AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಿಕ್ಕ ಮಗುವನ್ನು ಕೂರಿಸಿಕೊಂಡು ಸ್ಟಂಟ್ ಮಾಡುವಾಗ ಬೈಕ್​ಗೆ ಅಡ್ಡಬಂದ ಗೂಳಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಉತ್ತರ ಪ್ರದೇಶದ ಸೀತಾಪುರದ ಹೈವೇಯಲ್ಲಿ ಸಣ್ಣ ಮಗುವಿನೊಂದಿಗೆ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಹಾವಿನಂತೆ ಇಡೀ ರಸ್ತೆ ತುಂಬ ಬೈಕ್ ಚಲಾಯಿಸುತ್ತಾ ಸ್ಟಂಟ್ ಮಾಡಿದ್ದಾನೆ. ಈ ವೇಳೆ ಗೂಳಿ ಅಡ್ಡಬಂದಿದ್ದು, ಆ ವ್ಯಕ್ತಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದ್ದಾನೆ. ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಮತ್ತು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಗುವನ್ನು ಕೂರಿಸಿಕೊಂಡು ಹೈವೇಯಲ್ಲಿ ಹೈವೇಯಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. 

Viral Video: ಚಿಕ್ಕ ಮಗುವನ್ನು ಕೂರಿಸಿಕೊಂಡು ಸ್ಟಂಟ್ ಮಾಡುವಾಗ ಬೈಕ್​ಗೆ ಅಡ್ಡಬಂದ ಗೂಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೈಕ್ ಸ್ಟಂಟ್
ಸುಷ್ಮಾ ಚಕ್ರೆ
|

Updated on: Jul 18, 2024 | 5:38 PM

Share

ಸೀತಾಪುರ: “ವೇಗ ಆ ಕ್ಷಣಕ್ಕೆ ನಮಗೆ ರೋಮಾಂಚನ ನೀಡಿದರೂ ಕೆಲವೊಮ್ಮೆ ಜೀವವನ್ನೇ ಬಲಿ ಪಡೆಯುತ್ತದೆ” ಇದು ಪ್ರಸಿದ್ಧ ನುಡಿಗಟ್ಟು. ಆದರೂ ಕೆಲವು ಜನರು ವಾಹನ ಚಲಾಯಿಸುವಾಗ ಆ ಬಗ್ಗೆ ಗಮನಹರಿಸುವುದಿಲ್ಲ, ಅದನ್ನು ನಿರ್ಲಕ್ಷಿಸುತ್ತಾರೆ. ತಮ್ಮ ವಾಹನಗಳನ್ನು ಹೆಚ್ಚಿನ ವೇಗದಲ್ಲಿ ಓಡಿಸುವ ಮೂಲಕ ತಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಕೆಲವರು ಮೋಜಿಗಾಗಿ ಚಲಿಸುವ ವಾಹನಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಸಹ ಮಾಡುತ್ತಾರೆ.

ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿರುವ ಆಘಾತಕಾರಿ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವುದು ಮತ್ತು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಮಗುವನ್ನು ಕೂರಿಸಿಕೊಂಡು ಹೈವೇಯಲ್ಲಿ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ವ್ಯಕ್ತಿಯೊಬ್ಬ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಸೀತಾಪುರದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಸ್ಪ್ಲೆಂಡರ್ ಬೈಕ್ ಅನ್ನು ಹೈವೇಯಲ್ಲಿ ಅತಿವೇಗದಲ್ಲಿ ಚಲಾಯಿಸಿಕೊಂಡು ಬಂದು ಪ್ರಾಣಾಪಾಯದಿಂದ ಪಾರಾಗುವ ಸಾಹಸ ಮಾಡಿದ್ದಾನೆ. ಈ ವ್ಯಕ್ತಿ ಹೆದ್ದಾರಿಯಲ್ಲಿ ಹಾವಿನ ಮಾದರಿಯಲ್ಲಿ ಬೈಕ್ ಚಲಾಯಿಸುತ್ತಿದ್ದು, ಹಾಗೆಯೇ ಬೈಕ್‌ ಅನ್ನು ನಿಂತುಕೊಂಡೇ ಚಲಾಯಿಸುತ್ತಿರುವುದು ಕೂಡ ಕಂಡು ಬಂದಿದೆ. ಆ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಪುಟ್ಟ ಮಗು ಕೂಡ ಕುಳಿತಿದೆ. ಬೈಕ್ ಮೇಲೆ ಕೂತಿದ್ದ ಮುಗ್ಧ ಮಗುವಿನ ಪ್ರಾಣದ ಬಗ್ಗೆ ಆ ವ್ಯಕ್ತಿ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ದೇವಸ್ಥಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಆನೆ; ಈ ವೈರಲ್ ವಿಡಿಯೋ ಮಿಸ್ ಮಾಡಬೇಡಿ

ಆ ವ್ಯಕ್ತಿ ಅಪಾಯಕಾರಿಯಾಗಿ ಬೈಕ್ ಓಡಿಸುತ್ತಿರುವುದು ಕಂಡು ಬರುತ್ತಿದ್ದಂತೆಯೇ ಇತರ ಕಾರುಗಳು, ಬೈಕ್‌ಗಳು ಸಹ ದೂರ ಹೋಗುತ್ತಿವೆ. ಸವಾರ ತನ್ನ ಎರಡೂ ಕಾಲುಗಳನ್ನು ಒಂದೇ ಕಡೆ ಇಟ್ಟು ಕುಳಿತಿದ್ದು, ಅದೇ ಸಮಯದಲ್ಲಿ ಹ್ಯಾಂಡಲ್ ಬಿಟ್ಟು ಬೈಕ್ ಮೇಲೆ ನಿಂತು ಬೈಕ್ ಓಡಿಸುತ್ತಿರುವುದು ಕೂಡ ವಿಡಿಯೋದಲ್ಲಿದೆ. ವ್ಯಕ್ತಿ ಈ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವಾಗ ದಾರಿ ತಪ್ಪಿದ ಗೂಳಿಯೊಂದು ರಸ್ತೆ ದಾಟುತ್ತಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಈ ವೇಳೆ ಕೊಂಚ ಯಾಮಾರಿದ್ದರೂ ವೇಗವಾಗಿ ಹೋಗುತ್ತಿದ್ದ ಆ ಬೈಕ್ ಗೂಳಿಗೆ ಡಿಕ್ಕಿ ಹೊಡೆದು ಆತ ಮತ್ತು ಮಗು ಇಬ್ಬರೂ ಸಾವನ್ನಪ್ಪುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ತಕ್ಷಣ ತನ್ನ ಬೈಕ್ ಹ್ಯಾಂಡಲನ್ನು ಬೇರೆಡೆ ತಿರುಗಿಸಿದ ಆತ ಮತ್ತೆ ವೇಗವಾಗಿ ಮುಂದೆ ಹೋಗಿದ್ದಾನೆ.

ಇದನ್ನೂ ಓದಿ: Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್

ಹೆದ್ದಾರಿಯಲ್ಲಿ ಬೈಕ್ ಹಿಂಬಾಲಿಸುತ್ತಿರುವ ಮತ್ತೊಬ್ಬ ಪ್ರಯಾಣಿಕರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದು, ಸವಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. “ಮುಗ್ಧ ಮಗುವನ್ನು ಬೈಕ್ ಮೇಲೆ ಕೂರಿಸುವ ಮೂಲಕ ಅಪಾಯಕಾರಿ ಸಾಹಸಗಳನ್ನು ಮಾಡಿದ ಈ ಹಠಮಾರಿ ವ್ಯಕ್ತಿಗೆ ತ್ವರಿತವಾಗಿ ಪಾಠ ಕಲಿಸಿ” ಎಂದು ನೆಟ್ಟಿಗರು ಪೊಲೀಸರಿಗೆ ಈ ವಿಡಿಯೋ ಟ್ಯಾಗ್ ಮಾಡಿದ್ದಾರೆ.

ಈ ವೈರಲ್ ವಿಡಿಯೋಗೆ ಉತ್ತರ ಪ್ರದೇಶ ಪೊಲೀಸರು ಪ್ರತಿಕ್ರಿಯಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸೀತಾಪುರ ಪೊಲೀಸರು, ‘ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಭಾರಿ ಸಂಚಾರ ನಿರೀಕ್ಷಕರಿಗೆ ಸೂಚಿಸಲಾಗಿದೆ’ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಮುಂಬೈನ ಡಿಪೋದಲ್ಲಿ ಭಾರೀ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಬಸ್‌ಗಳು
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಶಿವರಾಜ್‌ಕುಮಾರ್ ಆಗಮನ ವೇಳೆ ಪಟಾಕಿ ಸ್ಫೋಟ; ತಪ್ಪಿದ ದೊಡ್ಡ ಅಪಾಯ
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
ಹೆಚ್ಚಿತು ಗಾನವಿ, ಯಶಸ್ ನಡುವಿನ ಆಪ್ತತೆ; ಸೌಂದರ್ಯಾ ಶೆಟ್ಟಿ ಕಥೆ ಏನು?
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
‘ಹೆದ್ದಾರಿ ವಿಸ್ತರಣೆಗೆ 2,326 ಮರಗಳಿಗೆ ಕೊಡಲಿ ಪೆಟ್ಟು’
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಸಂಗ ಬಿಚ್ಚಿಟ್ಟ ಸಿದ್ದರಾಮಯ್ಯ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್
ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಠಿ ಲೈವ್