ದೆಹಲಿ: ದರೋಡೆಕೋರರು, ಶಾರ್ಪ್ಶೂಟರ್ಗಳು ಮತ್ತು ಅಪರಾಧಿಗಳಿಗೆ ಅನ್ವಯ ಆಗುವಂತೆ ಜಾಮೀನು ಅಲ್ಲ ಜೈಲು (bail not jail) ತತ್ವವನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್ಗಳಿಗೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ಅಪರಾಧದಲ್ಲಿ ಬಲಿಪಶುಗಳಾದ ಕುಟುಂಬ ಹಾಗೂ ಸಾಕ್ಷಿದಾರರಿಗೆ ಜಾಮೀನಿನ ಪರಿಣಾಮ ಬೀರಬಹುದು. ಹಾಗಾಗಿ ನ್ಯಾಯಾಧೀಶರ ಪೀಠದ ಮುಖ್ಯಸ್ಥರಾಗಿರುವ ಸಿಜೆಐ ಎಸ್ಎ ಬೊಬ್ಡೆ ಅವರ ನಿವೃತ್ತಿಯ ಸಮಯದಲ್ಲಿ ಅಜಮ್ಘರ್ ಗ್ಯಾಂಸ್ಟರ್ ದರೋಡೆಕೋರ ಅರುಣ್ ಯಾದವ್ಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿದ್ದಾರೆ. 15 ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ಎದುರಿಸಿದ ಯಾದವ್ ಸಿಂಗ್ ಅವರ ಜಾಮೀನನ್ನು ಪ್ರಶ್ನಿಸಿದೆ.
64 ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಒಳಗಾದ ವ್ಯಕ್ತಿಯ ಪ್ರಕರಣವನ್ನು ಉಲ್ಲೇಖಿಸಲಾಗಿದೆ. ಕೊಲೆ, ದೌರ್ಜನ್ಯ, ಕ್ರಿಮಿನಲ್ ಬೆದರಿಕೆ ಸುಲಿಗೆ ಮತ್ತು ದರೋಡೆಕೋರ ಕಾಯ್ದೆಯಡಿ, ಒಬ್ಬ ವ್ಯಕ್ತಿ 64 ಕೇಸ್ ಹಾಗೂ ದರೋಡೆ ಕೋರನಾಗಿರುತ್ತಾನೆ. ಆತ ಜಾಮೀನು ಸಿಕ್ಕಿದ ನಂತರ ಹೊರ ಬಂದಾಗ 8 ಪೊಲೀಸರನ್ನು ಕೊಲೆ ಮಾಡುತ್ತಾನೆ ಎಂಬ ಪ್ರಕರಣವನ್ನು ಎಸ್ಸಿ ನೆನಪಿಸಿಕೊಂಡು, ಪೊಲೀಸರು ಕೊಲ್ಲಲ್ಪಟ್ಟಿದ್ದಾರೆಂದು ಅರೋಪಿಸಲಾಗಿದೆ ಎಂಬುದನ್ನು ನ್ಯಾಯಪೀಠ ಗಮನಿಸಿದೆ.
ಹೆಚ್ಚು ಇಂತಹ ಪ್ರಕರಣಗಳನ್ನು ಕೂಲಂಕಷವಾಗಿ ಪರಿಹರಿಸಬೇಕು ಕೋರ್ಟ್ ಅವಶ್ಯವಾಗಿ ಇಂತಹ ಹಿನ್ನೆಲೆಯಿರುವಾಗ ಜಾಮೀನಿನ ಅವಧಿಯನ್ನು ವಿಸ್ತರಿಸಬಾರದು. ಇಂತಹ ದರೋಡೆಕೋರರಿಗೆ ಜಾಮೀನು ನೀಡುವುದರಿಂದ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚು. ಹಾಗೂ ಸಾಕ್ಷಿದಾರರ ಸಾಕ್ಷಿಗಳ ಪ್ರಭಾವದಿಂದಾಗಿ ನ್ಯಾಯ ನೀಡುವಲ್ಲಿ ವಿಫಲವಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಕೊವಿಡ್ ನಿರ್ವಹಣೆಯ ಸ್ವಯಂ ಪ್ರೇರಿತ ವಿಚಾರಣೆಯನ್ನು ಮುಂದೂಡಿದ ಸುಪ್ರೀಂ ಕೋರ್ಟ್
(Supreme Court Said Bail not Jail norm not for Gangsters)