AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಆನೆ; ಈ ವೈರಲ್ ವಿಡಿಯೋ ಮಿಸ್ ಮಾಡಬೇಡಿ

ತಮ್ಮ ಹುಟ್ಟುಹಬ್ಬವನ್ನು ಆ ರೀತಿ ಆಯೋಜಿಸಬೇಕು, ಈ ರೀತಿ ಆಯೋಜಿಸಬೇಕೆಂದು ಎಲ್ಲರಿಗೂ ಹಲವು ರೀತಿಯ ಪ್ಲಾನ್​ಗಳಿರುವುದು ಸಾಮಾನ್ಯ. ಅದೇ ರೀತಿ ಆನೆಗೂ ಆಸೆ ಇರುತ್ತದೆ ಎಂದು ಅದರ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗಿದೆ. ತನ್ನ ಬರ್ತಡೇಗೆ ಸಿಕ್ಕ ಉಡುಗೊರೆಗಳನ್ನು ನೋಡಿ ಗಜರಾಜನಂತೂ ಫುಲ್ ಖುಷಿಯಾಗಿದ್ದಾನೆ.

ದೇವಸ್ಥಾನದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಆನೆ; ಈ ವೈರಲ್ ವಿಡಿಯೋ ಮಿಸ್ ಮಾಡಬೇಡಿ
ಗಜರಾಜನ ಬರ್ತ್​ಡೇ
Follow us
ಸುಷ್ಮಾ ಚಕ್ರೆ
|

Updated on: Jul 18, 2024 | 5:15 PM

ಚೆನ್ನೈ: ತನ್ನ 22ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಆನೆಯೊಂದು ಬರ್ತಡೇ ಪ್ರಯುಕ್ತ ಮೈಮೇಲೆ ರೇಷ್ಮೆ ಬಟ್ಟೆಯನ್ನು ಹೊದ್ದುಕೊಂಡು, ಸುಂದರವಾಗಿ ಅಲಂಕರಿಸಿಕೊಂಡು, ಕೇಕ್ ಬದಲು ನಾನಾ ರೀತಿಯ ಹಣ್ಣುಗಳನ್ನು ತಿನ್ನುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಹಣ್ಣುಗಳನ್ನು ತಿಂದು ಪರಿಸರಸ್ನೇಹಿಯಾಗಿ ಬರ್ತಡೇ ಆಚರಿಸಿಕೊಂಡಿರುವ ಈ ಆನೆಯನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಂಡ ಆನೆಯನ್ನು ಅಖಿಲಾ ಎಂದು ಕರೆಯಲಾಗುತ್ತದೆ. ಈ ಆನೆಯ 22ನೇ ಹುಟ್ಟುಹಬ್ಬವನ್ನು ತಮಿಳುನಾಡಿನ ದೇವಸ್ಥಾನದಲ್ಲಿ ಆಚರಿಸಲಾಯಿತು. ಹುಟ್ಟುಹಬ್ಬದ ಪ್ರಯುಕ್ತ ದೇವಸ್ಥಾನದ ಭಕ್ತರೆಲ್ಲರೂ ನೀಡಿದ ವಿವಿಧ ರೀತಿಯ ಹಣ್ಣುಗಳನ್ನು ನೋಡಿ ಆನೆ ಖುಷಿಯಾಗಿ ತಲೆಯಾಡಿಸುತ್ತಾ ಹಣ್ಣುಗಳನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Shocking Video: ನಾಯಿಯನ್ನು ಹಗ್ಗದಲ್ಲಿ ಕಟ್ಟಿ ಟೆರೇಸ್‌ನಿಂದ ನೇತಾಡಿಸಿದ ಯುವಕ; ಶಾಕಿಂಗ್ ವಿಡಿಯೋ ವೈರಲ್

ತಮಿಳುನಾಡಿನ ಈ ಹೃದಯಸ್ಪರ್ಶಿ ವಿಡಿಯೋದಲ್ಲಿ ಆನೆ ತನ್ನ ಹುಟ್ಟುಹಬ್ಬವನ್ನು ಹಣ್ಣುಹಂಪಲು ಮತ್ತು ಹಬ್ಬದ ಅಲಂಕಾರಗಳೊಂದಿಗೆ ಸಂತೋಷದಿಂದ ಆಚರಿಸುತ್ತಿರುವುದನ್ನು ನೋಡಬಹುದು. ಸುತ್ತಲೂ ನಿಂತ ಜನರು ಹ್ಯಾಪಿ ಬರ್ತಡೇ ಟೂ ಯು ಎಂದು ಆನೆಗೆ ಹುಟ್ಟುಹಬ್ಬದ ಶುಭಾಶಯ ಕೋರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ