2008ರ ನವೆಂಬರ್ 26 , ಆ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ದಿನವನ್ನು ನೆನೆಸಿಕೊಂಡರೆ ಭಾರತೀಯರು ಇಂದಿಗೂ ನಡುಗುತ್ತಾರೆ. ಇತಿಹಾಸದಲ್ಲೇ ಅತಿ ದೊಡ್ಡ ಭಯೋತ್ಪಾದಕ ದಾಳಿ ನಡೆದಿತ್ತು, ಮುಂಬೈನ ತಾಜ್ ಹೋಟೆಲ್(Taj Hotel) ಸ್ಫೋಟಗೊಂಡಿತ್ತು, ದಾಳಿಯಲ್ಲಿ 18 ಮಂದಿ ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಪ್ರಾಣ ಕಳೆದುಕೊಂಡಿದ್ದರು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅದೇ ತಾಜ್ ಹೋಟೆಲ್ಅನ್ನು ಮತ್ತೆ ಸ್ಫೋಟಿಸುವುದಾಗಿ ಮುಂಬೈ ಪೊಲೀಸರಿಗೆ ಅನಾಮಧೇಯ ಕರೆ ಬಂದಿದ್ದು, ಮತ್ತೆ ಆತಂಕ ಹೆಚ್ಚಿದೆ.
ಇಬ್ಬರು ಪಾಕಿಸ್ತಾನಿಗಳು ತಾಜ್ ಹೋಟೆಲ್ನ್ನು ಸ್ಫೋಟಿಸಲಿದ್ದಾರೆ ಎಂದು ಬೆದರಿಕೆ ಕರೆ ಬಂದಿದೆ. ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿ ನಗರದ ಹೆಗ್ಗುರುತಾಗಿರುವ ಹೋಟೆಲ್ ಅನ್ನು ಸ್ಫೋಟಿಸುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಕರೆ ಮಾಡಿದ ವ್ಯಕ್ತಿ ತನ್ನನ್ನು ಮುಖೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ.
ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್, ಉತ್ತರ ಪ್ರದೇಶದ ಗೊಂಡಾ ಮೂಲದ 35 ವರ್ಷದ ವ್ಯಕ್ತಿಯಾಗಿದ್ದು, ಪ್ರಸ್ತುತ ಸಾಂತಾಕ್ರೂಜ್‌ನಲ್ಲಿ ನೆಲೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ 2008ರಲ್ಲಿ ನಗರದಲ್ಲಿ ನಡೆದ ಉಗ್ರರ ದಾಳಿಗೆ ಗುರಿಯಾಗಿತ್ತು. ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಬೆದರಿಕೆ ಕರೆಗಳು ಬಂದಿದ್ದವು.
ಮತ್ತಷ್ಟು ಓದಿ: Mumbai Attack: 26/11 ದಾಳಿಯಲ್ಲಿ ನಾನು ಎಲ್ಲವನ್ನೂ ಕಳೆದುಕೊಂಡೆ: ಕರಂಬಿರ್ ಕಾಂಗ್
2008 ನವೆಂಬರ್ 26 ಪಾಕಿಸ್ತಾನದ 10 ಉಗ್ರರು ಕನಸಿನ ನಗರಿ ಮುಂಬೈಗೆ ಕಾಲಿಟ್ಟ ದಿನವಿದು. ಆ ಸಂಜೆಯೂ ಪ್ರತಿದಿನದಂತೆಯೇ ಇತ್ತು.
ಎಲ್ಲರೂ ಅವರವರ ಕೆಲಸದಲ್ಲಿ ಮಗ್ನರಾಗಿದ್ದರು,ಮಾರುಕಟ್ಟೆಗಳಲ್ಲಿ ಚಟುವಟಿಕೆ ಇತ್ತು, ಜನರು ಶಾಪಿಂಗ್ ಮಾಡುತ್ತಿದ್ದರು. ಮರೈನ್ ಡ್ರೈವ್‌ನಲ್ಲಿ ಜನರು ಸಮುದ್ರದಿಂದ ಬರುವ ತಂಪಾದ ಗಾಳಿಯನ್ನು ಆನಂದಿಸುತ್ತಿದ್ದರು.
ಎಲ್ಲಾ 10 ಉಗ್ರರು ಪಾಕಿಸ್ತಾನದ ಕರಾಚಿಯಿಂದ ಮುಂಬೈಗೆ ದೋಣಿಯಲ್ಲಿ ತೆರಳಿದ್ದರು. ಅವರು ಸಮುದ್ರದ ಮೂಲಕ ಮುಂಬೈ ಪ್ರವೇಶಿಸಿದ್ದರು. ಅಂದು ಮುಂಬೈ ಭಯಾನಕ ಉಗ್ರರ ದಾಳಿಗೆ ಸಾಕ್ಷಿಯಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Fri, 1 September 23