Menstrual Cramp: ಮುಟ್ಟಿನ ನೋವು ತಾಳಲಾರದೆ ಅತಿಯಾಗಿ ಮಾತ್ರೆ ತೆಗೆದುಕೊಂಡ ಯುವತಿ ಸಾವು

|

Updated on: Aug 29, 2024 | 7:56 PM

ತಮಿಳುನಾಡಿನ ತಿರುಚ್ಚಿಯಲ್ಲಿ ಮುಟ್ಟಿನ ಸೆಳೆತ ತಾಳಲಾರದೆ 18 ವರ್ಷದ ಯುವತಿಯೊಬ್ಬಳು ಅತಿಯಾಗಿ ಔಷಧಿ ತೆಗೆದುಕೊಂಡಿದ್ದಾಳೆ. ಇದರಿಂದಾಗಿ ಆಕೆ ಸಾವನ್ನಪ್ಪಿದ್ದಾಳೆ. ಆಕೆ ತೆಗೆದುಕೊಂಡ ಮಾತ್ರೆಗಳ ಓವರ್ ಡೋಸ್​ನಿಂದಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Menstrual Cramp: ಮುಟ್ಟಿನ ನೋವು ತಾಳಲಾರದೆ ಅತಿಯಾಗಿ ಮಾತ್ರೆ ತೆಗೆದುಕೊಂಡ ಯುವತಿ ಸಾವು
ಮುಟ್ಟಿನ ಸೆಳೆತ
Follow us on

ತಿರುಚ್ಚಿ: ತಮಿಳುನಾಡಿನಲ್ಲಿ 18 ವರ್ಷದ ಯುವತಿಯೊಬ್ಬಳು ಮುಟ್ಟಿನ ಸೆಳೆತವನ್ನು ನಿವಾರಿಸಲು ಮಿತಿಮೀರಿದ ಔಷಧ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಆ. 21ರಂದು ವಿಒರೀತ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ತಿರುಚ್ಚಿಯ ಮುಸಿರಿ ತಾಲೂಕಿನ ಸಮೀಪದ ಗ್ರಾಮದ 18 ವರ್ಷದ ಬಾಲಕಿ ಮಾತ್ರೆ ಸೇವಿಸಿದ ಬಳಿಕ ಸಾವನ್ನಪ್ಪಿದ್ದಾಳೆ.

ತಿರುಚ್ಚಿಯ ಪುಲಿವಲಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಟೈಮ್ಸ್​ ಆಫ್ ಇಂಡಿಯಾ ವರದಿ ಪ್ರಕಾರ, ಆ ಯುವತಿಗೆ ಪ್ರತಿ ತಿಂಗಳೂ ತೀವ್ರವಾದ ಮುಟ್ಟಿನ ಸೆಳೆತ ಉಂಟಾಗುತ್ತಿತ್ತು. ತೀವ್ರವಾದ ಹೊಟ್ಟೆ ನೋವನ್ನು ನಿವಾರಿಸಲು ಆಕೆ ಅನೇಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಈ ಬಾರಿಯೂ ಅದೇ ರೀತಿ ಔಷಧಿಯನ್ನು ಸೇವಿಸಿದ ನಂತರ, ಅವಳು ವಾಂತಿ ಮಾಡಲು ಪ್ರಾರಂಭಿಸಿದಳು.

ಇದನ್ನೂ ಓದಿ: ಪಂಜಾಬ್​ನಲ್ಲಿದ್ದ ತಂದೆಯನ್ನು ಪತ್ತೆಹಚ್ಚಲು 20 ವರ್ಷಗಳ ಬಳಿಕ ಜಪಾನ್​ನಿಂದ ಬಂದಿಳಿದ ಮಗ

ತಕ್ಷಣ ಆಕೆಯ ಪೋಷಕರು ಅವಳನ್ನು ಓಮಂಧೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (PHC) ಕರೆದೊಯ್ದರು. ಚಿಕಿತ್ಸೆಯ ನಂತರ, ಅವಳು ಡಿಸ್ಚಾರ್ಜ್ ಆಗಿದ್ದಳು. ಆದರೆ ಮನೆಗೆ ಹಿಂದಿರುಗಿದ ನಂತರ ಪ್ರಜ್ಞೆ ಕಳೆದುಕೊಂಡಳು. ನಂತರ ಆಕೆಯ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ (MGMGH) ದಾಖಲಿಸಿದ್ದರು. ಆದರೆ, ಮಿತಿಮೀರಿದ ಔಷಧ ಸೇವನೆಗೆ ಸಂಬಂಧಿಸಿದ ತೊಡಕುಗಳಿಂದ ಅವಳು ಸಾವನ್ನಪ್ಪಿದಳು.

ಆ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಔಷಧಿಗಳ ಅತಿಯಾದ ಡೋಸೇಜ್ ಮಾರಣಾಂತಿಕ ಆರೋಗ್ಯ ತೊಡಕುಗಳಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ