ದಾರೆ.

ಆದರೆ ಅಂದು ಕಳ್ಳರಿಂದ ವಶಪಡಿಸಿಕೊಂಡಿದ್ದ, ವಿಕ್ಟೋರಿಯಾ ರಾಣಿಯ ಚಿತ್ರವುಳ್ಳ ಗೋಲ್ಡ್ ಕಾಯ್ನ್​ಗಳು, ಎರಡು ಬಂಗಾರದ ಕಡಗಗಳು, 100 ಗ್ರಾಂ ಮತ್ತು 200 ಮಿಲಿಗ್ರಾಂ ತೂಕವುಳ್ಳ ಎರಡು ಬಂಗಾರದ ಗಟ್ಟಿಗಳು ಸೇರಿ ಒಟ್ಟು 8 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಪೊಲೀಸರ ಬಳಿಯೇ ಉಳಿದುಹೋಗಿದ್ದವು.   ಅದನ್ನು ನಮಗೆ ಹಿಂದಿರುಗಿಸುವಂತೆ ರಾಜು ದೇಸ್ವಾನಿ ನ್ಯಾಯಾಲಯದ ಮೊರೆ ಹೋಗಿದ್ದರು. ಅದಕ್ಕೆ ಸಂಬಂಧಪಟ್ಟ ಬಿಲ್​ಗಳು, ರಶೀದಿಗಳನ್ನೂ ಸೆಷನ್ಸ್​ ಕೋರ್ಟ್​ಗೆ ನೀಡಿದ್ದರು.  ಇದನ್ನೆಲ್ಲ ಇಟ್ಟುಕೊಂಡು ಪ್ರಯೋಜನವಿಲ್ಲ ಎಂದು ಹೇಳಿದ ಕೋರ್ಟ್ ಎಲ್ಲ ಸಂಪತ್ತನ್ನೂ ಹಿಂದಿರುಗಿಸುವಂತೆ ಆದೇಶ ಹೊರಡಿಸಿತ್ತು. ಸದ್ಯ ಪಬ್ಲಿಕ್​ ಪ್ರಾಸಿಕ್ಯೂಟರ್ ಇಕ್ಬಾಲ್​ ಸೋಲ್ಕರ್​ ಮತ್ತು ಕೊಲಾಬಾ ಪೊಲೀಸ್​ ಸಂಜಯ್​ ಡೊನ್ನರ್​ ಸಮ್ಮುಖದಲ್ಲಿಎಲ್ಲವನ್ನೂ ರಾಜು ಅವರಿಗೆ ಹಸ್ತಾಂತರ ಮಾಡಲಾಗಿದೆ.

ಇದನ್ನೂ ಓದಿ: ಸಿನಿಮಾ ಹೀರೋ ಆದ ರಿಷಿಕುಮಾರ ಸ್ವಾಮಿ; ‘ಸರ್ವಸ್ಯ ನಾಟ್ಯಂ’ ಚಿತ್ರದಲ್ಲಿ ಗೆಟಪ್​ ಚೇಂಜ್​