ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಬುಧವಾರ ರಾಜ್ಯ ಅರಣ್ಯ ಇಲಾಖೆ ವತಿಯಿಂದ ನೀಲಗಿರಿ ಜಿಲ್ಲೆಯ ತೆಪ್ಪಕ್ಕಾಡ್ ಆನೆ ಶಿಬಿರದಲ್ಲಿ (Theppakkad Elephant Camp) ಮೊದಲ ಮಹಿಳಾ ಕಾವಾಡಿ (Elephant Care Taker) ಆಗಿ ನೇಮಕಗೊಂಡಿರುವ ವಿ ಬೆಳ್ಳಿಯವರಿಗೆ (V Bellie) ನೇಮಕಾತಿ ಆದೇಶ ಹೊರಡಿಸಿದ್ದಾರೆ. ನೇಮಕಾತಿಗೆ ಪ್ರತಿಕ್ರಿಯೆಯಾಗಿ, ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು, ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ ಸರ್ಕಾರದಿಂದ ಕಾಯಂ ಮಹಿಳಾ ಕಾವಾಡಿ (ಆನೆಯ ಕೇರ್ ಟೇಕರ್) ಆಗಿ ನೇಮಕಗೊಂಡ ಮೊದಲ ಮಹಿಳೆಯಾಗಿದ್ದಾರೆ ಎಂದು ಹೇಳಿದ್ದಾರೆ.
Fabulous News. Tmt. Bellie our very own Elephant Whisperer has become the first woman to be appointed as a permanant woman Cavady ( Elephant Care Taker) by the Government of Tamil Nadu, for her selfless & dedicated service in saving precious elephant calves at Theppakau Elephant… pic.twitter.com/Gz6fVMsGZo
— Supriya Sahu IAS (@supriyasahuias) August 2, 2023
ತಮಿಳುನಾಡು, ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಆನೆ ಮರಿಗಳನ್ನು ಉಳಿಸುವಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆ ಅವರದ್ದು. ಬೊಮ್ಮನ್ ಮತ್ತು ಬೆಳ್ಳಿ ನಿಜವಾಗಿಯೂ ಸ್ಪೂರ್ತಿ. ಅವರು ನಿಜವಾಗಿಯೂ ಅರ್ಹರಾಗಿರುವ ಈ ಮನ್ನಣೆಗಾಗಿ ಸಿಎಂ ಸ್ಟಾಲಿನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ಒಬ್ಬಂಟಿಯಾಗಿಲ್ಲ ಎಂದ ತೆಲಂಗಾಣ ಸಿಎಂ ಕೆಸಿಆರ್ ; 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲ?
ಸ್ಟಾಲಿನ್ ಅವರು ಆನೆ ಪಾಲಕ ದಂಪತಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಅಭಿನಂದಿಸಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರೆರ್ಸ್’ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಈ ದಂಪತಿಗೆ ತಲಾ 1 ಲಕ್ಷ ಚೆಕ್ ಅನ್ನು ಉಡುಗೊರೆಯಾಗಿ ಸ್ಟಾಲಿನ್ ನೀಡಿದ್ದರು. ಈ ಸಾಕ್ಷ್ಯಚಿತ್ರವು ಆನೆ ಮರಿ ಅಮ್ಮು ಮತ್ತು ರಘುವನ್ನು ಪೋಷಿಸುವ ಅರಣ್ಯವಾಸಿ ಸಮುದಾಯಕ್ಕೆ ಸೇರಿದ ಬೊಮ್ಮನ್ ಮತ್ತು ಬೆಳ್ಳಿಯ ಜೀವನ ಮತ್ತು ಕೆಲಸವನ್ನು ಆಧರಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Wed, 2 August 23