ಜೈಲಿನಿಂದ ಅರವಿಂದ್ ಕೇಜ್ರಿವಾಲ್​ಗೆ ಪತ್ರ ಬರೆದ ಸುಕೇಶ್; ಬಿಆರ್​ಎಸ್​ಗೆ 15 ಕೋಟಿ ನೀಡಿದ್ದು, ನಿಮ್ಮ ಭ್ರಷ್ಟಾಚಾರದ ಟೀಸರ್ ಬಿಡುಗಡೆ ಮಾಡ್ತೀನಿ ಎಂದು ಎಚ್ಚರಿಕೆ

|

Updated on: Apr 01, 2023 | 10:29 AM

ಆಪ್ ನಾಯಕನ ಭ್ರಷ್ಟಾಚಾರ, ಸುಳ್ಳು ಮತ್ತು ನಾಟಕವನ್ನು ಬಹಿರಂಗಪಡಿಸುವುದಾಗಿ ಆರೋಪಿ ಸುಕೇಶ್ ದೆಹಲಿ ಸಿಎಂರಿಗೆ ಪತ್ರ ಬರೆದಿದ್ದಾನೆ.

ಜೈಲಿನಿಂದ ಅರವಿಂದ್ ಕೇಜ್ರಿವಾಲ್​ಗೆ ಪತ್ರ ಬರೆದ ಸುಕೇಶ್; ಬಿಆರ್​ಎಸ್​ಗೆ 15 ಕೋಟಿ ನೀಡಿದ್ದು, ನಿಮ್ಮ ಭ್ರಷ್ಟಾಚಾರದ ಟೀಸರ್ ಬಿಡುಗಡೆ ಮಾಡ್ತೀನಿ ಎಂದು ಎಚ್ಚರಿಕೆ
ಸುಕೇಶ್ ಚಂದ್ರಶೇಖರ್, ಅರವಿಂದ್ ಕೇಜ್ರಿವಾಲ್
Follow us on

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್(Sukesh Chandrasekhar) ಇತ್ತೀಜೆಗೆ ಜಾಕ್ವೆಲಿನ್​ ಫರ್ನಾಂಡಿಸ್​ಗೆ ಪ್ರೇಮ ಪತ್ರ ಬರೆದು ಸುದ್ದಿಯಾಗಿದ್ದ. ಈಗ ಮತ್ತೆ ಜೈಲಿನಲ್ಲಿದ್ದುಕೊಂಡೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರನ್ನು ಉದ್ದೇಶಿಸಿ ಪತ್ರ ಬರೆದಿದ್ದು ಆಪ್ ನಾಯಕನ ಭ್ರಷ್ಟಾಚಾರ, ಸುಳ್ಳು ಮತ್ತು ನಾಟಕವನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಅರವಿಂದ್ ಕೇಜ್ರಿವಾಲ್, ನಿಮ್ಮ ಮುಖದಲ್ಲಿ ಭಯವನ್ನು ನೋಡುವುದು ನನಗೆ ತುಂಬಾ ತೃಪ್ತಿ ನೀಡುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಸುಕೇಶ್ ಚಂದ್ರಶೇಖರ್ ಬರೆದ ಪತ್ರದಲ್ಲೇನಿದೆ?

ಕೇಜ್ರಿವಾಲ್ ಜೀ, ನಿಮ್ಮ ಮುಖದಲ್ಲಿ ಭಯವನ್ನು ನೋಡುವುದು ನನಗೆ ತುಂಬಾ ತೃಪ್ತಿ ನೀಡುತ್ತದೆ. ಮತ್ತು ಇದೆಲ್ಲಾ ಕೊನೆಗೊಳ್ಳುತ್ತದೆ ಎಂದು ನಿಮಗೆ ತಿಳಿದಿದೆ. ನೀವು ಯಾವುದೇ ಗಿಮಿಕ್‌ಗಳನ್ನು ತೋರಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಿಲ್ಲ, ಇನ್ನು ಮುಂದೆ ಯಾರೂ ನಿಮ್ಮನ್ನು ನಂಬುವುದಿಲ್ಲ, ಎಲ್ಲವೂ ಮುಗಿದಿದೆ, ಕ್ಷಣಗಣನೆ ಪ್ರಾರಂಭವಾಗಿದೆ. ಮುಂಬರುವ ವಾರದಲ್ಲಿ ನಾನು ಟೀಸರ್ ಅನ್ನು ಬಿಡುಗಡೆ ಮಾಡುತ್ತೇನೆ ನನ್ನ ಸಹೋದರ ” ಎಂದು ಸುಕೇಶ್ ಪತ್ರ ಬರೆದಿದ್ದಾನೆ.

ಕೇಜ್ರಿವಾಲ್ ಜೀ, ನಾನು ಬಿಡುಗಡೆ ಮಾಡಲಿರುವ ಟೀಸರ್‌ನ ಸುಳಿವನ್ನು ನಿಮಗೆ ನೀಡಲು ಬಯಸುತ್ತಾನೆ. ನಿಮ್ಮ ಸೂಚನೆಯ ಮೇರೆಗೆ ನಾನು ಮತ್ತು ಸತ್ಯೇಂದರ್ ಜೈನ್ ಹೈದರಾಬಾದ್‌ನಲ್ಲಿ ಪ್ರಸ್ತುತ “ಲಿಕ್ಕರ್ ಗೇಟ್” ಪ್ರಕರಣದ ತನಿಖೆ ಎದುರಿಸುತ್ತಿರುವ ವ್ಯಕ್ತಿಗೆ ತಲುಪಿಸಿದ ಮೊತ್ತವು ನಿಮಗೆ ನೆನಪಿದೆಯೇ. ಇದು ನಿಮಗೆ ನೆನಪಿದೆ ಎಂದು ನನಗೆ ಖಾತ್ರಿಯಿದೆ, ಆದರೆ ಕೇಜ್ರಿವಾಲ್​ ಜೀ ಇದರ ನಂತರ, ನೀವು ರಾಜೀನಾಮೆ ನೀಡುವುದು ಉತ್ತಮ. ಕೇಜ್ರಿವಾಲ್ ಮತ್ತು ಸತ್ಯೇಂದರ್ ಜೈನ್ ಅವರೊಂದಿಗೆ 700 ಪುಟಗಳ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಚಾಟ್‌ಗಳ ರೂಪದಲ್ಲಿ ಹಕ್ಕುಗಳನ್ನು ಸಾಬೀತುಪಡಿಸಲು ತಮ್ಮ ಬಳಿ ಸಾಕ್ಷ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಾಟ್ಸಾಪ್ ಚಾಟ್‌ಗಳಲ್ಲಿ ಕೋಡ್ ವರ್ಡ್‌ಗಳ ಮೂಲಕ ನಗದು ವಹಿವಾಟು, ಸಾಗಣೆ ನಡೆದಿದೆ ಎಂದು ಆರೋಪಿ ಸುಕೇಶ್ ಬಹಿರಂಗಪಡಿಸಿದ್ದಾನೆ.

ಇದನ್ನೂ ಓದಿ: Delhi Budget: ದೆಹಲಿ ಸರ್ಕಾರದ ಬಜೆಟ್ ಮಂಡನೆಗೆ ತಡೆ, ಮೋದಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್

15 ಕೆ.ಜಿ ತುಪ್ಪದ ಹೆಸರಲ್ಲಿ 15 ಕೋಟಿ ಹಣವನ್ನು ಹೈದರಾಬಾದ್ ನ ಬಿಆರ್ ಎಸ್ ಪಕ್ಷಕ್ಕೆ ಐದು ಕಂತು 15 ಕೋಟಿ ನೀಡಲಾಗಿದೆ.

ಪಕ್ಷದ ಕಚೇರಿ ಬಳಿ ನಿಲ್ಲಿಸಲಾಗಿದ್ದ ರೇಂಜ್ ರೋವರ್ ಕಾರ್ ಸಂಖ್ಯೆ 6060 ರಲ್ಲಿ ಎಪಿ ಎಂಬ ಹೆಸರಿನ ವ್ಯಕ್ತಿಗೆ 15 ಕೋಟಿ ರೂಪಾಯಿಗಳನ್ನು ಹಸ್ತಾಂತರಿಸುವಂತೆ ಕೇಜ್ರಿವಾಲ್, ಸುಕೇಶ್ ಅವರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ನನ್ನ ಕುಟುಂಬಕ್ಕೆ ತೊಂದರೆ ಕೊಡುವುದನ್ನು ನಿಲ್ಲಿಸಿ. ನಾನು ನಿಮಗೆ ಹೇಳುತ್ತಿರುವುದು ಇದೇ ಕೊನೆಯ ಬಾರಿ. ನಿಮ್ಮನ್ನು ಅಧಿಕಾರದಿಂದ ಅಲುಗಾಡಿಸುತ್ತೇನೆ. ತಯಾರಾಗಿರಿ ಎಂದು ಬರೆಯಲಾಗಿರುವ ಎಚ್ಚರಿಕೆ ಪತ್ರವನ್ನು ಸುಕೇಶ್ ದೆಹಲಿ ಸಿಎಂ ಅಂಗಳಕ್ಕೆ ಕಳಿಸಿದ್ದಾನೆ. ಆದ್ರೆ ಈ ಪತ್ರದಲ್ಲಿ ಮಾಡಲಾದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಆರ್‌ಎಸ್ ಮುಖಂಡರು ಹೇಳಿಕೆಯನ್ನು ಖಂಡಿಸಿದರು. ಬಿಜೆಪಿ ನಾಯಕರು ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ