ಚೆನ್ನೈ: ನಟ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ ಎಂಬ ವಿಷಯ ಕೆಲ ವರ್ಷಗಳಿಂದ ಚರ್ಚೆಯಲ್ಲಿತ್ತು . ಇದೀಗ, ರಜನಿಕಾಂತ್ ಚುನಾವಣಾ ಕಣಕ್ಕೆ ಎಂಟ್ರಿ ಕೊಡುವ ವಿಚಾರ ಸ್ಪಷ್ಟವಾಗಿದ್ದು, 2021ರಲ್ಲಿ ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ರಾಜಕೀಯಕ್ಕೆ ರಜನಿಕಾಂತ್ ಬರುತ್ತಾರೋ ಇಲ್ಲವೋ ಎಂಬ ಅಧ್ಯಾಯ ಮುಗಿಯಿತು. ಆದರೆ, ತಮಿಳುನಾಡು ಚುನಾವಣಾ ಕಣ ಮಾತ್ರ ವಿ.ಕೆ. ಶಶಿಕಲಾ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ನಡುವೆ ಇರಲಿದೆ ಎಂದು ಹೇಳಿದ್ದಾರೆ. ಜೊತೆಗೆ, ಇದರಿಂದ ಬಿಜೆಪಿ ತೀವ್ರ ಗೊಂದಲಕ್ಕೀಡಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
Good that “will he or will he not” about Rajnikant joining politics has ended. The key battle will be probably between Rajnikanth and Sasikala. BJP will be in a dilemma
— Subramanian Swamy (@Swamy39) December 3, 2020
2021 ತ.ನಾಡು ವಿಧಾನಸಭೆ ಚುನಾವಣೆ: ರಾಜಕೀಯ ಎಂಟ್ರಿ ಘೋಷಿಸಿದ ರಜಿನಿಕಾಂತ್!