Bengaluru Crime: ಬೆಳಗ್ಗೆ ಎದ್ದಾಗ ಕತ್ತು ಸೀಳಿದ ಗೆಳತಿಯ ಶವ ಕಂಡು ಯುವತಿ ಶಾಕ್; ಬೆಂಗಳೂರಿನಲ್ಲೊಂದು ಬರ್ಬರ ಹತ್ಯೆ

Shocking News: ಬೆಂಗಳೂರಿನಲ್ಲಿ ಒಂದು ಆಚ್ಚರಿಯ ಕೃತ್ಯ ನಡೆದಿದ್ದು, ರಾತ್ರಿ ಮಲಗಿದ್ದಾಗ ತನ್ನ ಗಂಡ ತನಗೆ ಹಿಂಸೆ ಕೊಡುತ್ತಿದ್ದಾನೆ ಎಂದು ಸ್ನೇಹಿತೆಯ ಬಳಿ ಹೇಳಿಕೊಂಡಿದ್ದ ಗೆಳತಿಯೊಬ್ಬಳು ಬೆಳಗ್ಗೆ ಆಕೆಯ ಪಕ್ಕದಲ್ಲಿ ಬೆಡ್​ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ. ವಿಚಿತ್ರವೆಂದರೆ ಆಕೆಯ ಪಕ್ಕದಲ್ಲೇ ಮಲಗಿದ್ದ ಯುವತಿಗೆ ತನ್ನ ಪಕ್ಕದಲ್ಲಿ ಕೊಲೆಯಾಗಿದ್ದೇ ಗೊತ್ತಾಗಿಲ್ಲ.

Bengaluru Crime: ಬೆಳಗ್ಗೆ ಎದ್ದಾಗ ಕತ್ತು ಸೀಳಿದ ಗೆಳತಿಯ ಶವ ಕಂಡು ಯುವತಿ ಶಾಕ್; ಬೆಂಗಳೂರಿನಲ್ಲೊಂದು ಬರ್ಬರ ಹತ್ಯೆ
ಗಂಡ ಕಿರಣ್ ಜೊತೆ ನವ್ಯಶ್ರೀImage Credit source: news18
Follow us
ಸುಷ್ಮಾ ಚಕ್ರೆ
|

Updated on: Aug 29, 2024 | 5:56 PM

ಬೆಂಗಳೂರು: ಬೆಂಗಳೂರಿನ ಯುವತಿಯೊಬ್ಬರು ಬೆಳಿಗ್ಗೆ ಎದ್ದಾಗ ತನ್ನ ಸ್ನೇಹಿತೆ ಹಾಸಿಗೆಯಲ್ಲಿ ತನ್ನ ಪಕ್ಕದಲ್ಲಿ ಶವವಾಗಿ ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ರಾತ್ರಿ ಮಲಗಿದಾಗ ಆಕೆಯ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಆಕೆಯ ದೇಹವು ರಕ್ತದ ಮಡುವಿನಲ್ಲಿ ಮುಳುಗಿತ್ತು. ಆದರೂ ಈ ವಿಷಯ ಪಕ್ಕದಲ್ಲಿ ಮಲಗಿದ್ದ ಗೆಳತಿಗೆ ಗೊತ್ತಾಗಲೇ ಇಲ್ಲ. ಕೊಲೆ ನಡೆಯುವ ಹಿಂದಿನ ರಾತ್ರಿ ಆಕೆಯ ಬಳಿ ಆಕೆಯ ಸ್ನೇಹಿತೆ ತನ್ನ ಗಂಡನ ದುರ್ನಡತೆಯ ಬಗ್ಗೆ ಹೇಳಿಕೊಂಡಿದ್ದಳು. ನಮ್ಮ ಸಂಸಾರ ಚೆನ್ನಾಗಿಲ್ಲ. ಇಬ್ಬರ ಮಧ್ಯೆ ವೈವಾಹಿಕ ಭಿನ್ನಾಭಿಪ್ರಾಯವಿದೆ ಎಂದು ಅವಳಲ್ಲಿ ಹೇಳಿಕೊಂಡಿದ್ದಳು. ನನಗೆ ಜೀವ ಬೆದರಿಕೆಯಿದೆ. ನನ್ನ ಪ್ರಾಣಕ್ಕೆ ಯಾವಾಗ ಬೇಕಾದರೂ ತೊಂದರೆ ಆಗಬಹುದು ಎಂದು ಹೇಳಿದ್ದಳು. ಆದರೆ, ಅದೇ ರಾತ್ರಿ ಆಕೆಯ ಕೊಲೆಯಾಗಿದೆ.

ಮೃತ ಮಹಿಳೆಯನ್ನು ಬಿ. ನವ್ಯಶ್ರೀ ಎಂದು ಗುರುತಿಸಲಾಗಿದ್ದು, 28ರ ಹರೆಯದ ನೃತ್ಯ ತರಬೇತುದಾರಳಾಗಿ ಕೆಲಸ ಮಾಡುತ್ತಿದ್ದಳು. ಇದರ ಜೊತೆ ಆ್ಯಂಕರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಳು. ಬೆಂಗಳೂರಿನ ಕೆಂಗೇರಿ ಉಪನಗರದ ಎಸ್‌ಎಂವಿ ಲೇಔಟ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಪತಿ ಕಿರಣ್ ಜೊತೆ ಆಕೆ ವಾಸವಿದ್ದರು. ಕೊಲೆ ಆರೋಪದ ಮೇಲೆ ಕ್ಯಾಬ್ ಚಾಲಕನಾಗಿರುವ ಆಕೆಯ ಪತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನವ್ಯಶ್ರೀ ಅವರ ಸ್ನೇಹಿತೆ ಐಶ್ವರ್ಯ ಎಂಬಾಕೆಯ ಮನೆಯಲ್ಲಿ ಈ ಕೊಲೆ ನಡೆದಿದೆ. ರಾತ್ರಿ ಐಶ್ವರ್ಯಳ ಬಳಿ ತನ್ನ ವೈವಾಹಿಕ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದ ನವ್ಯಶ್ರೀ ಆಕೆಯ ಪಕ್ಕದಲ್ಲೇ ಹಾಸಿಗೆ ಮೇಲೆ ಮಲಗಿದ್ದಳು. ಮರುದಿನ ಬೆಳಿಗ್ಗೆ 6 ಗಂಟೆ ಸುಮಾರಿಗೆ ಐಶ್ವರ್ಯ ಎದ್ದಾಗ ಆಕೆಯ ಪಕ್ಕದಲ್ಲಿ ಮಲಗಿದ್ದ ನವ್ಯಶ್ರೀ ಕೊಲೆಯಾಗಿತ್ತು. ಆಕೆಯ ಕತ್ತು ಸೀಳಲಾಗಿತ್ತು. ಇದನ್ನು ಕಂಡು ಶಾಕ್ ಆದ ಆಕೆ ನೆರೆಹೊರೆಯವರಿಗೆ ವಿಷಯ ತಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ನ್ಯೂಸ್​18 ವರದಿ ಮಾಡಿದೆ.

ಇದನ್ನೂ ಓದಿ: Viral Video: ಚಿಕ್ಕ ಮಗುವನ್ನು ಕೂರಿಸಿಕೊಂಡು ಸ್ಟಂಟ್ ಮಾಡುವಾಗ ಬೈಕ್​ಗೆ ಅಡ್ಡಬಂದ ಗೂಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಪೊಲೀಸರಿಗೆ ನೀಡಿದ ದೂರಿನಲ್ಲಿ, ನವ್ಯಶ್ರೀ ತನ್ನ ಮನೆಯಲ್ಲಿ ಗಂಡನಿಂದ ಸುರಕ್ಷತೆಯಿಲ್ಲದ ಕಾರಣದಿಂದ ಹೆದರಿ ತನ್ನ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದಳು. ಇಬ್ಬರೂ ರಾತ್ರಿ ಬಿಯರ್ ಕುಡಿದು ಮಲಗಿದ್ದೆವು. ಆದರೆ ಬೆಳಗಾಗುವಷ್ಟರಲ್ಲಿ ನಮ್ಮ ರೂಮಿನಲ್ಲೇ ಆಕೆಯ ಕೊಲೆಯಾಗಿದೆ ಎಂದು ತಿಳಿಸಿದ್ದಾರೆ.

ನವ್ಯಶ್ರೀ ಅವರ ಪತಿ ಕಿರಣ್ ಬೆಳಗಿನ ಜಾವ 5.30ರ ಸುಮಾರಿಗೆ ತಮ್ಮ ಮನೆಗೆ ನುಗ್ಗಿ, ಇಬ್ಬರೂ ಗಾಢ ನಿದ್ದೆಯಲ್ಲಿದ್ದಾಗ ಈ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕತ್ತು ಸೀಳುವ ಮುನ್ನ ನವ್ಯಶ್ರೀಗೆ ಚಿತ್ರಹಿಂಸೆ ನೀಡಿದ ಕುರುಹುಗಳಿವೆ ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ ನವ್ಯಶ್ರೀ ಶಿವಮೊಗ್ಗ ಜಿಲ್ಲೆಯವರು. ಮೂರು ವರ್ಷಗಳ ಹಿಂದೆ, ಅವರು ಮತ್ತು ಕಿರಣ್ ತಮ್ಮ ಕುಟುಂಬದಿಂದ ತೀವ್ರ ವಿರೋಧವನ್ನು ಎದುರಿಸಿ, ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ ವರ್ಷದಿಂದ ಅವರಿಬ್ಬರ ಮಧ್ಯೆ ಸಮಸ್ಯೆಗಳಿದ್ದವು.

ಇದನ್ನೂ ಓದಿ: Shocking Video: ಗುಪ್ತಾಂಗಕ್ಕೆ ಮೆಣಸಿನ ಪುಡಿ ತುಂಬಿ ಚಿತ್ರಹಿಂಸೆ; ಶಾಕಿಂಗ್ ವಿಡಿಯೋ ವೈರಲ್

ನವ್ಯಶ್ರೀ ತಮ್ಮ ಬಾಲ್ಯದ ಗೆಳತಿಯಾಗಿರುವ ಐಶ್ವರ್ಯಾ ಜೊತೆ ಬಹಳ ಅನ್ಯೋನ್ಯವಾಗಿದ್ದರು. ಮನೆಯಲ್ಲಿ ಜಗಳ ನಡೆದಾಗಲೆಲ್ಲ ಐಶ್ವರ್ಯಳ ಮನೆಗೆ ಬಂದು ಉಳಿಯುತ್ತಿದ್ದರು. ನವ್ಯಶ್ರೀ ಡ್ಯಾನ್ಸರ್ ಮತ್ತು ಆ್ಯಂಕರ್ ಆಗಿರುವುದರಿಂದ ಆಕೆಯ ವೃತ್ತಿಗಾಗಿi ಹೊರಗೆ ಕಾಲ ಕಳೆಯುತ್ತಿದ್ದ ಬಗ್ಗೆ ಅತೃಪ್ತಿ ಹೊಂದಿದ್ದ ಕಿರಣ್‌ ಸದಾ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಈ ಘಟನೆಯ ಹಿಂದಿನ ರಾತ್ರಿಯೂ ಜೋರಾಗಿ ಗಲಾಟೆ ಮಾಡಿಕೊಂಡು ನವ್ಯಶ್ರೀ ತನ್ನ ಸ್ನೇಹಿತೆಯ ಮನೆಗೆ ಬಂದಿದ್ದರು. ಅವರಿಬ್ಬರೂ ಸೇರಿ ಪೊಲೀಸರಿಗೆ ಕಿರಣ್ ವಿರುದ್ಧ ದೂರು ನೀಡಿದ್ದರು. ಅದಾದ ನಂತರ ಅವರ ಸ್ನೇಹಿತನೊಬ್ಬ ಅವರಿಬ್ಬರನ್ನೂ ಐಶ್ವರ್ಯಳ ಮನೆಗೆ ಡ್ರಾಪ್ ಮಾಡಿದ್ದ. ರಾತ್ರಿ 12 ಗಂಟೆ ಸುಮಾರಿಗೆ ಆ ಇಬ್ಬರೂ ಯುವತಿಯರು ಊಟ ಮಾಡಿ ಬಿಯರ್ ಸೇವಿಸಿ ಗಾಢ ನಿದ್ರೆಗೆ ಜಾರಿದ್ದರು. ಬೆಳಿಗ್ಗೆ ಐಶ್ವರ್ಯಳ ಕೈಗೆ ತಣ್ಣನೆಯ ವಸ್ತು ತಾಗಿದಂತಾಗಿ ಎಚ್ಚರಗೊಂಡರು. ಆಗ ಆಕೆಯ ಪಕ್ಕದಲ್ಲಿ ಮಲಗಿದ್ದ ನವ್ಯಶ್ರೀ ಕುತ್ತಿಗೆ ಸೀಳಿ ಕೊಲೆ ಮಾಡಿರುವುದನ್ನು ಕಂಡು ಆಘಾತಕ್ಕೊಳಗಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ