ಪೊಲೀಸ್ ಗ್ರಾಮಸ್ಥರ ನಡುವೆ ಘರ್ಷಣೆ, ಕಲ್ಲುತೂರಾಟ, ನಡೆದದ್ದೇನು ಗೊತ್ತಾ?

|

Updated on: May 10, 2020 | 8:00 AM

ಹೈದರಾಬಾದ್: ಕೊರೊನಾ ಕಾಟಕ್ಕೆ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಅದರಲ್ಲೂ ಆಂಧ್ರದಲ್ಲಿ ಕೊರೊನಾ ಪ್ರಭಾವ ಜಾಸ್ತಿನೆ ಇದೆ. ಈ ನಡುವೆ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಾಲಂಕಲ್ ಗ್ರಾಮದಲ್ಲಿ ನಡೆದಿದೆ. ವಾಲಂಕಲ್ ಗ್ರಾಮದಲ್ಲಿ ಕೋಳಿ ಪಂದ್ಯ ಆಡಲಾಗುತ್ತಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಕೋಳಿ ಪಂದ್ಯ ಆಡುತ್ತಿದ್ದವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಘರ್ಷಣೆ‌ ಉಂಟಾಗಿದೆ. ಈ ವೇಳೆ ಗ್ರಾಮಸ್ಥರು ಪೊಲೀಸರ ಮೇಲೆ […]

ಪೊಲೀಸ್ ಗ್ರಾಮಸ್ಥರ ನಡುವೆ ಘರ್ಷಣೆ, ಕಲ್ಲುತೂರಾಟ, ನಡೆದದ್ದೇನು ಗೊತ್ತಾ?
Follow us on

ಹೈದರಾಬಾದ್: ಕೊರೊನಾ ಕಾಟಕ್ಕೆ ಇಡೀ ದೇಶವನ್ನು ಲಾಕ್​ಡೌನ್ ಮಾಡಲಾಗಿದೆ. ಅದರಲ್ಲೂ ಆಂಧ್ರದಲ್ಲಿ ಕೊರೊನಾ ಪ್ರಭಾವ ಜಾಸ್ತಿನೆ ಇದೆ. ಈ ನಡುವೆ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲುತೂರಾಟ ಮಾಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಾಲಂಕಲ್ ಗ್ರಾಮದಲ್ಲಿ ನಡೆದಿದೆ.

ವಾಲಂಕಲ್ ಗ್ರಾಮದಲ್ಲಿ ಕೋಳಿ ಪಂದ್ಯ ಆಡಲಾಗುತ್ತಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಕೋಳಿ ಪಂದ್ಯ ಆಡುತ್ತಿದ್ದವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆಗ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಘರ್ಷಣೆ‌ ಉಂಟಾಗಿದೆ. ಈ ವೇಳೆ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರಿಂದ ಲಾಠಿಚಾರ್ಜ್ ಮಾಡಲಾಗಿದೆ. ಘಟನೆಯಲ್ಲಿ ಹಲವು ಗ್ರಾಮಸ್ಥರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಮಾಡಲಾಗುತ್ತಿದೆ.