ಸಿನಿಮಾ ಹೀರೋ ಆದ ರಿಷಿಕುಮಾರ ಸ್ವಾಮಿ; ‘ಸರ್ವಸ್ಯ ನಾಟ್ಯಂ’ ಚಿತ್ರದಲ್ಲಿ ಗೆಟಪ್​ ಚೇಂಜ್​

ಈ ಹಿಂದೆ ಬಿಗ್​ಬಾಸ್​ಗೆ ತೆರಳಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ರಿಷಿಕುಮಾರ ಸ್ವಾಮಿ ಈಗ ‘ಸರ್ವಸ್ಯ ನಾಟ್ಯಂ’ ಸಿನಿಮಾದಲ್ಲಿ ಡ್ಯಾನ್ಸ್​ ಟೀಚರ್​ ಪಾತ್ರ ಮಾಡಿದ್ದಾರೆ.

ಸಿನಿಮಾ ಹೀರೋ ಆದ ರಿಷಿಕುಮಾರ ಸ್ವಾಮಿ; ‘ಸರ್ವಸ್ಯ ನಾಟ್ಯಂ’ ಚಿತ್ರದಲ್ಲಿ ಗೆಟಪ್​ ಚೇಂಜ್​
ರಿಷಿಕುಮಾರ ಸ್ವಾಮಿ

ಹಲವು ವಿಚಾರಗಳ ಮೂಲಕ ಸದ್ದು ಮಾಡಿದ್ದ ರಿಷಿಕುಮಾರ ಸ್ವಾಮೀಜಿ ಅವರು ಈಗ ಸಿನಿಮಾ ಹೀರೋ ಕೂಡ ಆಗಿದ್ದಾರೆ. ಈ ಹಿಂದೆಯೂ ಅವರು ಬಣ್ಣ ಹಚ್ಚುವ ಪ್ರಯತ್ನ ಮಾಡಿದ್ದರು. ಆದರೆ ಆ ಚಿತ್ರದ ಕೆಲಸಗಳು ಕೊಂಚ ವಿಳಂಬ ಆದವು. ಈಗ ಅವರ ‘ಸರ್ವಸ್ಯ ನಾಟ್ಯಂ’ ಶೀರ್ಷಿಕೆಯ ಸಿನಿಮಾ ಮೂಲಕ ಜನರನ್ನು ರಂಜಿಸಲು ಸಜ್ಜಾಗಿದ್ದಾರೆ. ಈ ಸಿನಿಮಾದ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಈ ಸಿನಿಮಾಗೆ ಡ್ಯಾನ್ಸ್​ ಮಾಸ್ಟರ್​ ವಿಜಯನಗರ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ಮನೋಜ್​ ಶರ್ಮಾ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಹಾಡುಗಳಿಗೆ ಎ.ಟಿ. ರವೀಶ್​ ಅವರ ಸಂಗೀತ ನಿರ್ದೇಶನವಿದೆ.

ಈ ಹಿಂದೆ ಬಿಗ್​ಬಾಸ್​ಗೆ ತೆರಳಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ರಿಷಿಕುಮಾರ ಸ್ವಾಮಿ ‘ಸರ್ವಸ್ಯ ನಾಟ್ಯಂ’ ಸಿನಿಮಾದಲ್ಲಿ ಡ್ಯಾನ್ಸ್​ ಟೀಚರ್​ ಪಾತ್ರ ಮಾಡಿದ್ದಾರೆ. ಅವರ ಸಿನಿಮಾ ಪ್ರಯತ್ನಕ್ಕೆ ಬೆಂಬಲ ನೀಡಲು ಬಂದು ಆಡಿಯೋ ರಿಲೀಸ್​ ಮಾಡಿದ್ದಾರೆ ಹನುಮಂತನಾಥ ಮಹಾಸ್ವಾಮಿಗಳು ಹಾಗೂ ಸಿದ್ದಲಿಂಗ ಮಹಾಸ್ವಾಮಿಗಳು.

ತಮ್ಮ ಪಾತ್ರದ ಬಗ್ಗೆ ರಿಷಿಕುಮಾರ ಸ್ವಾಮಿ ಮಾಹಿತಿ ನೀಡಿದ್ದಾರೆ. ‘ಎಲ್ಲ ಡ್ಯಾನ್ಸ್​ ಟೀಚರ್​ಗಳು ತುಳಿತಕ್ಕೆ ಸಿಕ್ಕು ನೋವು ಅನುಭವಿಸಿರುತ್ತಾರೆ. ಅಂತಹ ಒಬ್ಬ ಡ್ಯಾನ್ಸ್​ ಶಿಕ್ಷಕನ ಪಾತ್ರವನ್ನು ನಾನು ಮಾಡಿದ್ದೇನೆ. ಅನಾಥ ಮಕ್ಕಳಿಗೆ ನೃತ್ಯ ಕಲಿಸಿ, ಅವರನ್ನು ದೊಡ್ಡ ಸ್ಪರ್ಧೆಗೆ ಸಜ್ಜುಗೊಳಿಸುವವನ ಪಾತ್ರ ಅದು. ಈ ಸಿನಿಮಾದ ನಿರ್ದೇಶಕ ಮಂಜು ಅವರ ತಾಳ್ಮೆ ದೊಡ್ಡದು. ಅನೇಕ ಮಕ್ಕಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅವರನ್ನು ನಿಭಾಯಿಸುವುದು ಸುಲಭ ಆಗಿರಲಿಲ್ಲ. ನಿರ್ಮಾಪಕ ಮನೋಜ್​ ವರ್ಮಾ ಅವರು ಈ ಸಿನಿಮಾ ನಿರ್ಮಾಣ ಮಾಡುವ ಮೂಲಕ ಅನೇಕರಿಗೆ ಅವಕಾಶ ನೀಡಿದ್ದಾರೆ’ ಎಂದಿದ್ದಾರೆ ರಿಷಿಕುಮಾರ ಸ್ವಾಮಿ.

‘ಒಬ್ಬ ಸ್ವಾಮಿ ಸಿನಿಮಾ ಮಾಡಿದ್ದಾರೆ ಅಂತ ಟೀಕೆ ಮಾಡಿದವರು ಹಲವು ಜನರು ಇದ್ದಾರೆ. ಕಲ್ಲು ಹೊಡೆಯುವವರು ಜಾಸ್ತಿ ಜನರು ಇರುತ್ತಾರೆ. ಆ ಕಲ್ಲುಗಳನ್ನೇ ಬಳಸಿಕೊಂಡು ನಾವು ಮನೆಕಟ್ಟಬೇಕು’ ಎಂದು ತಮ್ಮ ಟೀಕಾಕಾರರಿಗೆ ರಿಷಿಕುಮಾರ ಸ್ವಾಮಿ ತಿರುಗೇಟು ನೀಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ನಡೆಯುವ ಕೆಲವು ವಿಚಾರಗಳನ್ನು ಇಟ್ಟುಕೊಂಡು ವಿಜಯನಗರ ಮಂಜು ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಯುಗಾದಿ ವೇಳೆಗೆ ಸಿನಿಮಾವನ್ನು ತೆರೆಕಾಣಿಸುವ ಗುರಿಯನ್ನು ಚಿತ್ರತಂಡ ಇಟ್ಟುಕೊಂಡಿದೆ. ಸಿರಿ ಮ್ಯೂಸಿಕ್​ ಮೂಲಕ ‘ಸರ್ವಸ್ಯ ನಾಟ್ಯಂ’ ಚಿತ್ರದ ಹಾಡು ಬಿಡುಗಡೆ ಆಗಿದೆ.

ಇದನ್ನೂ ಓದಿ:

ಮೂವರು ಸುಂದರಿಯರ ಜತೆ ಧರ್ಮ ಕೀರ್ತಿರಾಜ್​; ‘ಸುಮನ್​’ ಚಿತ್ರದ ಹಾಡುಗಳು ರಿಲೀಸ್​

ನಂದಕಿಶೋರ್​, ಧರ್ಮ ಕೀರ್ತಿರಾಜ್​ ಫ್ರೆಂಡ್​ಶಿಪ್​ ಮೆಲುಕು; ಗೆಳೆಯನ ಚಿತ್ರಕ್ಕೆ ‘ಪೊಗರು’ ಡೈರೆಕ್ಟರ್​ ಸಾಥ್​

Click on your DTH Provider to Add TV9 Kannada