ಕೊವಿಡ್​ 19ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸಿದ ತಮಿಳುನಾಡಿನ ಸರ್ಕಾರ

|

Updated on: May 26, 2021 | 7:27 PM

ಕೊರೊನಾ ವೈರಸ್​ ಸಂದರ್ಭದಲ್ಲಿ ಕೂಡ ಪತ್ರಕರ್ತರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡಲಾಗುವ ನೆರವಿನ ಮೊತ್ತವನ್ನು ಹೆಚ್ಚಿಸಬೇಕು ಎಂದು ಪತ್ರಕರ್ತರ ಸಂಘಟನೆಗಳು ಮನವಿ ಮಾಡಿವೆ,

ಕೊವಿಡ್​ 19ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 10 ಲಕ್ಷ ರೂ.ಗೆ ಏರಿಸಿದ ತಮಿಳುನಾಡಿನ ಸರ್ಕಾರ
ಎಂ.ಕೆ.ಸ್ಟಾಲಿನ್​
Follow us on

ಚೆನ್ನೈ: ಕೊರೊನಾದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಇನ್ನು ಮುಂದೆ 10 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಮಿಳುನಾಡು ಸರ್ಕಾರ ಘೋಷಿಸಿದೆ. ಇಷ್ಟು ದಿನ ಅಲ್ಲಿ 5 ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ಅಲ್ಲದೆ, ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕೆಲಸ ಮಾಡಿದ ಮುಂಚೂಣಿ ಪತ್ರಕರ್ತರಿಗೆ 3000 ರೂ.ಬದಲು 5000 ರೂ.ಪ್ರೋತ್ಸಾಹಧನ ನೀಡುವುದಾಗಿಯೂ ಎಂ.ಕೆ.ಸ್ಟಾಲಿನ್​ ತಿಳಿಸಿದ್ದಾರೆ.

ಕೊರೊನಾ ವೈರಸ್​ ಸಂದರ್ಭದಲ್ಲಿ ಕೂಡ ಪತ್ರಕರ್ತರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಅವರಿಗೆ ನೀಡಲಾಗುವ ನೆರವಿನ ಮೊತ್ತವನ್ನು ಹೆಚ್ಚಿಸಬೇಕು ಎಂದು ಪತ್ರಕರ್ತರ ಸಂಘಟನೆಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನೆರವಿನ ಮೊತ್ತವನ್ನು ಹೆಚ್ಚಿಸಿದ್ದಾರೆ ಎಂದು ತಮಿಳುನಾಡು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.

ಕೊರೊನಾ ಸಮಯದಲ್ಲಿ ಪತ್ರಕರ್ತರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿದ್ದಾರೆ. ಸರ್ಕಾರದ ಯೋಜನೆಗಳು, ಮಾಹಿತಿಗಳನ್ನು ಜನರಿಗೆ ಸರಿಯಾಗಿ ತಲುಪಿಸಿದ್ದಾರೆ. ಇನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಕೊವಿಡ್ ಸ್ಥಿತಿಗತಿಗಳನ್ನು ಸರಿಯಾಗಿ ವರದಿ ಮಾಡುವ ಮೂಲಕ ಸರ್ಕಾರಕ್ಕೂ ಸಹಾಯ ಮಾಡಿದ್ದಾರೆ. ಸಾರ್ವಜನಿಕರಲ್ಲಿ ಅರಿವು ಕೂಡ ಮೂಡಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಸೇತುವೆಯಾಗಿದ್ದಾರೆ. ಅಂಥ ಪತ್ರಕರ್ತರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪರಿಹಾರ ಮೊತ್ತ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಮುಂಚೂಣಿಯಲ್ಲಿರುವ ಪತ್ರಕರ್ತರು, ಫೋಟೋ ಜರ್ನಲಿಸ್ಟ್​, ಕ್ಯಾಮರಾಮೆನ್​​ಗಳಿಗೆ ಅನ್ವಯ ಆಗಲಿದೆ.
ಮುಖ್ಯಮಂತ್ರಿಯ ಹೊಸ ನಿರ್ಧಾರವನ್ನು ಸ್ವಾಗತಿಸಿದ ಚೆನ್ನೈ ಪ್ರೆಸ್​ ಕ್ಲಬ್​ನ ಸದಸ್ಯರು, ಪರಿಹಾರ ಮೊತ್ತವನ್ನು 10 ಲಕ್ಷದಿಂದ 25 ಲಕ್ಷ ರೂಪಾಯಿಗೆ ಏರಿಸಿ ಎಂದೂ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆಯಿಂದ ಏನನ್ನು ಸಾಧಿಸಲಾಗದು; ಮೊಹಮ್ಮದ್ ಅಮೀರ್​ಗೆ ಬುದ್ಧಿ ಹೇಳಿದ ಶೋಯೆಬ್ ಅಖ್ತರ್