ಇಂದು ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯಲ್ಲಿ(Afghanistan-Tajikistan) 5.7 ತೀವ್ರತೆಯ ಭೂಕಂಪನ (Earthquake)ಉಂಟಾಗಿದ್ದು, ಇದರಿಂದಾಗಿ ಜಮ್ಮು-ಕಾಶ್ಮೀರ, ನೊಯ್ಡಾ, ದೆಹಲಿಯ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದೆ. ಇನ್ನೊಂದೆಡೆ ಪಾಕಿಸ್ತಾನದಲ್ಲೂ ಸಹ ಸಣ್ಣಪ್ರಮಾಣದಲ್ಲಿ ಭೂಮಿ ನಡುಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Center for Seismology) ತಿಳಿಸಿದೆ. ಅಫ್ಘಾನಿಸ್ತಾನ-ತಜಿಕಿಸ್ತಾನ ಗಡಿಯಲ್ಲಿ ಇಂದು ಬೆಳಗ್ಗೆ 9.45ರ ಹೊತ್ತಿಗೆ, ಭೂಮೇಲ್ಮೈನಿಂದ 181 ಕಿಮೀ ಆಳದಲ್ಲಿ ಭೂಕಂಪ ಉಂಟಾಗಿದೆ. ಕಾಶ್ಮೀರ ಪ್ರದೇಶದಲ್ಲಿ ಭೂಮಿ ನಡುಗಿರುವ ವಿಡಿಯೋಗಳನ್ನು ಸ್ಥಳೀಯರು ಶೇರ್ ಮಾಡಿಕೊಂಡಿದ್ದಾರೆ.
ಇದ್ದುದರಲ್ಲೇ ಜಮ್ಮು-ಕಾಶ್ಮೀರದಲ್ಲಿ ಜಾಸ್ತಿ ಎನ್ನಿಸುವಷ್ಟು ಭೂಕಂಪದ ಅನುಭವ ಆಗಿದ್ದು, ಸ್ಥಳೀಯರೊಬ್ಬರು ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಭೂಕಂಪನವಾಗುತ್ತಿದ್ದಂತೆ ರಸ್ತೆಯ ಮೇಲೆ ಹೋಗುತ್ತಿದ್ದ ಬೈಕ್ ಸವಾರರೆಲ್ಲ ಬಿದ್ದಿರುವುದು, ಒಬ್ಬರನ್ನೊಬ್ಬರು ಗಟ್ಟಿಯಾಗಿ ಹಿಡಿದು ನಿಂತಿರುವ ದೃಶ್ಯ ಕಾಣಬಹುದು. ಇನ್ನೊಬ್ಬರು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮನೆಯೊಂದರ ಮೇಲ್ಛಾವಣಿಗೆ ಹಾಕಿದ್ದ ಸೀಲಿಂಗ್ ಫ್ಯಾನ್ ನಡುಗುವುದನ್ನು ನೋಡಬಹುದು. ಜಮ್ಮು-ಕಾಶ್ಮೀರದಲ್ಲಿ ಭೂಕಂಪನವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾರಿಗೆ ಕರೆ ಮಾಡಿ, ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ.
#earthquake of 5.9 #magnitude hits #Kashmir today. Mild effect felt in #NCR region #Delhi. Stay safe.
#Solidarity with #JammuAndKashmir #KashmirSolidarityDay #IAmKashmir #EarthquakePH pic.twitter.com/9bXFDaLQcb— cheikaba h (@CheikabaH) February 5, 2022
ಇನ್ನು ಪಾಕಿಸ್ತಾನದ ಕೆಲವು ಭಾಗದಲ್ಲಿ ಬೆಳಗ್ಗೆ 9.18ರ ಹೊತ್ತಿಗೆ ಭೂಮಿ ನಡುಗಿದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾಗಿ ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ ತಿಳಿಸಿದೆ. ಇದು ಭೂಕಂಪನದ ಕಾರಣಕ್ಕೆ ಇದ್ದರಿಬಹುದು. ಆದರೆ ಕೆಲವೊಮ್ಮೆ ಯಾವುದಾದರೂ ಸ್ಫೋಟದ ರಭಸಕ್ಕೂ ಹೀಗಾಗುತ್ತದೆ ಎಂದೂ ಹೇಳಿದೆ. ಇಂದು ಬೆಳಗ್ಗೆ ಉತ್ತರಾಖಂಡ್ನ ಉತ್ತರಕಾಶಿಯಲ್ಲಿ 3.6 ಮೆಗ್ನಿಟ್ಯೂಡ್ ತೀವ್ರತೆಯ ಭೂಕಂಪನವಾಗಿದ್ದು ವರದಿಯಾಗಿದೆ.
ಇದನ್ನೂ ಓದಿ: ಫ್ಲೈ ಓವರ್ ಮೇಲೆ ಬೈಕ್ ವಿಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಬೆಂಗಳೂರು ಪೊಲೀಸ್
Published On - 3:43 pm, Sat, 5 February 22