ನಾವು ಒಬ್ಬಂಟಿಯಾಗಿಲ್ಲ ಎಂದ ತೆಲಂಗಾಣ ಸಿಎಂ ಕೆಸಿಆರ್ ; 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲ?

ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ನಾವು ಯಾರೊಂದಿಗೂ ಇಲ್ಲ ಮತ್ತು ನಾವು ಯಾರೊಂದಿಗೂ ಇರಲು ಬಯಸುವುದಿಲ್ಲ. ನಾವು ಒಬ್ಬಂಟಿಯಾಗಿಲ್ಲ, ನಮಗೆ ಸ್ನೇಹಿತರಿದ್ದಾರೆ ಎಂದು ಹೇಳಿದ್ದಾರೆ.

ನಾವು ಒಬ್ಬಂಟಿಯಾಗಿಲ್ಲ ಎಂದ ತೆಲಂಗಾಣ ಸಿಎಂ ಕೆಸಿಆರ್ ; 2024ರ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಬೆಂಬಲ?
ಕೆ ಚಂದ್ರಶೇಖರ ರಾವ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 02, 2023 | 4:33 PM

ಹೈದರಾಬಾದ್ ಆಗಸ್ಟ್ 02: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ, ಭಾರತ್ ರಾಷ್ಟ್ರ ಸಮಿತಿ (BRS) ಬಿಜೆಪಿ ನೇತೃತ್ವದ  ಮೈತ್ರಿ ಅಥವಾ ಪ್ರತಿಪಕ್ಷಗಳು ಹೊಸದಾಗಿ ರಚಿಸಲಾದ ಐಎನ್‌ಡಿಐಎ (I.N.D.I.A) ಮೈತ್ರಿಕೂಟವನ್ನು ಬೆಂಬಲಿಸುವುದಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekar Rao) ಬುಧವಾರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ನಾವು ಯಾರೊಂದಿಗೂ ಇಲ್ಲ ಮತ್ತು ನಾವು ಯಾರೊಂದಿಗೂ ಇರಲು ಬಯಸುವುದಿಲ್ಲ. ನಾವು ಒಬ್ಬಂಟಿಯಾಗಿಲ್ಲ, ನಮಗೆ ಸ್ನೇಹಿತರಿದ್ದಾರೆ ಎಂದು ಹೇಳಿದ್ದಾರೆ. ಹೊಸ ಮೈತ್ರಿಕೂಟ ಬಗ್ಗೆ ಟೀಕಿಸಿದ ಕೆಸಿಆರ್, ಇಂಡಿಯಾ (ಮೈತ್ರಿಕೂಟ) ಬಿಜೆಪಿಗಿಂತ ಮೊದಲು ಅಧಿಕಾರದಲ್ಲಿದ್ದರು. ಅವರು ಯಾವುದೇ ಬದಲಾವಣೆಯನ್ನು ತರಲು ವಿಫಲರಾಗಿದ್ದಾರೆ ಎಂದು  ಹೇಳಿದ್ದಾರೆ.

ಎರಡು ಬಿಜೆಪಿಯೇತರ ಆಡಳಿತ ಪಕ್ಷಗಳಾದ ಬಿಜು ಜನತಾ ದಳ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷವು ದೆಹಲಿ ಸೇವಾ ಮಸೂದೆಗೆ ಕೇಂದ್ರಕ್ಕೆ ತಮ್ಮ ಬೆಂಬಲವನ್ನು ನೀಡುವುದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ I.N.D.I.A ಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯವನ್ನು ವಿರೋಧಿಸಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸಿಎಂ ಈ ಹೇಳಿಕೆ ನೀಡಿದ್ದಾರೆ.

ದೆಹಲಿ ಸೇವಾ ಮಸೂದೆ ವಿರುದ್ಧ ಬಿಆರ್​​ಎಸ್

ದೆಹಲಿ ಸೇವೆಗಳ ಮೇಲಿನ ಸುಗ್ರೀವಾಜ್ಞೆಯನ್ನು ಬದಲಿಸುವ ವಿವಾದಾತ್ಮಕ ಮಸೂದೆಯ ವಿರುದ್ಧ ಮತ ಚಲಾಯಿಸಲು ಬಿಆರ್​​ಎಸ್ ಎಲ್ಲಾ ರಾಜ್ಯಸಭಾ ಸಂಸದರಿಗೆ ವಿಪ್ ಜಾರಿಗೊಳಿಸಿದೆ. ಮೇಲ್ಮನೆಯಲ್ಲಿ ಬಿಆರ್‌ಎಸ್ ಏಳು ಸಂಸದರನ್ನು ಹೊಂದಿದೆ. ಆದಾಗ್ಯೂ, ಬಿಆರ್‌ಎಸ್ ಮೈತ್ರಿ ಕದನದ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಇದುವರೆಗೆ ನಡೆದ I.N.D.I.A ಮೈತ್ರಿಕೂಟದ ಎರಡು ರಾಷ್ಟ್ರೀಯ ಮಟ್ಟದ ಸಭೆಗಳಲ್ಲಿ ಪಕ್ಷವು ಭಾಗವಹಿಸಿಲ್ಲ. ಜುಲೈ ಮಧ್ಯದಲ್ಲಿ ನವದೆಹಲಿಯಲ್ಲಿ ನಡೆದ ಬಿಜೆಪಿ ನೇತೃತ್ವದ 38 ಪಕ್ಷಗಳ ಮೆಗಾ ಮೀಟ್‌ನಲ್ಲಿಯೂ ಇದು ಭಾಗಿಯಾಗಿಲ್ಲ.

ಆದರೆ I.N.D.I.A ರಚನೆಯಾದ ನಂತರ ತೆಲಂಗಾಣ ಸಿಎಂ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ, ವಿರೋಧ ಪಕ್ಷದ ಮೈತ್ರಿಕೂಟ ಅಥವಾ ಎನ್‌ಡಿಎ ಪ್ರಯತ್ನಗಳಿಗೆ ತಾವು ಪಕ್ಷವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕೇಂದ್ರದಲ್ಲಿ ಮತ್ತೊಂದು ಪಕ್ಷವನ್ನು ಅಧಿಕಾರಕ್ಕೆ ತರಲು ಒಂದು ಪಕ್ಷವನ್ನು ಕೆಳಗಿಳಿಸಲು ಬಿಆರ್‌ಎಸ್‌ಗೆ ಆಸಕ್ತಿ ಇಲ್ಲ ಎಂದಿದ್ದರು ಅವರು.

ಇದನ್ನೂ ಓದಿ: ನುಹ್ ಹಿಂಸಾಚಾರ ಖಂಡಿಸಿ ಪ್ರತಿಭಟನೆ: ಉತ್ತರ ಪ್ರದೇಶ, ಹರ್ಯಾಣ ಮತ್ತು ದೆಹಲಿಗೆ ಸುಪ್ರೀಂ ನೋಟಿಸ್; ಆಗಸ್ಟ್ 4ಕ್ಕೆ ಮುಂದಿನ ವಿಚಾರಣೆ

ಕೆಸಿಆರ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಆರ್‌ಎಸ್, ಹಿಂದಿನ ಟಿಆರ್‌ಎಸ್ ಅಥವಾ ತೆಲಂಗಾಣ ರಾಷ್ಟ್ರ ಸಮಿತಿಯ ಪುನರುಜ್ಜೀವನದೊಂದಿಗೆ ರಾಷ್ಟ್ರೀಯ ರಾಜಕೀಯಕ್ಕೆ ಪ್ರವೇಶ ಮಾಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ