ಫೇಸ್‌ಬುಕ್​​​ ಹೋಲುವ ಯಾವುದೇ ಹೆಸರು ಬಳಸದಂತೆ ಬೆಂಗಳೂರು ಮೂಲದ ಫೇಸ್‌ಬೇಕ್​​​ಗೆ ಶಾಶ್ವತ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Jul 13, 2022 | 1:11 PM

ಫೇಸ್​​ಬುಕ್​​ಗೆ ಹೋಲುವ ಈ ಹೆಸರು ಬಳಸಿರುವುದರಿಂದ ಬಳಕೆದಾರರು ಫಿರ್ಯಾದಿಯೊಂದಿಗೆ ಕೆಲವು ರೀತಿಯ ಸಂಪರ್ಕವನ್ನು ಹೊಂದಿದೆ ಎಂದು ತೋರಿಸಬಹುದು. 'ಫೇಸ್‌ಬೇಕ್' ಬಳಕೆಯ ವಿರುದ್ಧ ಮಧ್ಯಂತರ ತಡೆಯಾಜ್ಞೆಯನ್ನು...

ಫೇಸ್‌ಬುಕ್​​​ ಹೋಲುವ ಯಾವುದೇ ಹೆಸರು ಬಳಸದಂತೆ ಬೆಂಗಳೂರು ಮೂಲದ ಫೇಸ್‌ಬೇಕ್​​​ಗೆ ಶಾಶ್ವತ ನಿರ್ಬಂಧ ವಿಧಿಸಿದ ದೆಹಲಿ ಹೈಕೋರ್ಟ್
ಫೇಸ್​​ಬುಕ್
Follow us on

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ (Facebook) ಹೋಲುವ ಯಾವುದೇ ಹೆಸರು ಬಳಸದಂತೆ ಬೆಂಗಳೂರು ಮೂಲದ ಸಿಹಿತಿನಿಸು ಅಂಗಡಿ ʼಫೇಸ್‌ಬೇಕ್‌ʼಗೆ (FaceBake) ದೆಹಲಿ ಹೈಕೋರ್ಟ್ (Delhi Court) ಶಾಶ್ವತ ನಿರ್ಬಂಧ ವಿಧಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆ ಮೆಟಾ ಈ ಅಂಗಡಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನವೀನ್ ಚಾವ್ಲಾ ಫೇಸ್ ಬುಕ್ ಖ್ಯಾತ ಟ್ರೇಡ್ ಮಾರ್ಕ್. ಇದರ ರೀತಿಯಲ್ಲೇ ನೌಫೆಲ್ ಮಲೊಲ್ ಎಂಬವರು ತಮ್ಮ ಅಂಗಡಿಗೆ ಫೇಸ್ ಬೇಕ್ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಅವರು ಈ ಹೆಸರಿನ ಲಾಭ ಪಡೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಫೇಸ್​​ಬುಕ್​​ಗೆ ಹೋಲುವ ಈ ಹೆಸರು ಬಳಸಿರುವುದರಿಂದ ಬಳಕೆದಾರರು ಫಿರ್ಯಾದಿಯೊಂದಿಗೆ ಕೆಲವು ರೀತಿಯ ಸಂಪರ್ಕವನ್ನು ಹೊಂದಿದೆ ಎಂದು ತೋರಿಸಬಹುದು. ‘ಫೇಸ್‌ಬೇಕ್’ ಬಳಕೆಯ ವಿರುದ್ಧ ಮಧ್ಯಂತರ ತಡೆಯಾಜ್ಞೆಯನ್ನು ಜಾರಿಗೊಳಿಸಿದ ನಂತರ, ಪ್ರತಿವಾದಿಯು ‘ಫೇಸ್‌ಕೇಕ್’ ಎಂದು ಗುರುತು ಬದಲಾಯಿಸಿ ಮೊಕದ್ದಮೆಯನ್ನು ಸಮರ್ಥಿಸದಿರಲು ನಿರ್ಧರಿಸಿದರು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ದೆಹಲಿ ನ್ಯಾಯಾಲಯವು ಪ್ರತಿವಾದಿಯ ವಾದವನ್ನೂ ಆಲಿಸಿ ಫೇಸ್‌ಬುಕ್‌ ಹೋಲುವ ಯಾವುದೇ ಹೆಸರು ಬಳಸದಂತೆ ನಿರ್ಬಂಧಿಸಿದೆ. ಅದೇ ವೇಳೆ ಈ ಪದವನ್ನು ಡೊಮೇನ್ ಹೆಸರಾಗಿ ಅಥವಾ ಇಮೇಲ್ ವಿಳಾಸವಾಗಿ ಬಳಸುವಂತಿಲ್ಲ. ಫೇಸ್ ಬುಕ್​​ನ್ನೇ ಹೋಲುವ ಯಾವುದೇ ದೃಶ್ಯ ಪ್ರಸ್ತುತ ಅಥವಾ ಯಾವುದೇ ಉತ್ಪನ್ನಗಳನ್ನು ನಿರ್ಬಂಧಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ನ್ಯಾಯಾಲಯವು ಪ್ರತಿವಾದಿಗೆ 50,000 ದಂಡವನ್ನೂ ವಿಧಿಸಿದೆ.