AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hyderabad: ಪ್ರಪ್ರಥಮ ಬಾರಿಗೆ ಹೈದರಾಬಾದ್​ನಲ್ಲಿಅಸ್ತಿತ್ವಕ್ಕೆ ಬಂತು ನೀರಾ ಕೆಫೆ

ಹೈದರಾಬಾದ್​ನ ಹುಸೇನ್ ಸಾಗರ ನೆಕ್ಲೆಸ್ ರಸ್ತೆಯಲ್ಲಿರುವ ನೀರಾ ಕೆಫೆಯನ್ನು ತೆಲಂಗಾಣ ಸಚಿವ ವಿ. ಶ್ರೀನಿವಾಸ್ ಗೌಡ್ ಮತ್ತು ತಲಸಾನಿ ಶ್ರೀನಿವಾಸ್ ಯಾದವ್ ಬುಧವಾರ ಉದ್ಘಾಟಿಸಿದರು.

Hyderabad: ಪ್ರಪ್ರಥಮ ಬಾರಿಗೆ ಹೈದರಾಬಾದ್​ನಲ್ಲಿಅಸ್ತಿತ್ವಕ್ಕೆ ಬಂತು ನೀರಾ ಕೆಫೆ
ನೀರಾ ಕೆಫೆ ಉದ್ಘಾಟಿಸಿದ ಗಣ್ಯರು
ಗಂಗಾಧರ​ ಬ. ಸಾಬೋಜಿ
|

Updated on:May 03, 2023 | 9:18 PM

Share

ಹೈದರಾಬಾದ್: ನಗರದ ಹುಸೇನ್ ಸಾಗರ ನೆಕ್ಲೆಸ್ ರಸ್ತೆಯಲ್ಲಿರುವ ನೀರಾ ಕೆಫೆಯನ್ನು (Neera Cafe) ತೆಲಂಗಾಣ ಸಚಿವ ವಿ. ಶ್ರೀನಿವಾಸ್ ಗೌಡ್ ಮತ್ತು ತಲಸಾನಿ ಶ್ರೀನಿವಾಸ್ ಯಾದವ್ ಬುಧವಾರ ಉದ್ಘಾಟಿಸಿದರು. ಈ ನೀರಾ ಕೆಫೆಯನ್ನು ತೆಲಂಗಾಣ ಸರ್ಕಾರವು 13 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದೆ. ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಶ್ರೀನಿವಾಸ್ ಗೌಡ್​​, ನೀರಾ ಎಂದರೆ ಆಲ್ಕೋಹಾಲ್ ಎಂದು ಕೆಲವರಲ್ಲಿ ತಪ್ಪು ಮಾಹಿತಿ ಇದೆ. ನೀರಾ ಬಹು ಪೋಷಕಾಂಶಗಳಿಂದ ಕೂಡಿದೆ. ದೇಶದ ಯಾವುದೇ ರಾಜ್ಯದಲ್ಲಿ ಇಂತಹ ಕೆಫೆ ಇಲ್ಲ. ಇದು ಆತ್ಮಗೌರವದ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ತಾಳೆ ಮರಗಳಿಂದ ಸುತ್ತುವರೆದ ಕೆಫೆ

23 ಜುಲೈ 2020 ರಂದು ನೆಕ್ಲೆಸ್ ರಸ್ತೆಯಲ್ಲಿ ನೀರಾ ಕೆಫೆಗೆ ಅಡಿಪಾಯ ಹಾಕಲಾಗಿತ್ತು. ಇದು ಸಂಪೂರ್ಣವಾಗಿ ಸರ್ಕಾರದಿಂದ ನಡೆಸಲ್ಪಡುತ್ತಿದ್ದು, ರೆಸ್ಟೋರೆಂಟ್​ನಂತೆ ವಿನ್ಯಾಸಗೊಳಿಸಲಾಗಿದೆ. ನೆಲ ಮಹಡಿಯಲ್ಲಿ ಫುಡ್ ಕೋರ್ಟ್ ಇದ್ದರೆ, ಕೆಫೆ ಮೊದಲ ಮಹಡಿಯಲ್ಲಿದೆ. ಒಟ್ಟು ಏಳು ಮಳಿಗೆಗಳಿವೆ. ಒಂದೇ ಸಮಯದಲ್ಲಿ ಸುಮಾರು 300-500 ಜನರು ಕುಳಿತುಕೊಳ್ಳುವ ಸಾಮರ್ಥವನ್ನು ಹೊಂದಿದೆ. ವಿಶೇಷವೆಂದರೆ ಕೆಫೆಯೂ ತಾಳೆ ಮರಗಳಿಂದ ಸುತ್ತುವರೆದಿದ್ದು, ಛಾವಣಿಯು ತಾಳೆ ಮರದ ಆಕಾರದಲ್ಲಿದೆ.

ಇದನ್ನೂ ಓದಿ: ಕಿಂಗ್ ಚಾರ್ಲ್ಸ್ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ ಮುಂಬೈ ಡಬ್ಬಾವಾಲಾಗಳು; ಅವರು ಕೊಡುವ ಸ್ಪೆಷಲ್ ಗಿಫ್ಟ್ ಹೀಗಿದೆ

ತೆಲಂಗಾಣ ಸಂಸ್ಕೃತಿ ಪ್ರತಿನಿಧಿಸುವ ಉದ್ದೇಶ

ತೆಲಂಗಾಣ ಸಂಸ್ಕೃತಿಯನ್ನು ಪ್ರತಿನಿಧಿಸುವ ಉದ್ದೇಶ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ವಿಶಿಷ್ಟವಾದ ಕೆಫೆಯನ್ನು ಸ್ಥಾಪಿಸಲಾಗಿದೆ. ಸಾಮಾನ್ಯವಾಗಿ ತೆಲಂಗಾಣದಲ್ಲಿ ಜನರು ನೀರಾವನ್ನು ಸೇವಿಸುತ್ತಾರೆ. ಇದರಲ್ಲಿ ಮೆಗ್ನೀಸಿಮ್​, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪ್ರೊಟೀನ್​, ಸಕ್ಕರೆ ಮತ್ತು ವಿಟಮಿನ್​ ಸಿ ಇದ್ದು, ಆರೋಗ್ಯಕವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Supriya Sule: ಶರದ್ ಪವಾರ್ ರಾಜೀನಾಮೆ; ಸುಪ್ರಿಯಾ ಸುಳೆ ಎನ್‌ಸಿಪಿಯ ನೂತನ ಮುಖ್ಯಸ್ಥರಾಗುವ ಸಾಧ್ಯತೆ?

ನೀರಾವನ್ನು ಕಳ್ಳಿ ತಾಳೆಗಳಿಂದ ಬೇರ್ಪಡಿಸಲಾಗುತ್ತದೆ. ಅದರಲ್ಲಿಯೂ ಬೆಳಿಗ್ಗೆ 7 ಗಂಟೆಯ ಮೊದಲು ಹೊರತೆಗೆಯಲಾಗುತ್ತದೆ. ಬಳಿಕ ಕೆಲವು ಗಂಟೆಗಳ ಕಾಲ ಸಾಮಾನ್ಯ ತಾಪಮಾನ ಹೊಂದಿರುವ ಕೋಣೆಯಲ್ಲಿ ಇರಿಸಲಾಗುತ್ತದೆ. ಬಳಿಕ ಇದು ಕಳ್ಳಿಯಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:17 pm, Wed, 3 May 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ