ಭಾರತದ ಭವಿಷ್ಯಕ್ಕೆ ತಮಿಳು ಸಂಸ್ಕೃತಿ ಅತ್ಯವಶ್ಯಕ: ರಾಹುಲ್ ಗಾಂಧಿ

| Updated By: Lakshmi Hegde

Updated on: Jan 14, 2021 | 2:25 PM

ತಮಿಳುನಾಡಿನ ಜನರು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಸ್ವಾಗತಿಸಿದ್ದಾರೆ. ಎತ್ತು ಮತ್ತು ಯುವಜನರಿಬ್ಬರೂ ಸುರಕ್ಷತೆಯಿಂದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ತಮಿಳುನಾಡಿನ ಸಂಸ್ಕೃತಿ ರಕ್ಷಣೆಗೆ ಸದಾ ಬದ್ಧನಾಗಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಭಾರತದ ಭವಿಷ್ಯಕ್ಕೆ ತಮಿಳು ಸಂಸ್ಕೃತಿ  ಅತ್ಯವಶ್ಯಕ: ರಾಹುಲ್ ಗಾಂಧಿ
ತಮಿಳುನಾಡಿಗೆ ಆಗಮಿಸಿದ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ
Follow us on

ಚೆನ್ನೈ: ತನ್ನದೇ ಪ್ರತ್ಯೇಕ ಭಾಷೆ, ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ತಮಿಳುನಾಡನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಭಾರತದ ಭವಿಷ್ಯಕ್ಕೆ ತಮಿಳು ಸಂಸ್ಕೃತಿ ಅತ್ಯವಶ್ಯಕ ಎಂದು ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.

ಮಕರ ಸಂಕ್ರಾಂತಿಯಂದು ಮಧುರೈನಲ್ಲಿ ನಡೆದ ಜಲ್ಲಿಕಟ್ಟು ಉತ್ಸವದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡ ಅವರು, ಯಾರಿಂದಲೂ ತಮಿಳು ಸಂಸ್ಕೃತಿಗೆ ಘಾಸಿ ತರಲು ಅವಕಾಶ ನೀಡುವುದಿಲ್ಲ ಎಂಬ ಸಂದೇಶ ರವಾನಿಸಲು ತಮಿಳುನಾಡಿಗೆ ಭೇಟಿಯಿತ್ತಿದ್ದೇನೆ ಎಂದು ಘೋಷಿಸಿದರು.

ತಮಿಳುನಾಡಿನ ಜನರ ಪ್ರೀತಿಗೆ ಋಣಿ
ತಮಿಳುನಾಡಿನ ಜನರು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ಸ್ವಾಗತಿಸಿದ್ದಾರೆ. ಅವರ ಪ್ರೀತಿಗೆ ಋಣಿಯಾಗಿದ್ದೇನೆ. ಎತ್ತು ಮತ್ತು ಯುವಜನರಿಬ್ಬರೂ ಸುರಕ್ಷತೆಯಿಂದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯ. ತಮಿಳುನಾಡಿನ ಸಂಸ್ಕೃತಿ ರಕ್ಷಣೆಗೆ ಸದಾ ಬದ್ಧನಾಗಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಈ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಲಾಭವಾಗಬಹುದಾದ ಎಲ್ಲ ಅವಕಾಶಗಳನ್ನೂ ರಾಜಕೀಯ ಪಕ್ಷಗಳು ಉಪಯೋಗಿಸಿಕೊಳ್ಳುತ್ತಿವೆ. ಆರ್​ಎಸ್​ಎಸ್​ ಸರ ಸಂಘಚಾಲಕ ಮೋಹನ್ ಭಾಗವತ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಆಚರಿಸುತ್ತಿದ್ದಾರೆ.

ಜಲ್ಲಿಕಟ್ಟು ಆಯೋಜನೆಗೆ ಅನುಮತಿ ನೀಡಿದ ತಮಿಳುನಾಡು ಸರ್ಕಾರ; ಸ್ಪರ್ಧಿಗಳಿಗೆ ಕೊರೊನಾ ನೆಗೆಟಿವ್ ಪತ್ರ ಕಡ್ಡಾಯ

Published On - 2:25 pm, Thu, 14 January 21