ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ ಸರ್ವಪಕ್ಷ ಸಭೆ: ಲಸಿಕೆಯ ಬಗ್ಗೆ ನಡೆಯಲಿದೆಯಾ ಮಾತುಕತೆ?

ಕೊರೊನಾ ಕುರಿತು ಚರ್ಚಿಸಲು ಕರೆಯಲಾಗಿರುವ ಎರಡನೇ ಸರ್ವಪಕ್ಷ ಸಭೆ ಇದು. ಮೊದಲ ಸಭೆಯನ್ನು ಏಪ್ರಿಲ್​ 20ರಂದು ದೇಶವ್ಯಾಪಿ ಲಾಕ್​ಡೌನ್ ಬಗ್ಗೆ ಮಾತನಾಡಲು ಕರೆಯಲಾಗಿತ್ತು.

ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ ಸರ್ವಪಕ್ಷ ಸಭೆ: ಲಸಿಕೆಯ ಬಗ್ಗೆ ನಡೆಯಲಿದೆಯಾ ಮಾತುಕತೆ?
ಪ್ರಧಾನಿ ನರೇಂದ್ರ ಮೋದಿ
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 04, 2020 | 10:45 AM

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣ ಸಂಬಂಧಿತ ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಲು ಪ್ರಧಾನಿ ಮೋದಿ ಇಂದು ಬೆಳಗ್ಗೆ 10.30ಕ್ಕೆ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಕೊರೊನಾ ಕುರಿತು ಚರ್ಚಿಸಲು ಕರೆಯಲಾಗಿರುವ ಎರಡನೇ ಸರ್ವಪಕ್ಷ ಸಭೆ ಇದು. ಮೊದಲ ಸಭೆಯನ್ನು ಏಪ್ರಿಲ್​ 20ರಂದು ದೇಶವ್ಯಾಪಿ ಲಾಕ್​ಡೌನ್ ಬಗ್ಗೆ ಮಾತನಾಡಲು ಕರೆಯಲಾಗಿತ್ತು.

ದೀಪಾವಳಿ ನಂತರ ಕೊರೊನಾ ಪ್ರಕರಣಗಳಲ್ಲಿ ಉಂಟಾಗಿರುವ ಏರಿಳಿತ, ಚಳಿಗಾಲದ ಪರಿಣಾಮ, ಹೊಸವರ್ಷ, ಕ್ರಿಸ್​ಮಸ್​ ಸಂದರ್ಭದಲ್ಲಿ ರೂಪಿಸಬೇಕಾದ ನಿಯಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿನ್ನೆಯಷ್ಟೇ ಪುಣೆ, ಅಹಮದಾಬಾದ್, ಹೈದರಾಬಾದ್​ನ ಔಷಧ ತಯಾರಿಕೆ ಕಂಪೆನಿಗಳಿಗೆ ಪ್ರಧಾನಿ ಭೇಟಿ ನೀಡಿದ್ದರು. ಆದ್ದರಿಂದ, ಸಭೆಯಲ್ಲಿ ಕೊರೊನಾ ಲಸಿಕೆಯ ಕುರಿತು ಚರ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು ಕೆಲವೇ ಕ್ಷಣಗಳಲ್ಲಿ ಸಭೆ ಆರಂಭವಾಗಲಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಭಾರತದ ಮಾರುಕಟ್ಟೆಯಲ್ಲಿ ಯಾವಾಗ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada