Delhi Budget: ದೆಹಲಿ ಸರ್ಕಾರದ ಬಜೆಟ್ ಮಂಡನೆಗೆ ತಡೆ, ಮೋದಿಗೆ ಪತ್ರ ಬರೆದ ಅರವಿಂದ್ ಕೇಜ್ರಿವಾಲ್
ದೆಹಲಿಯ ಬಜೆಟ್ (2023-24) ಕುರಿತು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮುಖಾಮುಖಿಯಾಗಿದೆ. ದೆಹಲಿಯ ಬಜೆಟ್ ಮಂಗಳವಾರ ಅಂದರೆ ಇಂದು (ಮಾ.21) ಮಂಡನೆಯಾಗಬೇಕಿತ್ತು, ಆದರೆ ಅದನ್ನು ತಡೆಹಿಡಿಯಲಾಗಿತ್ತು. ಇದೀಗ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೋದಿಗೆ ಪತ್ರ ಬರೆದಿದ್ದಾರೆ.
ದೆಹಲಿ: ದೆಹಲಿಯ ಬಜೆಟ್ (2023-24) (Delhi Budget) ಕುರಿತು ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮುಖಾಮುಖಿಯಾಗಿದೆ. ದೆಹಲಿಯ ಬಜೆಟ್ ಮಂಗಳವಾರ ಅಂದರೆ ಇಂದು (ಮಾ.21) ಮಂಡನೆಯಾಗಬೇಕಿತ್ತು, ಆದರೆ ಅದನ್ನು ತಡೆಹಿಡಿಯಲಾಗಿತ್ತು. ಜಾಹೀರಾತು, ಬಂಡವಾಳ ವೆಚ್ಚದ ಮೇಲಿನ ಖರ್ಚು ಮತ್ತು ಆಯುಷ್ಮಾನ್ ಭಾರತ್ ಮುಂತಾದ ವಿಷಯಗಳ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ಕೇಳಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರದ ಗೂಂಡಾಗಿರಿ ಎಂದು ಆರೋಪಿಸಿದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಯಾವುದೇ ಸರ್ಕಾರದ ಬಜೆಟ್ ಅನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿಗೆ ದಯವಿಟ್ಟು ದೆಹಲಿ ಬಜೆಟ್ನ್ನು ನಿಲ್ಲಿಸಬೇಡಿ ಎಂದು ಪತ್ರ ಬರೆದಿದ್ದಾರೆ.
Published On - 9:47 am, Tue, 21 March 23