ಚೆನ್ನೈನ ತಿರುಮಂಗಲಂನಲ್ಲಿ ಹೋಟೆಲ್ ಮ್ಯಾನೇಜರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ವಿಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಡಿಎಂಕೆ ಸರ್ಕಾರದ ಅವಧಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿದ್ದಾರೆ.
ಡಿಎಂಕೆ ಅವಧಿಯಲ್ಲಿ ಪೆಟ್ರೋಲ್ ಬಾಂಬ್ ದಾಳಿ, ಮದ್ಯ, ಡ್ರಗ್ಸ್ ಮಾರಾಟ, ಹಾಡಹಗಲೇ ಕೊಲೆಗಳು, ಮಹಿಳೆಗೆ ಸುರಕ್ಷತೆ ಇಲ್ಲದ ಬೀದಿಗಳು, ಹೆಚ್ಚುತ್ತಿರುವ ಪುಂಡರ ಗುಂಪು ಇದೆಲ್ಲವೂ ತಮಿಳುನಾಡಿನ ಭ್ರಷ್ಟ ಡಿಎಂಕೆ ಸರ್ಕಾರದ ವಿಜಯವಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಚೆನ್ನೈನ ತಿರುಮಂಗಲಂನಲ್ಲಿ ಮಾಮೂಲು ಕೊಡಲಿಲ್ಲ ಎನ್ನುವ ಕಾರಣಕ್ಕೆ ಹೋಟೆಲ್ ಮ್ಯಾನೇಜರ್ನನ್ನು ದುಷ್ಕರ್ಮಿಗಳು ಥಳಿಸಿರುವ ಘಟನೆ ಇದಾಗಿದೆ.
ಬಿಜೆಪಿ ರಾಜ್ಯ ಕಾರ್ಯದರ್ಶಿ ಕರುಪು ಮುರುಗನಂತಂ ಟ್ವೀಟ್ ಮಾಡಿ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಹೋಟೆಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ದಾಳಿಕೋರರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Petrol bombs, broad daylight murders under the influence of alcohol & drugs, unsafe streets for women and a rise in goondaism are the successes of the Corrupt DMK govt.
In Tirumangalam, Chennai, rowdies have beaten up an eatery manager for refusing to pay protection money.
It… pic.twitter.com/GQgnPe5iu7
— K.Annamalai (@annamalai_k) November 14, 2023
ಮ್ಯಾನೇಜರ್ ಕುಳಿತಿದ್ದ ಕ್ಯಾಶ್ ಕೌಂಟರ್‌ಗೆ ಐದು ಜನರ ಗುಂಪು ನುಗ್ಗಿ ಅವರನ್ನು ಹೊರಗೆಳೆಯಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವು ಸೆಕೆಂಡ್‌ಗಳ ನಂತರ ಅವರು ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರಿಗೆ ರಕ್ತಸ್ರಾವವಾಗುತ್ತಿದ್ದರೂ ರೌಡಿಗಳು ತಮ್ಮ ಕೃತ್ಯ ಮುಂದುವರೆಸಿದ್ದರು.
ಹೋಟೆಲ್ ಮ್ಯಾನೇಜರ್ನಿಂದ ದೂರು ಸ್ವೀಕರಿಸಿದ ಹೊರತಾಗಿಯೂ ಪೊಲೀಸ್ ಇಲಾಖೆಯು ದಾಳಿಯ ಹಿಂದಿನ ಜನರನ್ನು ಬಂಧಿಸಿಲ್ಲ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ