ದೆಹಲಿ, ಸೆಪ್ಟೆಂಬರ್ 30: ಸ್ವಚ್ಛ ಭಾರತ್ ಮಿಷನ್‌ನ 9ನೇ ವಾರ್ಷಿಕೋತ್ಸವವನ್ನು ಕೇಂದ್ರ ಸರ್ಕಾರ ಆಚರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕೆಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸ್ವಚ್ಛತಾ ಹಿ ಸೇವಾ (Swachhta Hi Seva) ಕಾರ್ಯಕ್ರಮದ ಭಾಗವಾಗಿ ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಎಂಬ ಅಭಿಯಾನಕ್ಕೆ ಸಜ್ಜಾಗಿದೆ. ಅಕ್ಟೋಬರ್ 1, 2023 ರಂದು ಬೆಳಿಗ್ಗೆ 10 ಗಂಟೆಯಿಂದ ಒಂದು ಗಂಟೆ ಕಾಲ ಸೇವಾ ಕಾರ್ಯ ನಡೆಯಲಿದ್ದು, ಭಾರತದಾದ್ಯಂತ ಸ್ವಚ್ಛತೆ ಮತ್ತು ನೈರ್ಮಲ್ಯದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿಯಾಗಲಿದ್ದಾರೆ.
ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಅಂಗವಾಗಿ ‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನವನ್ನು ಅಕ್ಟೋಬರ್ 1 ರಂದು ನಡೆಯಲಿದೆ. ಡಾ. ಜಿ.ಸಿ. ನಾರಂಗ್ ಮಾರ್ಗ ಎದುರುಗಡೆ ಗಾಂಧಿ
ಭವನ್ ನಾರ್ತ್ ಮತ್ತು ಶ್ರೇಯಾ ಮಿಶ್ರಾ ಮಾರ್ಗ, ಪಟೇಲ್ ಚೆಸ್ಟ್ ನಾರ್ತ್ ಕ್ಯಾಂಪಸ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಸೇವಾ ಕಾರ್ಯ ಆಯೋಜಿಸಿದ್ದು, ಸಚಿವ ಧರ್ಮೇಂದ್ರ ಪ್ರಧಾನ್ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಒಂದು ವಾರದ ‘ಸಂಕಲ್ಪ ಸಪ್ತಾಹ’ಕ್ಕೆ ಪ್ರಧಾನಿ ಮೋದಿ ಚಾಲನೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:55 pm, Sat, 30 September 23