AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2008 Malegaon Blast Case: ಮಾಲೆಗಾಂವ್ ಸ್ಫೋಟ ಪ್ರಕರಣ, ಪ್ರಜ್ಞಾ ಠಾಕೂರ್ ಸೇರಿ ಎಲ್ಲರೂ ಖುಲಾಸೆ

Malegaon Blast Case verdict: ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದ್ದು, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್​ ಅವರನ್ನು ಖುಲಾಸೆಗೊಳಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೇಗಾಂವ್ ನಗರದಲ್ಲಿ 17 ವರ್ಷಗಳ ಹಿಂದೆ ನಡೆದ, ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (55) ಮತ್ತು ಸೇವೆ ಸಲ್ಲಿಸುತ್ತಿರುವ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (53) ಸೇರಿದಂತೆ ಹಲವು ಆರೋಪಿಗಳ ಹೆಸರು ಈ ಪ್ರಕರಣದಲ್ಲಿತ್ತು.

2008 Malegaon Blast Case: ಮಾಲೆಗಾಂವ್ ಸ್ಫೋಟ ಪ್ರಕರಣ, ಪ್ರಜ್ಞಾ ಠಾಕೂರ್ ಸೇರಿ ಎಲ್ಲರೂ ಖುಲಾಸೆ
ಪ್ರಜ್ಞಾ
ನಯನಾ ರಾಜೀವ್
|

Updated on:Jul 31, 2025 | 12:18 PM

Share

ಮಹಾರಾಷ್ಟ್ರ, ಜುಲೈ 31:   ಮಾಲೆಗಾಂವ್ ಸ್ಫೋಟ(Malegaon Blast) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಇಂದು ತೀರ್ಪು ಪ್ರಕಟಿಸಿದ್ದು, ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಠಾಕೂರ್ ಸೇರಿ ಎಲ್ಲಾ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೆಗಾಂವ್ ನಗರದಲ್ಲಿ 17 ವರ್ಷಗಳ ಹಿಂದೆ ನಡೆದ, ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಕೇವಲ ಅನಮಾನ ಮಾತ್ರವಿದ್ದರೆ ಸಾಲದು ಸಾಕ್ಷ್ಯಗಳು ಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (55) ಮತ್ತು ಸೇವೆ ಸಲ್ಲಿಸುತ್ತಿರುವ ಸೇನಾ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (53) ಸೇರಿದಂತೆ ಹಲವು ಆರೋಪಿಗಳ ಹೆಸರು ಈ ಪ್ರಕರಣದಲ್ಲಿತ್ತು. ಎಲ್ಲಾ ಏಳು ಮಂದಿಯನ್ನು ಖುಲಾಸೆಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 29, 2008 ರಂದು ರಂಜಾನ್ ತಿಂಗಳಿನಲ್ಲಿ ಮಾಲೆಗಾಂವ್‌ನ ಮುಸ್ಲಿಂ ಏರಿಯಾದಲ್ಲಿ ಈ ಪ್ರಕರಣ ಸಂಭವಿಸಿತ್ತು.

2008 ರ ಮಾಲೆಗಾಂವ್ ಸ್ಫೋಟದಲ್ಲಿ ನ್ಯಾಯಾಲಯದ ತೀರ್ಪು ಗುರುವಾರ ಬಂದಿದೆ. ಎನ್​​ಐಎ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.ಇದರಲ್ಲಿ ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ 7 ಜನರು ಸೇರಿದ್ದಾರೆ. 2008 ರ ಮಾಲೆಗಾಂವ್ ಸ್ಫೋಟದಲ್ಲಿ ಆರು ಜನರು ಸಾವನ್ನಪ್ಪಿದರು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಸಾಧ್ವಿ ಪ್ರಜ್ಞಾ ಸಿಂಗ್ ಅವರಲ್ಲದೆ, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಸೇರಿದಂತೆ ಏಳು ಆರೋಪಿಗಳ ವಿರುದ್ಧ ಯುಎಪಿಎ ಅಂದರೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಈ ಪ್ರಕರಣದ ಇತರ ಆರೋಪಿಗಳು.

ವಿಶೇಷವೆಂದರೆ ಮಾಲೆಗಾಂವ್ ಸ್ಫೋಟದ ತನಿಖೆಯನ್ನು ಆರಂಭದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ ವಹಿಸಲಾಗಿತ್ತು, ಆದರೆ ನಂತರ ಅದನ್ನು ಎನ್​ಐಎ ಅಂದರೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಸ್ಫೋಟಕ್ಕೆ ಬಳಸಲಾದ ವಾಹನವನ್ನು ಠಾಕೂರ್ ಒದಗಿಸಿದ್ದಾರೆ ಎಂದು ಎಟಿಎಸ್ ಆರೋಪಿಸಿತ್ತು.

ವಾಹನವನ್ನು ಠಾಕೂರ್ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಎಟಿಎಸ್ ಹೇಳಿದೆ. 2018 ರಲ್ಲಿ ಪ್ರಾರಂಭವಾದ ಈ ಘಟನೆಗೆ ಸಂಬಂಧಿಸಿದ ವಿಚಾರಣೆ ಏಪ್ರಿಲ್ 19, 2025 ರಂದು ಕೊನೆಗೊಂಡಿತು. ನ್ಯಾಯಾಲಯವು ಪ್ರಕರಣವನ್ನು ತೀರ್ಪಿಗಾಗಿ ಕಾಯ್ದಿರಿಸಿತ್ತು.

ಘಟನೆ ಹಿನ್ನೆಲೆ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯಲ್ಲಿ ಮಾಲೆಗಾಂವ್‌ನ ಮುಸ್ಲಿಂ ಏರಿಯಾದಲ್ಲಿ ಮಸೀದಿಯ ಬಳಿ ಬೈಕ್​​ನಲ್ಲಿದ್ದ ಸ್ಫೋಟಕ ಸಾಧನವು ಸ್ಫೋಟಗೊಂಡಿತ್ತು, ಇದರ ಪರಿಣಾಮವಾಗಿ ಆರು ಜನರು ಸಾವನ್ನಪ್ಪಿದ್ದರು,  ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಂಜಾನ್ ತಿಂಗಳಲ್ಲಿ ಸ್ಫೋಟ ಸಂಭವಿಸಿತ್ತು. ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ATS) ಆರಂಭದಲ್ಲಿ ತನಿಖೆಯ ನೇತೃತ್ವ ವಹಿಸಿತ್ತು, ಮೋಟಾರ್ ಸೈಕಲ್‌ನ ಮಾಲೀಕತ್ವವನ್ನು ತ್ವರಿತವಾಗಿ ಪತ್ತೆಹಚ್ಚಿ, ಹಲವರನ್ನು ಬಂಧಿಸಲಾಗಿತ್ತು. 2011 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆಯನ್ನು ವಹಿಸಿಕೊಂಡಾಗ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:41 am, Thu, 31 July 25

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!