ಸುಪ್ರಿಯಾ ಸುಳೆ (Supriya Sule)ಎನ್‌ಸಿಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಸುಳೆ ಅವರ ತಂದೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ ನಂತರ ಮುಂದಿನ ಮುಖ್ಯಸ್ಥರು ಯಾರಾಗುತ್ತಾರೆ ಎಂಬುದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಸುಳೆ ಅವರೇ ಈ ಸ್ಥಾನ ತುಂಬುವ ಸಾಧ್ಯತೆ ಇದೆ ಎಂದು ಟಿವಿ9 ಭರತವರ್ಷ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ( Ajit Pawar) ಅವರು ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥರಾಗಿರುತ್ತಾರೆ ಎಂದು ಮೂಲಗಳು ಹೇಳಿವೆ.
ಪಕ್ಷವು ತನ್ನ ಮುಂದಿನ ದಾರಿಯನ್ನು ನಿರ್ಧರಿಸಲು ಹರಸಾಹಸ ಪಡುತ್ತಿರುವಂತೆಯೇ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮುಂಬೈನ ವೈ ಬಿ ಚವಾಣ್ ಸೆಂಟರ್ ನಲ್ಲಿ ಸಭೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಎನ್‌ಸಿಪಿ ಬೆಂಬಲಿಗರ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನೋಡಿದ ನಂತರ ಪವಾರ್ ಅವರು ತಮ್ಮ ರಾಜೀನಾಮೆಯನ್ನು ಮರುಪರಿಶೀಲಿಸಲು ಒಪ್ಪಿಕೊಂಡಿದ್ದು ಸ್ವಲ್ಪ ಸಮಯ ಕೋರಿದ್ದಾರೆ. ಆದರೆ ಅವರು ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿಲ್ಲ.
#SupriyaSule The New NCP Boss? Sources say she could replace #SharadPawar as #NCP chief & the new chief could be declared by the end of the day. #News9‘s @kirantare brings the latest on #MaharashtraPolitics. https://t.co/kkNoqbyRIe@AjitPawarSpeaks @supriya_sule @kabir_naqvi pic.twitter.com/fVHUvY3cR5
— News9 (@News9Tweets) May 3, 2023
ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅಜಿತ್ ಪವಾರ್ ಪಕ್ಷದ ಮಹಾರಾಷ್ಟ್ರ ಘಟಕವನ್ನು ಮುನ್ನಡೆಸಲಿದ್ದಾರೆ.
ಸುಳೆ ಮತ್ತು ಅಜಿತ್ ಅಲ್ಲದ ಪಕ್ಷದ ಮುಖಂಡರಾದ ಹಸನ್ ಮುಶ್ರೀಫ್, ಪ್ರಫುಲ್ ಪಟೇಲ್, ಪಿಸಿ ಚಾಕೊ, ನರಿಹರ್ ಜಿಲ್ವಾಲ್, ರೋಹಿತ್ ಪವಾರ್, ಛಗನ್ ಭುಜಬಲ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷ ಸ್ಥಾನ ತೊರೆಯುವುದಾಗಿ ಶರದ್ ಪವಾರ್ ನಿರ್ಧಾರ ವಿರೋಧಿಸಿ ಎನ್‌ಸಿಪಿಯ ಹಿರಿಯ ನಾಯಕ ರಾಜೀನಾಮೆ
ಸಭೆಯ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಜಿತೇಂದ್ರ ಅವ್ಹಾದ್ ಅವರು ತಮ್ಮ ಹಲವಾರು ಬೆಂಬಲಿಗರು ಮತ್ತು ಪಕ್ಷದ ಥಾಣೆ ವಿಭಾಗದ ಅಧಿಕಾರಿಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮುಂಬೈನಲ್ಲಿ ತಮ್ಮ ಆತ್ಮಚರಿತ್ರೆಯ ಬಿಡುಗಡೆಯ ಸಂದರ್ಭದಲ್ಲಿ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ 24 ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Wed, 3 May 23