ಒಂದು ವಾರದ ‘ಸಂಕಲ್ಪ ಸಪ್ತಾಹ’ಕ್ಕೆ ಪ್ರಧಾನಿ ಮೋದಿ ಚಾಲನೆ
Sankalp Saptaah: ಉತ್ತಮ ಆಡಳಿತ ನಡೆಸುವುದು ಎಂದರ ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಎಂದು ಮೋದಿ ಹೇಳಿದ್ದು, ಸಂಪನ್ಮೂಲಗಳ ಸಮಾನ ಹಂಚಿಕೆಗೆ ಒತ್ತು ನೀಡಿದರು. 'ಸಂಕಲ್ಪ್ ಸಪ್ತಾಹ್' ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದೆ. ಜನವರಿ 7 ರಂದು ಪ್ರಧಾನಿ ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ದೆಹಲಿ ಸೆಪ್ಟೆಂಬರ್ 30: ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ದೇಶದ 112 ಜಿಲ್ಲೆಗಳ 25 ಕೋಟಿಗೂ ಹೆಚ್ಚು ಜನರ ಜೀವನವನ್ನು ಬದಲಿಸಿದೆ. ಅದರ ಯಶಸ್ಸು ಈಗ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಆಧಾರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಶನಿವಾರ ಹೇಳಿದ್ದಾರೆ. ಇಲ್ಲಿನ ಭಾರತ ಮಂಟಪದಲ್ಲಿ (Bharat Mandapam) ‘ಸಂಕಲ್ಪ ಸಪ್ತಾಹ್’ (Sankalp Saptaah)ಎಂಬ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಿಗಾಗಿ ಒಂದು ವಾರದ ಅವಧಿಯ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಈ ಹೇಳಿಕೆಯನ್ನು ನೀಡಿದ್ದಾರೆ.
ಮೂಲ ಮಟ್ಟದಲ್ಲಿ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಒಮ್ಮುಖ ಮತ್ತು ಸಾರ್ವಜನಿಕ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಪ್ರಧಾನ ಮಂತ್ರಿ ಒತ್ತಿ ಹೇಳಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮವು ದೇಶದ 112 ಜಿಲ್ಲೆಗಳಲ್ಲಿ 25 ಕೋಟಿಗೂ ಹೆಚ್ಚು ಜನರ ಜೀವನವನ್ನು ಬದಲಾಯಿಸಿದೆ. ಅವರ ಜೀವನದ ಗುಣಮಟ್ಟದಲ್ಲಿ ಬದಲಾವಣೆಯಾಗಿದೆ ಎಂದಿದ್ದಾರೆ ಮೋದಿ.
ಈಗ, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸು ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಆಧಾರವಾಗಿದೆ ಎಂದು ಅವರು ಹೇಳಿದರು.
VIDEO | “If focus remains on the basic thing of good governance, then challenging targets can also be achieved,” says PM Modi in his address at the launch of ‘Sankalp Saptaah’ programme in Delhi.
(Source: Third Party) pic.twitter.com/Jg2LXrR1Aq
— Press Trust of India (@PTI_News) September 30, 2023
ನನಗೆ ಸಿಕ್ಕಿದಂತೆ ಇಷ್ಟೊಂದು ಕಾಲ ಸರ್ಕಾರವನ್ನು ನಡೆಸುವ ಅವಕಾಶ ಕೆಲವೇ ಜನರಿಗೆ ಸಿಗುತ್ತದೆ. ನಾನು ಅನುಭವದಿಂದ ಹೇಳುತ್ತೇನೆ. ಬಜೆಟ್ ಬದಲಾವಣೆಯನ್ನು ತರುತ್ತದೆ ಮಾತ್ರವಲ್ಲ, ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಮತ್ತು ಒಮ್ಮುಖವನ್ನು ನಾವು ಖಚಿತಪಡಿಸಿಕೊಂಡರೆ, ಬ್ಲಾಕ್‌ಗಳಿಗೆ ಯಾವುದೇ ಹೊಸ ಹಣ ಬರದೆ ಕೆಲಸ ಮಾಡಬಹುದು ಎಂದು ಮೋದಿ ಹೇಳಿದರು.
ಉತ್ತಮ ಆಡಳಿತ ನಡೆಸುವುದು ಎಂದರ ಸಂಪನ್ಮೂಲಗಳ ಅತ್ಯುತ್ತಮ ಬಳಕೆ ಎಂದು ಅವರು ಹೇಳಿದ್ದು, ಸಂಪನ್ಮೂಲಗಳ ಸಮಾನ ಹಂಚಿಕೆಗೆ ಒತ್ತು ನೀಡಿದರು. ‘ಸಂಕಲ್ಪ್ ಸಪ್ತಾಹ್’ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದೆ. ಜನವರಿ 7 ರಂದು ಪ್ರಧಾನಿ ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಕಾರ್ಯಕ್ರಮವು ನಾಗರಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಬ್ಲಾಕ್ ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ದೇಶದ 329 ಜಿಲ್ಲೆಗಳಲ್ಲಿ 500 ಮಹತ್ವಾಕಾಂಕ್ಷೆಯ ಬ್ಲಾಕ್‌ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಅಕ್ಟೋಬರ್ 3 ರಿಂದ ಅಕ್ಟೋಬರ್ 9 ರವರೆಗೆ ‘ಸಂಕಲ್ಪ್ ಸಪ್ತಾಹ್’ ನ ಪ್ರತಿ ದಿನವು ಒಂದು ನಿರ್ದಿಷ್ಟ ಅಭಿವೃದ್ಧಿ ವಿಷಯಕ್ಕೆ ಮೀಸಲಾಗಿರುತ್ತದೆ, ಅದರ ಮೇಲೆ ಎಲ್ಲಾ ಮಹತ್ವಾಕಾಂಕ್ಷೆಯ ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: ಆರು ದಿನ, 8 ರ‍್ಯಾಲಿಗಳು: ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಮೋದಿ ಪ್ರಚಾರ ಕಾರ್ಯಕ್ರಮ ಹೀಗಿದೆ
ಅಧಿಕೃತ ಹೇಳಿಕೆಯ ಪ್ರಕಾರ ಮೊದಲ ಆರು ದಿನಗಳ ‘ಸಂಪೂರ್ಣ ಸ್ವಾಸ್ಥ್ಯ’, ‘ಸುಪೋಷಿತ್ ಪರಿವಾರ’, ‘ಸ್ವಚ್ಛತಾ’, ‘ಕೃಷಿ’, ‘ಶಿಕ್ಷಾ’ ಮತ್ತು ‘ಸಮೃದ್ಧಿ ದಿವಸ್’ ಎಂಬ ಥೀಮ್ ಇಟ್ಟುಕೊಂಡಿವೆ. ಕೊನೆಯ ದಿನ ಅಕ್ಟೋಬರ್ 9ರಂದು ‘ಸಂಕಲ್ಪ ಸಪ್ತಾಹ್ ಸಮಾವೇಶ ಸಮಾರೋಪ’ ಕಾರ್ಯವನ್ನು ಆಚರಿಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ