ಕೇಳಿಸದೆ ಕಲ್ಲು ಕಲ್ಲಿನಲಿ ‘ನಾದಸ್ವರ’ದ ದನಿ!

ಮಧುರೈ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಬೆಳ್ಳಿ ಕಾಲುಂಗುರ ಸಿನಿಮಾದ ಜನಪ್ರಿಯ ಹಾಡಿನಂತೆ ತಮಿಳುನಾಡಿನ ಮಧುರೈನ ಯುವಕನೊಬ್ಬ ಕಲ್ಲಿನಲ್ಲಿ ನಾದಸ್ವರ ಸಂಗೀತ ವಾದ್ಯವನ್ನ ವಿನ್ಯಾಸಗೊಳಿಸಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ. ಹೌದು, ಮದುವೆ ಮತ್ತು ಇತರೆ ಶುಭ ಸಮಾರಂಭಗಳಲ್ಲಿ ಸದಾ ನುಡಿಸಲಾಗುವ ಈ ಮರದಲ್ಲಿ ತಯಾರಿಸಲಾದ ಸಂಗೀತ ವಾದ್ಯವನ್ನು ಕಾರ್ತಿಕ್​ ಎಂಬ 12 ನೇ ಕ್ಲಾಸ್​ನ ವಿದ್ಯಾರ್ಥಿ ಶಿಲೆಯಲ್ಲಿ ವಿನ್ಯಾಸಗೊಳಿಸಿದ್ದಾನೆ. ಸಾಂಪ್ರದಾಯಿಕ ನಾದಸ್ವರದಂತೆಯೇ ಅಮೋಘವಾದ ಸಂಗೀತ ಹೊರಹೊಮ್ಮಿಸುವ ಈ ವಿಶೇಷ ನಾದಸ್ವರವನ್ನು ತಯಾರಿಸಲು ಸಾಕಷ್ಟು […]

ಕೇಳಿಸದೆ ಕಲ್ಲು ಕಲ್ಲಿನಲಿ ‘ನಾದಸ್ವರ’ದ ದನಿ!

Updated on: Aug 16, 2020 | 7:47 PM

ಮಧುರೈ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಬೆಳ್ಳಿ ಕಾಲುಂಗುರ ಸಿನಿಮಾದ ಜನಪ್ರಿಯ ಹಾಡಿನಂತೆ ತಮಿಳುನಾಡಿನ ಮಧುರೈನ ಯುವಕನೊಬ್ಬ ಕಲ್ಲಿನಲ್ಲಿ ನಾದಸ್ವರ ಸಂಗೀತ ವಾದ್ಯವನ್ನ ವಿನ್ಯಾಸಗೊಳಿಸಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ.

ಹೌದು, ಮದುವೆ ಮತ್ತು ಇತರೆ ಶುಭ ಸಮಾರಂಭಗಳಲ್ಲಿ ಸದಾ ನುಡಿಸಲಾಗುವ ಈ ಮರದಲ್ಲಿ ತಯಾರಿಸಲಾದ ಸಂಗೀತ ವಾದ್ಯವನ್ನು ಕಾರ್ತಿಕ್​ ಎಂಬ 12 ನೇ ಕ್ಲಾಸ್​ನ ವಿದ್ಯಾರ್ಥಿ ಶಿಲೆಯಲ್ಲಿ ವಿನ್ಯಾಸಗೊಳಿಸಿದ್ದಾನೆ.

ಸಾಂಪ್ರದಾಯಿಕ ನಾದಸ್ವರದಂತೆಯೇ ಅಮೋಘವಾದ ಸಂಗೀತ ಹೊರಹೊಮ್ಮಿಸುವ ಈ ವಿಶೇಷ ನಾದಸ್ವರವನ್ನು ತಯಾರಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದೇನೆ ಎಂದು ಕಾರ್ತಿಕ್​ ತಿಳಿಸಿದ್ದಾನೆ.