ಕಟ್ಟಡ ನೆಲಸಮ ನಿಷೇಧಿಸುವ ಆದೇಶ ಅಂಗೀಕರಿಸಲು ನಿರಾಕರಿಸಿದ ಸುಪ್ರೀಂಕೋರ್ಟ್​​

| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 2:03 PM

ವಕೀಲರಾದ ದುಷ್ಯಂತ್ ದವೆ ಮತ್ತು ಸಿಯು ಸಿಂಗ್ ಅವರು ಜಾಮಿಯತ್ ಉಲಮಾ ಇ ಹಿಂದ್ ಪರ ವಾದಿಸಿದ್ದು, ಇತರ ಸಮುದಾಯದಲ್ಲಿನ ಜನರನ್ನು ಆಯ್ಕೆ ಮಾಡಿ ಅವರ ಮನೆಗಳನ್ನು ಕೆಡವಲಾಗುತ್ತಿದೆ. ಮನೆಗಳನ್ನು ಕೆಡವುದಕ್ಕೆ ಮುನ್ಸಿಪಲ್ ಕಾರ್ಪೊರೇಷನ್ ನ್ನು ಬಳಸಿಕೊಳ್ಳುವುದು ಸರಿಯಲ್ಲ...

ಕಟ್ಟಡ ನೆಲಸಮ ನಿಷೇಧಿಸುವ ಆದೇಶ ಅಂಗೀಕರಿಸಲು ನಿರಾಕರಿಸಿದ ಸುಪ್ರೀಂಕೋರ್ಟ್​​
ಸುಪ್ರೀಂಕೋರ್ಟ್
Follow us on

ಉತ್ತರ ಪ್ರದೇಶದಾದ್ಯಂತ ಕಟ್ಟಡ ನೆಲಸಮ (demolitions )ನಿಷೇಧಿಸುವ ಆದೇಶ ಅಂಗೀಕರಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಈ ರೀತಿಯ ಕ್ರಮವು ಪುರಸಭೆಯ ಹಕ್ಕುಗಳನ್ನು ಮೊಟಕುಗೊಳಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಅಲ್ಪ ಸಂಖ್ಯಾತ ಸಮುದಾಯದ (minority community) ಸದಸ್ಯರನ್ನು ಗುರಿಯಾಗಿಸಿಕೊಂಡು ಕಟ್ಟಡ ನೆಲಸಮ ಮಾಡುತ್ತಿರುವ ಕ್ರಮ ವಿರುದ್ಧ ಮುಸ್ಲಿಂ ಸಂಸ್ಥೆ ಜಾಮಿಯತ್ ಉಲಮಾ ಇ ಹಿಂದ್ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಬುಧವಾರ ವಿಚಾರಣೆ ನಡೆಸಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರ್ಕಾರ, ಅತಿಕ್ರಮಣ ತೆರವು ಮಾಡುವುದಕ್ಕಾಗಿ ನೆಲಸಮ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ. ಅದೇ ವೇಳೆ ಮಧ್ಯ ಪ್ರದೇಶ ಮತ್ತು ಗುಜರಾತ್​​ನಲ್ಲಿ ನಡೆದ ಕಟ್ಟಡ ನೆಲಸಮ ಕ್ರಮಗಳ ಟೀಕೆ ವ್ಯಕ್ತವಾಗಿದ್ದು, ಈ ಬಗ್ಗೆ ಉತ್ತರಿಸುವಂತೆ ಈ ಸರ್ಕಾರಗಳಿಗೆ ಹೇಳಿದೆ. ವಕೀಲರಾದ ದುಷ್ಯಂತ್ ದವೆ ಮತ್ತು ಸಿಯು ಸಿಂಗ್ ಅವರು ಜಾಮಿಯತ್ ಉಲಮಾ ಇ ಹಿಂದ್ ಪರ ವಾದಿಸಿದ್ದು, ಇತರ ಸಮುದಾಯದಲ್ಲಿನ ಜನರನ್ನು ಆಯ್ಕೆ ಮಾಡಿ ಅವರ ಮನೆಗಳನ್ನು ಕೆಡವಲಾಗುತ್ತಿದೆ. ಮನೆಗಳನ್ನು ಕೆಡವುದಕ್ಕೆ ಮುನ್ಸಿಪಲ್ ಕಾರ್ಪೊರೇಷನ್ ನ್ನು ಬಳಸಿಕೊಳ್ಳುವುದು ಸರಿಯಲ್ಲ. ದೇಶದಲ್ಲಿ ಯಾವುದೇ ಕೋಮಗಲಭೆ ಉಂಟಾದರೂ ಮನೆ ಕೆಡವುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧವಾಗಿದ್ದು, ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜವರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಹರೀಶ್ ಸಾಳ್ವೆ, ಅರ್ಜಿದಾರರು ಹೇಳಿದಂತೆ ಅಲ್ಲಿ ಇತರ ಸಮುದಾಯ ಎಂಬುದು ಇಲ್ಲ. ಎಲ್ಲ ಸಮುದಾಯಗಳು ಭಾರತದ ಸಮುದಾಯಗಳೇ ಎಂದು ಹೇಳಿದ್ದಾರೆ.

ನೆಲಸಮ ಕ್ರಮ ಮತ್ತು ಗಲಭೆಗೆ ಯಾವುದೇ ಸಂಬಂಧವಿಲ್ಲ. ಗಲಭೆಗಳು ನಡೆಯುವುದಕ್ಕಿಂತ ಮುನ್ನವೇ ಅತಿಕ್ರಮಣ ತೆರವು ಕಾರ್ಯ ಆರಂಭಿಸಲಾಗಿದೆ. ಈ ಬಗ್ಗೆ ಅನಗತ್ಯ ಪ್ರಚಾರ ಮಾಡಬಾರದು ಎಂದು ಹೇಳಿದ್ದಾರೆ.
ನೆಲಸಮ ಕ್ರಮಗಳ ಬಗ್ಗೆ ನಿಷೇಧ ವಿಧಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದು, ಕಾನೂನು ಪಾಲನೆಯಾಗಬೇಕು ಎಂದು ಹೇಳಿದ್ದಾರೆ.ಆದರೆ ಗಲಭೆಯಲ್ಲಿ ಭಾಗಿಯಾಗಿರುವ ಆರೋಪಿಯನ್ನು ನ್ಯಾಯಾಲಯದ ಆದೇಶದಡಿಯಲ್ಲಿ ನೆಲಸಮ ಕ್ರಮದಿಂದ ರಕ್ಷಿಸಲಾಗುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ವಕೀಲರು ಹೇಳಿದ್ದಾರೆ.

ಇದನ್ನೂ ಓದಿ
ಸಿಎಂ ಶಿವರಾಜ್ ಸಿಂಗ್ ಚೌಹಾಣ್​ಗೆ ತಣ್ಣನೆ ಚಹಾ ನೀಡಿದ ಅಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ; ಆಮೇಲೇನಾಯ್ತು?
Karnataka Hijab Row: ಕರ್ನಾಟಕ ಹಿಜಾಬ್ ವಿವಾದ; ಮುಂದಿನ ವಾರ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ವಿಚಾರಣೆ
ಎಸಿಬಿ ಪ್ರಕರಣ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ
ಕಟ್ಟಡಗಳ ತೆರವು ಕಾನೂನು ಪ್ರಕಾರವೇ ನಡೆದಿದೆ: ಸುಪ್ರೀಂಗೆ ಯುಪಿ ಸರ್ಕಾರದ ಮಾಹಿತಿ