ರೈತಮುಖಂಡರೊಂದಿಗಿನ 7ತಾಸು ಮಾತುಕತೆ ಬಳಿಕ..‘ನಮಗೆ ದುರಹಂಕಾರ ಇಲ್ಲ’ವೆಂದ ಕೇಂದ್ರ ಸಚಿವ

ದೆಹಲಿ: ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಉಗ್ರಹೋರಾಟ ನಡೆಸುತ್ತಿರುವ ರೈತರೊಂದಿಗೆ ಇಂದು ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದು, ಯಾವುದೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಡಿಸೆಂಬರ್5ರಂದು ಮತ್ತೊಂದು ಹಂತದ ಮಾತುಕತೆ ನಡೆಯಲಿದೆ. ಕೃಷಿ ಮಸೂದೆ ಪಾಸ್ ಆಗುವುದಕ್ಕೂ ಮೊದಲಿನಿಂದಲೂ ಶುರುವಾದ ಹೋರಾಟ ಇತ್ತೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಂಜಾಬ್, ಹರ್ಯಾಣ, ಉತ್ತರಾಖಂಡ ಸೇರಿ ಐದಾರು ರಾಜ್ಯಗಳ ಸಾವಿರಕ್ಕೂ ಹೆಚ್ಚು ರೈತರು ದೆಹಲಿ ಚಲೋ ನಡೆಸಿದ್ದಾರೆ. ಕೇಂದ್ರಸರ್ಕಾರದ ಯಾವುದೇ ಮಾತಿಗೂ ಜಗ್ಗುತ್ತಿಲ್ಲ. ಕೇಂದ್ರ ಸರ್ಕಾರ ಸಂಸತ್ತಿನ […]

ರೈತಮುಖಂಡರೊಂದಿಗಿನ 7ತಾಸು ಮಾತುಕತೆ ಬಳಿಕ..‘ನಮಗೆ ದುರಹಂಕಾರ ಇಲ್ಲ’ವೆಂದ ಕೇಂದ್ರ ಸಚಿವ
ಕೇಂದ್ರ ಕೃಷಿ ಸಚಿವರು ರೈತ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು.
Lakshmi Hegde

|

Dec 03, 2020 | 8:41 PM

ದೆಹಲಿ: ಮೂರು ಹೊಸ ಕೃಷಿ ಕಾಯ್ದೆಗಳ ವಿರುದ್ಧ ಉಗ್ರಹೋರಾಟ ನಡೆಸುತ್ತಿರುವ ರೈತರೊಂದಿಗೆ ಇಂದು ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದು, ಯಾವುದೇ ಒಂದು ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಾಗಿ, ಡಿಸೆಂಬರ್5ರಂದು ಮತ್ತೊಂದು ಹಂತದ ಮಾತುಕತೆ ನಡೆಯಲಿದೆ. ಕೃಷಿ ಮಸೂದೆ ಪಾಸ್ ಆಗುವುದಕ್ಕೂ ಮೊದಲಿನಿಂದಲೂ ಶುರುವಾದ ಹೋರಾಟ ಇತ್ತೀಚೆಗೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪಂಜಾಬ್, ಹರ್ಯಾಣ, ಉತ್ತರಾಖಂಡ ಸೇರಿ ಐದಾರು ರಾಜ್ಯಗಳ ಸಾವಿರಕ್ಕೂ ಹೆಚ್ಚು ರೈತರು ದೆಹಲಿ ಚಲೋ ನಡೆಸಿದ್ದಾರೆ. ಕೇಂದ್ರಸರ್ಕಾರದ ಯಾವುದೇ ಮಾತಿಗೂ ಜಗ್ಗುತ್ತಿಲ್ಲ. ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ನಡೆಸಿ, ಮೂರು ವಿವಾದಾತ್ಮಕ ಕಾಯ್ದೆಗಳನ್ನು ಹಿಂಪಡೆಯಲು ಕೊನೇ ಅವಕಾಶ ನೀಡುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದ್ದರು. ಅಂತೂ ಇಂದು 40 ರೈತ ಮುಖಂಡರನ್ನೊಳಗೊಂಡ ನಿಯೋಗ ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾಯಿತು. ಸುಮಾರು ಏಳು ತಾಸುಗಳ ಕಾಲ ರೈತ ಮುಖಂಡರು ಮತ್ತು ಕೇಂದ್ರಸಚಿವರ ನಡುವೆ ಮಾತುಕತೆ ನಡೆಯಿತು.

ನಂತರ ಮಾತನಾಡಿ, ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್​, ಇಂದು ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸೌಹಾರ್ದಯುತ ಮಾತುಕತೆ ನಡೆದಿದೆ. ಈ ವಿಚಾರದಲ್ಲಿ ನಮ್ಮ ಸರ್ಕಾರಕ್ಕೆ ಯಾವುದೇ ಅಹಂಕಾರ ಇಲ್ಲ. ಶನಿವಾರ ಮತ್ತೊಂದು ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಹಾಗೇ, ಕನಿಷ್ಠ ಬೆಂಬಲ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರೈತರಿಗೆ ಕಾನೂನಾತ್ಮಕವಾಗಿ ಇನ್ನಷ್ಟು ಹಕ್ಕು ನೀಡುವುದನ್ನು ಸರ್ಕಾರ ಪರಿಗಣನೆ ಮಾಡುತ್ತದೆ. ರೈತರು ತಮ್ಮ ಪ್ರತಿಭಟನೆ ನಿಲ್ಲಿಸಿದರೆ ನಿಜಕ್ಕೂ ಖುಷಿ ಎಂದು ಹೇಳಿದ್ದಾರೆ.

ಇಂದಿನ ಸಭೆಯಲ್ಲಿ ಏನಾಯ್ತು? ಇಂದು ಕೇಂದ್ರ ಸರ್ಕಾರ ಮತ್ತು ರೈತ ಪ್ರತಿನಿಧಿಗಳ ನಡುವಿನ ಸಭೆಯಲ್ಲಿ ಮೊದಲು, ರೈತರೇ ಮಾತನಾಡಿದರು. ಹೊಸ ಕೃಷಿ ಕಾಯ್ದೆಗಳು ಎಷ್ಟು ಅಸಮರ್ಪಕ? ಹೇಗೆ ಮಾರಕ ಎಂಬುದನ್ನು ಅವರು ಹೇಳಿದ ಬಳಿಕ, ಕೇಂದ್ರ ಸಚಿವರು ತಮ್ಮ ನಿಲುವನ್ನು ಹೇಳಿದ್ದಾರೆ. ಅಲ್ಲದೆ, ಈ ಮೂರು ಕೃಷಿ ಕಾಯ್ದೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ದೃಢ ನಿರ್ಧಾರ. ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ ರೈತರಿಗೆ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊಟಬೇಡವೆಂದ ರೈತರು ಇಂದಿನ ಸಭೆ ಮಧ್ಯೆ ಊಟದ ವೇಳೆ ರೈತ ಪ್ರತಿನಿಧಿಗಳು ಕೇಂದ್ರಸರ್ಕಾರ ನೀಡಿದ ಊಟ ಮಾಡಲು ನಿರಾಕರಿಸಿದ್ದಾರೆ. ಅವರು ನಮಗೆ ಊಟ ಕೊಟ್ಟರು..ಆದರೆ ನಾವು ಅದನ್ನು ಮುಟ್ಟಲಿಲ್ಲ. ಬದಲಿಗೆ ನಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ತಿಂಡಿಯನ್ನೇ ತಿಂದೆವು ಎಂದು ರೈತರೋರ್ವರು ತಿಳಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada