ತಿರುವನಂತಪುರಂ: ಕೇರಳದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಮೇ 8ರಿಂದ 16ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಶನಿವಾರ (ಮೇ8) ಬೆಳಗ್ಗೆ 6 ಗಂಟೆಯಿಂದ ಲಾಕ್‌ಡೌನ್ ಆರಂಭವಾಗಲಿದೆ. ನಂತರದ 9 ದಿನಗಳ ಕಾಲ ಕೇರಳ ರಾಜ್ಯವಿಡೀ ಬಂದ್ ಆಗಲಿದೆ. ಕೊವಿಡ್ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಸೋಂಕು ನಿಯಂತ್ರಣ ಅತೀತವಾಗಿದೆ. ಕಳೆದ ಒಂದು ವಾರಗಳಲ್ಲಿ ಕೇರಳದಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ.
ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳು ಮಾತ್ರ ತೆರೆಯಲಿವೆ. ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಇದನ್ನು ತೆರೆಯಲು ಅನುಮತಿ ಇದೆ. ಆಸ್ಪತ್ರೆ, ಕೊವಿಡ್ ಚಿಕಿತ್ಸಾ ಕೇಂದ್ರ ಮೊದಲಾದವುಗಳು ತೆರೆದಿರಲಿವೆ.
ಈಗಿರುವ ಮಿನಿ ಲಾಕ್ಡೌನ್ನಿಂದಾಗಿ ಯಾವುದೇ ಪ್ರಯೋಜನವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮಿನಿ ಲಾಕ್ ಡೌನ್ ಹೇರಿದ್ದರೂ ಜನರು ಮನೆಯಿಂದಾಚೆ ಹೊರಬರುತ್ತಿದ್ದುದರಿಂದ ಕಠಿಣ ಕ್ರಮಗಗೊಂದಿಗೆ ಸಂಪೂರ್ಣಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ಪ್ರತಿದಿನ ಕೊವಿಡ್ ಪ್ರಕರಣಗಳು ಅತೀ ಹೆಚ್ಚು ಪತ್ತೆಯಾಗುವ ಮೂರನೇ ರಾಜ್ಯವಾಗಿದೆ. ಕೇರಳ.ಕಳೆದ 24 ಗಂಟೆಗಳಲ್ಲಿ ಇಲ್ಲಿ 41,953 ಮಂದಿಗೆ ಕೊವಿಡ್ ದೃಢಪಟ್ಟಿದೆ. ಪಾಸಿಟಿವಿಟಿ ದರ 25.69 ಆಗಿದೆ.
ಸಂಪೂರ್ಣ ಲಾಕ್‌ಡೌನ್ ಜಾರಿ ಅನಿವಾರ್ಯ ಎಂದಾದರೆ ಮಾತ್ರ ಸಂಪೂರ್ಣ ಲಾಕ್‌ಡೌನ್ ಮಾಡಲಾಗುವುದು ತಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಆದರೆ ಕೊವಿಡ್ ಪ್ರಕರಣಗಳ ಸಂಖ್ಯೆ 40,000 ದಾಟಿದೆ. ಹಾಗಾಗಿ ಲಾಕ್‌ಡೌನ್ ಅನಿವಾರ್ಯ ಎಂದಬ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ
Lockdown to be imposed in the state from 6 am on May 8 to May 16, in wake of the surge in COVID-19 cases in the second wave: Kerala CM Pinarayi Vijayan
(file photo) pic.twitter.com/16N1wY47It
— ANI (@ANI) May 6, 2021
ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಮಿನಿಲಾಕ್‌ಡೌನ್ ಮೂಲಕ ನಿಯಂತ್ರಣಗಳನ್ನು ಬಿಗಿಗೊಳಿಸಬೇಕೆಂದು ಸರ್ಕಾರ ಆಶಿಸಿತ್ತು. ಆದರೆ ಮಂಗಳವಾರ ಪ್ರಾರಂಭವಾದ ಮಿನಿಲಾಕ್‌ಡೌನ್ ಗಮನಾರ್ಹ ಫಲಿತಾಂಶವನ್ನು ಕಾಣಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 80 ಪ್ರತಿಶತ ಜನರು ಅನಗತ್ಯ ಸಂಚಾರ ಮಾಡುತ್ತಾರೆ. ವಿಚಾರಿಸಿದರೆ ಕ್ಷಮೆ ಕೇಳುತ್ತಾರೆ ಅಂತಾರೆ ಪೊಲೀಸರು.
ರಾಜ್ಯದ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ಹಸ್ತಾಂತರಿಸಿದ ನಂತರ ಸಂಪೂರ್ಣ ಲಾಕ್‌ಡೌನ್ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ವಾರ ಪ್ರಕರಣಗಳು ಹೆಚ್ಚಾಗಲಿವೆ ಮತ್ತು ಅದು ನಿರ್ಣಾಯಕವಾಗಿದೆ ಎಂದು ತಜ್ಞರ ಸಮಿತಿಯ ವರದಿಯನ್ನು ಸ್ವೀಕರಿಸಿದ ನಂತರ ರಾಜ್ಯವು ಸಂಪೂರ್ಣ ಲಾಕ್‌ಡೌನ್‌ಗೆ ನಿರ್ಧಾರ ಕೈಗೊಂಡಿದೆ.ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ರೈಲ್ವೆ ಹೆಚ್ಚಿನ ಸೇವೆಗಳನ್ನು ರದ್ದುಗೊಳಿಸಿದೆ. ಲಾಕ್‌ಡೌನ್ ಘೋಷಣೆಯೊಂದಿಗೆ, ಪ್ರಯಾಣಿಕರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ 30 ರೈಲುಗಳನ್ನು ರದ್ದುಪಡಿಸಲಾಗಿದೆ.
ಈ ಹಿಂದೆ, ಕೇಂದ್ರ ಆರೋಗ್ಯ ಸಚಿವಾಲಯವು ಕೊವಿಡ್ ಪಾಸಿಟಿವಿಟಿ ಪ್ರಮಾಣವು ಶೇಕಡಾ 15 ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ಪ್ರಸ್ತಾಪಿಸಿತ್ತು. ಈ ಹಂತದಲ್ಲಿ, ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇಕಡಾ 15 ರಿಂದ 20 ರಷ್ಟಿತ್ತು. ಸಾರ್ವಜನಿಕ ಜೀವನದ ಮೇಲಿನ ಲಾಕ್‌ಡೌನ್ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹಿಂದಿನ ಎಲ್ಲಾ ಪಕ್ಷದ ಸಭೆಯಲ್ಲಿ ಎಲ್ಲಾ ಪಕ್ಷಗಳು ಪೂರ್ಣ ಲಾಕ್‌ಡೌನ್ ಅನ್ನು ವಿರೋಧಿಸಿದ ನಂತರ ಮಿನಿಲಾಕ್‌ಡೌನ್ ಘೋಷಿಸಲಾಯಿತು.
( Surge of new coronavirus infections Kerala government announces Lockdown in Kerala from May 8 to 16)
ಇದನ್ನೂ ಓದಿ: Coronavirus India Update: ಭಾರತದಲ್ಲಿ 4.12 ಲಕ್ಷ ಹೊಸ ಕೊವಿಡ್ ಪ್ರಕರಣ ಪತ್ತೆ, 3980 ಮಂದಿ ಸಾವು
Published On - 12:38 pm, Thu, 6 May 21