ಹೈದರಾಬಾದ್: ಕೋಟಿಕೋಟಿ ಭಕ್ತರಿರುವ ತಿಮ್ಮಪ್ಪನ ಆಸ್ಥಾನ ಎಂದರೆ ಭಯ, ಭಕ್ತಿ ಜೊತೆಗೆ ಶದ್ಧೆಯೂ ಹೆಚ್ಚು. ಇಂತಹ ಕಟ್ಟುನಿಟ್ಟಿನ ಜಾಗದಲ್ಲೇ ಕೆಲ ನೀಚರು ಆಶ್ಲೀಲ ವರ್ತನೆ ತೋರಿದ್ದಾರೆ. ಇದ್ರ ಬೆನ್ನುಬಿದ್ದು ತನಿಖೆ ನಡೆಸಿದ ಟಿಟಿಡಿ ಅಧಿಕಾರಿಗಳಿಗೆ ಶಾಕ್ ಸಿಕ್ಕಿದೆ. ಹಾಗಾದ್ರೆ ಅಲ್ಲಿ ನಡೆದಿದ್ದಾದ್ರೂ ಏನು..? ಈ ಸ್ಟೋರಿ ಓದಿ.
ಆಂಧ್ರದ ‘ತಿರುಪತಿ ತಿರುಮಲ ದೇವಸ್ಥಾನ ಸಮಿತಿ’ ವತಿಯಿಂದ 2008ರಲ್ಲಿ ಶ್ರೀ ವೆಂಕಟೇಶ್ವರ ಭಕ್ತಿ ಚಾನಲ್ ಆರಂಭಿಸಲಾಗಿತ್ತು. ತಿರುಮಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಜನರಿಗೆ ಪರಿಚಯಿಸಲು, ಧಾರ್ಮಿಕ ಪ್ರಜ್ಞೆ ಬೆಳೆಸಲು ಎಸ್ವಿಬಿಸಿ ಚಾನೆಲ್ ಆರಂಭವಾಗಿತ್ತು. ಆದ್ರೆ ‘ಎಸ್ವಿಬಿಸಿ’ಯ ಉದ್ಯೋಗಿಗಳು ಮಾತ್ರ ಗುರಿಮರೆತು ಕಾನೂನು ಬಾಹಿರ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಭಕ್ತರಿಗೆ ಅಶ್ಲೀಲ ವೆಬ್ ಲಿಂಕ್ ಕಳಿಸಿದ ಸಿಬ್ಬಂದಿ!
SVBC ವಾಹಿನಿಯಲ್ಲಿ ನಡೆದಿತ್ತು ಎನ್ನಲಾಗಿರುವ ಹಣ ದುರುಪಯೋಗ, ಅಕ್ರಮ ನೇಮಕಾತಿ, ಉದ್ಯೋಗಿಗಳ ಗುಂಪುಗಾರಿಕೆ ಹಾಗೂ ಇನ್ನಿತರ ಸಂಗತಿಗಳ ಹೊರತಾಗಿ ಮತ್ತೊಂದು ಗಂಭೀರ ಆರೋಪ ಈಗ ಕೇಳಿಬಂದಿದೆ. ಸಿಬ್ಬಂದಿ ಮಾಡಿರುವ ಕೃತ್ಯದ ಬಗ್ಗೆ ಟಿಟಿಡಿ ಗಂಭೀರ ಆಲೋಚನೆ ಮಾಡುತ್ತಿದ್ದು, ಕಠಿಣ ಕ್ರಮದ ಭರವಸೆಯನ್ನೂ ನೀಡಿದೆ.
ಒಟ್ನಲ್ಲಿ ದೇವರ ಸೇವೆ ಮಾಡಬೇಕಾದ ಸಿಬ್ಬಂದಿ ಮಾಡಬಾರದ್ದನ್ನ ಮಾಡಿ ಲಾಕ್ ಆಗಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆ ಇದೆ. ಇಲ್ಲವಾದರೆ ತಿಮ್ಮಪ್ಪನ ಕೋಟ್ಯಂತರ ಭಕ್ತರ ಕೋಪಕ್ಕೆ SVBC ವಾಹಿನಿ ತುತ್ತಾರಿಗೋದು ಗ್ಯಾರಂಟಿ.