Shocking News: ನನ್ನ ಆರ್ಡರ್ ಇನ್ನೂ ರೆಡಿ ಆಗಿಲ್ಲವಾ? ಎಂದು ಕೇಳಿದ ಗ್ರಾಹಕನನ್ನು ಕೊಂದ ಹೋಟೆಲ್ ಮಾಲೀಕ!

ದೆಹಲಿಯ ಹೋಟೆಲ್ ಒಂದರಲ್ಲಿ ಚಿಕನ್ ಕಬಾಬ್ ಆರ್ಡರ್ ಮಾಡಿದ್ದ ಗ್ರಾಹಕರೊಬ್ಬರು ಪದೇಪದೆ ಕೌಂಟರ್ ಬಳಿ ಬಂದು ನನ್ನ ಆರ್ಡರ್ ಇನ್ನೂ ರೆಡಿ ಆಗಿಲ್ಲವಾ? ಎಂದು ಕೇಳುತ್ತಲೇ ಇದ್ದರು. ಇದರಿಂದ ಕೋಪಗೊಂಡ ಆ ಹೋಟೆಲ್ ಮಾಲೀಕ ಸೀಕ್ ಕಬಾಬ್ ರಾಡ್​ನಿಂದ ಆ ವ್ಯಕ್ತಿಯ ತಲೆಗೆ ಹೊಡೆದು ಕೊಂದಿದ್ದಾರೆ.

Shocking News: ನನ್ನ ಆರ್ಡರ್ ಇನ್ನೂ ರೆಡಿ ಆಗಿಲ್ಲವಾ? ಎಂದು ಕೇಳಿದ ಗ್ರಾಹಕನನ್ನು ಕೊಂದ ಹೋಟೆಲ್ ಮಾಲೀಕ!
ಕಬಾಬ್ ರಾಡ್
Follow us
|

Updated on: Aug 29, 2024 | 8:17 PM

ನವದೆಹಲಿ: ದೆಹಲಿಯ ಟ್ಯಾಗೋರ್ ಗಾರ್ಡನ್‌ನಲ್ಲಿ ಮಂಗಳವಾರ ತಡರಾತ್ರಿ ದಾರುಣ ಘಟನೆಯೊಂದು ನಡೆದಿದೆ. ತಡರಾತ್ರಿ ಫುಡ್ ಆರ್ಡರ್‌ಗಾಗಿ ನಡೆದ ವಿವಾದದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರ ಮೇಲೆ ಸೀಕ್ ಕಬಾಬ್ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ದಾಳಿಯಲ್ಲಿ ಆ ಗ್ರಾಹಕ ಸಾವನ್ನಪ್ಪಿದ್ದಾರೆ. ದೆಹಲಿಯ ಚಂದ್ರ ವಿಹಾರ್‌ನ 29 ವರ್ಷದ ಹರ್ನೀತ್ ಸಿಂಗ್ ಸಚ್‌ದೇವ ಎಂಬ ವ್ಯಕ್ತಿ ಮೃತಪಟ್ಟವರು.

ಮಂಗಳವಾರ ರಾತ್ರಿ ಹರ್ನೀತ್ ಸಿಂಗ್ ಕಬಾವ್ ತಿನ್ನಲು ಹೋಟೆಲ್​ಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಆರ್ಡರ್ ರೆಡಿಯಾಗದ ಹಿನ್ನೆಲೆಯಲ್ಲಿ ಅವರು ಗಲಾಟೆ ಮಾಡಿದ್ದರು. ಇದರಿಂದ ಕೋಪಗೊಂಡ ರೆಸ್ಟೋರೆಂಟ್ ಮಾಲೀಕರು ಮತ್ತು ಅವರ ಮಗ ಹರ್ನೀತ್ ಸಿಂಗ್ ಮೇಲೆ ಸುಮಾರು 10 ನಿಮಿಷಗಳ ಕಾಲ ಕಬಾಬ್​ ರಾಡ್​ನಿಂದಲೇ ಹಲ್ಲೆ ನಡೆಸಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡು ಹರ್ನೀತ್ ಸಿಂಗ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Crime News: ಪ್ರಿಯಕರನನ್ನು ರಾತ್ರಿ ಕಬ್ಬಿನ ಗದ್ದೆಗೆ ಕರೆಸಿ ಕೊಂದ ಯುವತಿಯರು

ವೃತ್ತಿಯಲ್ಲಿ ಪೇಂಟರ್ ಆಗಿರುವ ಹರ್ನೀತ್ ಇಬ್ಬರು ಸ್ನೇಹಿತರೊಂದಿಗೆ ಕೇತನ್ ಫುಡ್ ಹೆಸರಿನ ಟೇಕ್-ಅವೇ ಹೋಟೆಲ್​ಗೆ ಭೇಟಿ ನೀಡಿದ್ದರು. ತಮ್ಮ ಆರ್ಡರ್​ ಅನ್ನು ಸ್ವೀಕರಿಸುವಲ್ಲಿ ದೀರ್ಘಕಾಲದ ವಿಳಂಬ ಮಾಡಿದ್ದರಿಂದ ಅಸಮಾಧಾನಗೊಂಡಿದ್ದ ಅವರು ಎಷ್ಟು ಹೊತ್ತಾದರೂ ಫುಡ್ ರೆಡಿ ಮಾಡಿ ಕೊಡದಿದ್ದಕ್ಕೆ ಕೋಪಗೊಂಡಿದ್ದರು. ನನ್ನ ಆರ್ಡರ್ ಇನ್ನೂ ರೆಡಿಯಾಗಿಲ್ಲವಾ? ಎಂದು ಹರ್ನೀತ್ ಕೌಂಟರ್ ಬಳಿ ಹೋಗಿ ವಿಚಾರಿಸಿದರು. ಫುಡ್ ರೆಡಿಯಾಗಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಇದರಿಂದ ಹರ್ನೀತ್ ಜಗಳ ಮಾಡಿದರು. ಕೊಟ್ಟ ಹಣವನ್ನು ವಾಪಾಸ್ ಕೊಡಲು ಕೇಳಿದರು.

ಈ ಗಲಾಟೆ ದೊಡ್ಡ ಜಗಳವಾಗಿ ಮಾರ್ಪಟ್ಟಿತು. ಅಲ್ಲಿಗೆ ಬಂದ ಆ ರೆಸ್ಟೋರೆಂಟ್ ಮಾಲೀಕ ಅಜಯ್ ನರುಲಾ ಮತ್ತು ಅವರ ಮಗ ಕೇತನ್ ಇಬ್ಬರೂ ಹರ್ನೀತ್‌ನ ಮೇಲೆ ಸೀಕ್ ಕಬಾಬ್ ರಾಡ್ ಮತ್ತು ಪಂಚ್‌ಗಳಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು. ಹತ್ತು ನಿಮಿಷಗಳ ಕಾಲ ದಾಳಿಯನ್ನು ಮುಂದುವರೆಸಿದರು. ಹರ್ನೀತ್ ಸಹಾಯಕ್ಕೆ ಹೋದ ಸ್ನೇಹಿತರ ಮೇಲೂ ದಾಳಿ ನಡೆಯಿತು. ಕೊನೆಗೆ ಹರ್ನೀತ್ ಪ್ರಜ್ಞೆ ಕಳೆದುಕೊಂಡರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು.

ಇದನ್ನೂ ಓದಿ: Bengaluru Crime: ಬೆಳಗ್ಗೆ ಎದ್ದಾಗ ಕತ್ತು ಸೀಳಿದ ಗೆಳತಿಯ ಶವ ಕಂಡು ಯುವತಿ ಶಾಕ್; ಬೆಂಗಳೂರಿನಲ್ಲೊಂದು ಬರ್ಬರ ಹತ್ಯೆ

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಮತ್ತು ಆತನ ಮಗನನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಹಲವಾರು ಇತರ ರೆಸ್ಟೋರೆಂಟ್ ಉದ್ಯೋಗಿಗಳನ್ನು ಸಹ ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸರು ರೆಸ್ಟೋರೆಂಟ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದಾರೆ, ಇದು ತಂದೆ-ಮಗ ಇಬ್ಬರು ಹರ್ನೀತ್ ಮೇಲೆ ದಾಳಿ ಮಾಡುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಲು ಬಳಸಲಾದ ಡಿವಿಆರ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ