AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್​ನಲ್ಲಿ ಸ್ಟೀಲ್​ ಡಬ್ಬ ಹಿಡಿದು ಆಫೀಸಿಗೆ ತೆರಳುತ್ತಿರುವ ಮಹಿಳೆಯ ಪೋಟೋ ಹಂಚಿಕೊಂಡ ಆನಂದ ಮಹೀಂದ್ರ; ಟ್ವಿಟರ್​ ಪ್ರತಿಕ್ರಿಯೆ ಏನಿತ್ತು ನೋಡಿ

Viral Photo: ಆನಂದ್ ಮಹೀಂದ್ರ ಫೋಟೊವನ್ನು ಆಗಸ್ಟ್ 20ರಂದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆಗಿನಿಂದ 16,000 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ. ಜನರು ಪೋಸ್ಟ್ ನೋಡಿ ವಿಬಿಧ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ನ್ಯೂಯಾರ್ಕ್​ನಲ್ಲಿ ಸ್ಟೀಲ್​ ಡಬ್ಬ ಹಿಡಿದು ಆಫೀಸಿಗೆ ತೆರಳುತ್ತಿರುವ ಮಹಿಳೆಯ ಪೋಟೋ ಹಂಚಿಕೊಂಡ ಆನಂದ ಮಹೀಂದ್ರ; ಟ್ವಿಟರ್​ ಪ್ರತಿಕ್ರಿಯೆ ಏನಿತ್ತು ನೋಡಿ
TV9 Web
| Edited By: |

Updated on:Aug 22, 2021 | 3:34 PM

Share

ಉದ್ಯಮಿ ಆಗಿರುವ ಆನಂದ ಮಹೀಂದ್ರಾ ಆಗಾಗ ಕುತೂಹಲ ಮೂಡಿಸುವ ಕೆಲವು ಪೋಸ್ಟ್​ಗಳನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ಅಚ್ಚರಿಯ ಸಂದೇಶಗಳನ್ನು ಹೇಳುತ್ತಾ ತಮ್ಮ ಟ್ವಿಟರ್ ಹಿಂಬಾಲಕರ ಗಮನ ಸೆಳೆಯುತ್ತಿರುತ್ತಾರೆ. ನ್ಯೂಯಾರ್ಕ್​ನಲ್ಲಿ ಮಹಿಳೆಯೊಬ್ಬಳು ಸ್ಟೀಲ್ ಡಬ್ಬ ಹಿಡಿದು ಆಫೀಸ್​ಗೆ ತೆರಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಫುಲ್ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ಬಾಲ್ಯದ ನೆನಪುಗಳಿವು ಎಂದು ಪ್ರತಿಕ್ರಿಯಿಸಿದ್ದಾರೆ.

ಸ್ಟೀಲ್ ಡಬ್ಬಾಗಳು ( ಬಾಕ್ಸ್) ಅಥವಾ ಟಿಫಿನ್ ಬಾಕ್ಸ್​ಗಳು ಭಾರತೀಯರ ಜೀವನೋಪಾಯದ ಒಂದು ಭಾಗವಾಗಿದೆ. ಆದರೆ ನ್ಯೂಯಾರ್ಕ್​ನಲ್ಲಿ ಮಹಿಳೆಯು ಸ್ಟೀಲ್ ಟಿಫಿನ್ ಬಾಕ್ಸ್ ಹಿಡಿದು ಆಫೀಸ್​ಗೆ ತೆರಳುತ್ತಿರುವ ದೃಶ್ಯವನ್ನು ಎಂದಾದರೂ ನೋಡಿದ್ದೀರಾ? ಇಂತಹ ಒಂದು ಅಪರೂಪದ ದೃಶ್ಯವನ್ನು ಆನಂದ ಮಹೀಂದ್ರ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರ ಫೋಟೊವನ್ನು ಆಗಸ್ಟ್ 20ರಂದು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆಗಿನಿಂದ 16,000 ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ. ಜನರು ಪೋಸ್ಟ್ ನೋಡಿ ವಿಬಿಧ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಇದೇ ರೀತಿಯ ಇನ್ನಷ್ಟು ಚಿತ್ರಗಳನ್ನೂ ಸಹ ಹಂಚಿಕೊಂಡಿದ್ದಾರೆ.

ಟಿಫಿನ್ ಡಬ್ಬಗಳ ಮೇಲಿನ ಪ್ರೀತಿ ಶಾಶ್ವತವಾದದ್ದು ಎಂದು ಓರ್ವರು ಪ್ರತಿಕ್ರಿಯೆ ನೀಡಿದ್ದಾರೆ. ಟಿಫಿನ್ ಬಾಕ್ಸ್​ನ ಒಳಗೆ ಏನಿದೆ ಎಂಬುದು ತುಂಬಾ ಕುತೂಹಲ ಹುಟ್ಟಿಸುತ್ತಿದೆ, ದಾಲ್.. ರೋಟಿ, ಬರ್ಗರ್ ಅಥವಾ ಸ್ಯಾಂಡ್​ವಿಚ್​? ಎಂದು ಮತ್ತೋರ್ವರು ಪ್ರತಿಕ್ರಿಯಿಸಿದ್ದಾರೆ. ವಿದೇಶದಲ್ಲಿ ಭಾರತದ ಜನರು ವಾಸಿಸುತ್ತಿದ್ದರೂ ಸಂಸ್ಕೃತಿ ಎಂದಿಗೂ ಬದಲಾಗುವುದಿಲ್ಲ ಎಂದು ಇನ್ನೋರ್ವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:

ರೋಬೋಟ್​ಗಿಂತ ವೇಗವಾಗಿ ದೋಸೆ ಮಾಡ್ತಾನೆ ಈತ! ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋ ವೈರಲ್

ಮುಂಬೈ ತಾಜ್​ ಹೋಟೆಲ್​ನಲ್ಲಿ ಒಂದು ರಾತ್ರಿ ತಂಗಲು 6 ರೂಪಾಯಿ; ಆನಂದ್ ಮಹೀಂದ್ರಾ ಟ್ವೀಟ್ ನೋಡಿದರಾ?

(Anand Mahindra post in social media women carrying steel dabba in new york)

Published On - 3:33 pm, Sun, 22 August 21

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ