ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ಇಂದು ಮುಂದುವರಿಸಲಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಅರ್ಜಿಗಳ ವಿಚಾರಣೆ ನಡೆಸಲಿದೆ. ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ವಕೀಲ ದೇವದತ್ ಕಾಮತ್ ಅವರು ನಮ್ಮ ಅರ್ಜಿಯಲ್ಲಿ ನಾವು ಸಮವಸ್ತ್ರವನ್ನು ಪ್ರಶ್ನಿಸಿಲ್ಲ, ನಾವು ಸಮವಸ್ತ್ರದೊಂದಿಗೆ ಸ್ಕಾರ್ಫ್ ಧರಿಸಬಹುದೇ ಅಥವಾ ಇಲ್ಲವೇ ಎಂದು ಕೇಳಿದ್ದೇವೆ. ಹಿಜಾಬ್ ಬುರ್ಖಾ ಅಲ್ಲ. ಸಮವಸ್ತ್ರದ ಮೇಲೆ ಹಿಜಾಬ್ ಧರಿಸಲು ಅವಕಾಶ ನೀಡದ ರಾಜ್ಯ ಸರ್ಕಾರದ ಆದೇಶವನ್ನು ನಾವು ಪ್ರಶ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಳೆದ ವಿಚಾರಣೆಯಲ್ಲಿ, ಮೂಲಭೂತ ಹಕ್ಕಿನ ಆಧಾರದ ಮೇಲೆ ಜೀನ್ಸ್ ಅಥವಾ ಯಾವುದೇ ಬಟ್ಟೆ ಧರಿಸಿ ಶಾಲೆಗೆ ಬರಬಹುದೇ ಎಂಬ ಸರಿಯಾದ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿತ್ತು. ಶಿಕ್ಷಣವನ್ನು ಪಡೆಯಲು ಪೂರ್ವ ಷರತ್ತಾಗಿ ಆರ್ಟಿಕಲ್ 19, 21 ಮತ್ತು 25 ರ ಅಡಿಯಲ್ಲಿ ತನ್ನ ಮೂಲಭೂತ ಹಕ್ಕುಗಳನ್ನು ಒಪ್ಪಿಸಬಹುದು.
ಸ್ಕಾರ್ಫ್ ಧರಿಸುವುದು ಯಾರಿಗಾದರೂ ಅವಮಾನವೇ? ಏಕರೂಪದ ಬಣ್ಣದ ಸ್ಕಾರ್ಫ್ ಯಾವುದೇ ಅಶಿಸ್ತಿನ ಅಡಿಯಲ್ಲಿ ಬರುತ್ತದೆಯೇ? ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಧರಿಸುವುದನ್ನು ಅನುಮತಿಸಲಾಗಿದೆ. ನ್ಯಾಯಾಲಯದಲ್ಲಿ ಹಾಜರಿದ್ದ ಮಹಿಳಾ ವಕೀಲರು ಧರಿಸಿದ್ದ ಹಿಜಾಬ್ ಕಡೆಗೆ ಕೈತೋರಿಸಿ, ಇದರಿಂದ ನ್ಯಾಯಾಲಯಕ್ಕೆ ಏನಾದರೂ ತೊಂದರೆಯಾಗುತ್ತಿದೆಯೇ? ಕೇಂದ್ರೀಯ ವಿದ್ಯಾಲಯದ ಹಿಜಾಬ್ ನಿಯಮದ ಬಗ್ಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಲಾಗಿತ್ತು, ಆದರೆ ಕೇಂದ್ರ ಮತ್ತು ರಾಜ್ಯ ವಿಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.ಇಂದಿಗೂ ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್ ಧರಿಸುವುದು ಮುಂದುವರೆದಿದೆ. ಒಂದು ಸಮುದಾಯವು ನಂಬಿಕೆಯನ್ನು ಹೊಂದಿದ್ದರೆ, ಜಾತ್ಯತೀತ ನ್ಯಾಯವು ಈ ನಂಬಿಕೆಯನ್ನು ಒಪ್ಪಿಕೊಳ್ಳಬೇಕು. ಅವರು ಈ ನಿರ್ಧಾರವನ್ನು ತಡೆಹಿಡಿಯಬಾರದಿತ್ತು ಎಂದಿದ್ದಾರೆ ಕಾಮತ್.
ದಕ್ಷಿಣ ಆಫ್ರಿಕಾದಲ್ಲಿ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಕಾಮತ್, ಕೇರಳದ ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ತನ್ನ ಉಡುಪಿನೊಂದಿಗೆ ಮೂಗುತಿ (Nosering) ಧರಿಸಲು ಬಯಸಿದ್ದಳು. ಅಲ್ಲಿಯೂ ಅದೇ ವಿವಾದ ಹುಟ್ಟಿಕೊಂಡಿತು. ನಂತರ ನ್ಯಾಯಾಲಯವು ಮೂಗುತಿ ಧರಿಸುವುದು ಧಾರ್ಮಿಕ ನಂಬಿಕೆಯ ಭಾಗವಾಗಿರಬಾರದು, ಆದರೆ ಅದು ಗುರುತಿಗೆ ಸಂಬಂಧಿಸಿದೆ ಎಂದು ತೀರ್ಪು ನೀಡಿತು. ಹಾಗಾಗಿ ಅಲ್ಲಿನ ನ್ಯಾಯಾಲಯ ಮೂಗುತಿ ಧರಿಸಲು ಅನುಮತಿ ನೀಡಿತು.
ಮೂಗುತಿ ಮತ್ತು ಮಂಗಳಸೂತ್ರ ಧಾರ್ಮಿಕ ಆಚರಣೆಯ ಭಾಗ ಎಂದು ನ್ಯಾಯಾಲಯ ಹೇಳಿದೆ. ಇದು ನಂಬಿಕೆಯ ವಿಷಯ. ನಮ್ಮಂತೆ ಯಾವುದೇ ದೇಶದಲ್ಲಿ ವೈವಿಧ್ಯತೆ ಇಲ್ಲ, ಎಲ್ಲಾ ದೇಶಗಳು ಒಂದೇ ಕಾನೂನನ್ನು ಹೊಂದಿವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
Published On - 2:33 pm, Wed, 7 September 22