ನವದೆಹಲಿ: ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಭಾರತದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎನ್ನುವ ಐತಿಹಾಸಿಕ ತೀರ್ಪು ನೀಡುವ ಮೂಲಕ ದೇಶದ ಸರ್ವೋಚ್ಛ ನ್ಯಾಯಾಲಯ ಸ್ಪೆಷಲ್ ಗಿಫ್ಟ್ ನೀಡಿದೆ.
ಹೌದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಇದೆ. ಪೋಷಕರು ಮೃತಪಟ್ಟಿದ್ದರೂ ಅವರಿಗೆ ಸಮಾನ ಆಸ್ತಿ ಕೊಡಬೇಕು ಎಂದು ಹಿಂದೂ ಉತ್ತರಾಧಿಕಾರಿ ಕಾಯ್ದೆ ಬಗ್ಗೆ ಮಹತ್ವದ ತೀರ್ಪು ನೀಡಿದೆ.
ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಿರುವ ನ್ಯಾಯಾಲಯ, ಈ ಕಾಯ್ದೆ ಜಾರಿಗೂ ಮುನ್ನವೇ ಪೋಷಕರು ಮೃತಪಟ್ಟಿದ್ದರೂ ಹೆಣ್ಣುಮಕ್ಕಳಿಗೆ ಸಮಾನ ಆಸ್ತಿ ಕೊಡಬೇಕು ಎಂದು ಹೇಳಿದೆ. 2005ರ ಸೆಪ್ಟೆಂಬರ್‌ನಲ್ಲಿ ಜಾರಿಯಾಗಿದ್ದ ತಿದ್ದುಪಡಿ ಕಾಯ್ದೆ ಪ್ರಕಾರ ಈಗ ಹೆಣ್ಣು ಮಕ್ಕಳು ಕೂಡಾ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುದಾರರಾಗುತ್ತಾರೆ.
ತೀರ್ಪು ನೀಡುವಾಗ ಹೆಣ್ಣು ಮಕ್ಕಳ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡಿರುವ ನ್ಯಾಯಮೂರ್ತಿ ಮಿಶ್ರಾ, ಮಗಳು ಮಗಳೇ. ಅವಳು ಜೀವನದುದ್ದಕ್ಕೂ ಪ್ರೀತಿಯ ಮಗಳಾಗಿರುತ್ತಾಳೆ ಎಂದಿದ್ದಾರೆ.
Supreme Court said that daughters will have the right over parental property even if the coparcener had died prior to the coming into force of the Hindu Succession (Amendment) Act, 2005. https://t.co/KibABSasCp
— ANI (@ANI) August 11, 2020