ವೈದ್ಯೆಯಾಗಬೇಕಿದ್ದ ಮಗಳು ರೋಗಿಯಿಂದ ಹತ್ಯೆಗೊಳಗಾದಳು; ಡಾ ವಂದನಾಳ ಎಂಬಿಬಿಎಸ್ ಪ್ರಮಾಣಪತ್ರ ಸ್ವೀಕರಿಸಿ ಕಣ್ಣೀರಾದ ಪೋಷಕರು

ಉಪಕುಲಪತಿ ಮೋಹನ್ ಕುನ್ನುಮ್ಮಾಲ್ ನೇತೃತ್ವದಲ್ಲಿ ನಡೆದ ಕೆಯುಎಚ್‌ಎಸ್‌ನ ಆಡಳಿತ ಮಂಡಳಿ ಸಭೆಯಲ್ಲಿ ಡಾ ವಂದನಾ ಅವರಿಗೆ ಮರಣೋತ್ತರ ಗೌರವವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ವೈದ್ಯೆಯಾಗಬೇಕಿದ್ದ ಮಗಳು ರೋಗಿಯಿಂದ ಹತ್ಯೆಗೊಳಗಾದಳು; ಡಾ ವಂದನಾಳ ಎಂಬಿಬಿಎಸ್ ಪ್ರಮಾಣಪತ್ರ ಸ್ವೀಕರಿಸಿ ಕಣ್ಣೀರಾದ ಪೋಷಕರು
ಪ್ರಮಾಣಪತ್ರ ಸ್ವೀಕರಿಸುತ್ತಿರುವ ಡಾ. ವಂದನಾದಾಸ್ ಅವರ ಪೋಷಕರು
Follow us
ರಶ್ಮಿ ಕಲ್ಲಕಟ್ಟ
|

Updated on:Aug 02, 2023 | 7:17 PM

ತ್ರಿಶೂರ್ ಆಗಸ್ಟ್ 02:  25ರ ಹರೆಯದ ವಂದನಾ ದಾಸ್ (Dr Vandana Das) ಎಂಬಿಬಿಎಸ್ ಕಲಿತು, ಹೌಸ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ  ಮೇ 10 ರಂದು ಕೊಟ್ಟಾರಕ್ಕರದ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬಆಕೆಯನ್ನು  ಇರಿದು ಹತ್ಯೆ ಮಾಡಿದ್ದ. ಎಂಬಿಬಿಎಸ್ ಪ್ರಮಾಣ ಪತ್ರ ಪ್ರದಾನ ಕಾರ್ಯಕ್ರಮ ಬುಧವಾರದಂದು ನಡೆದಿದ್ದು ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರಿಂದ ವಂದನಾಳ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರ ಸ್ವೀಕರಿಸಿದ ಪೋಷಕರು ಮಗಳನ್ನು ನೆನೆದು ಭಾವುಕರಾಗಿದ್ದಾರೆ. ಕೇರಳ ಯುನಿವರ್ಸಿಟಿ ಆಫ್ ಹೆಲ್ತ್ ಸಯನ್ಸ್ ವಂದನಾಳಿಗೆ ಗೌರವವಾಗಿ ಮರಣೋತ್ತರ ಎಂಬಿಬಿಎಸ್ ಪ್ರಮಾಣ ಪತ್ರ ನೀಡಿದೆ. ಇದನ್ನು ಸ್ವೀಕರಿಸಿದ ವಂದನಾಳ ಪೋಷಕರಾದ ಉದ್ಯಮಿ ಕೆ.ಜಿ.ಮೋಹನ್‌ದಾಸ್ ಮತ್ತು ಅವರ ಪತ್ನಿ ವಸಂತಕುಮಾರಿ ಕಣ್ಣೀರಾಗಿದ್ದಾರೆ.

ಉಪಕುಲಪತಿ ಮೋಹನ್ ಕುನ್ನುಮ್ಮಾಲ್ ನೇತೃತ್ವದಲ್ಲಿ ನಡೆದ ಕೆಯುಎಚ್‌ಎಸ್‌ನ ಆಡಳಿತ ಮಂಡಳಿ ಸಭೆಯಲ್ಲಿ ಡಾ ವಂದನಾ ಅವರಿಗೆ ಮರಣೋತ್ತರ ಗೌರವವನ್ನು ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ರಾಜ್ಯಪಾಲ ಖಾನ್ ಎಂಬಿಬಿಎಸ್ ಪ್ರಮಾಣ ಪತ್ರ ವಿತರಿಸುವಾಗ ಮೋಹನ್ ದಾಸ್ ಮತ್ತು ವಸಂತಕುಮಾರಿಗೆ ಅಳು ತಡೆಯಲಾಗಿಲ್ಲ. ಡಾ ವಂದನಾ ಅವರು ಅಜೀಜಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದು, ಕೋರ್ಸ್‌ನ ಭಾಗವಾಗಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದಾಗ ಹತ್ಯೆಗೊಳಗಾಗಿದ್ದರು.

ಇದನ್ನೂ ಓದಿ: ನುಹ್ ಹಿಂಸಾಚಾರ ಖಂಡಿಸಿ ಪ್ರತಿಭಟನೆ: ಉತ್ತರ ಪ್ರದೇಶ, ಹರ್ಯಾಣ ಮತ್ತು ದೆಹಲಿಗೆ ಸುಪ್ರೀಂ ನೋಟಿಸ್; ಆಗಸ್ಟ್ 4ಕ್ಕೆ ಮುಂದಿನ ವಿಚಾರಣೆ

ಡಾ ವಂದನಾ ಅವರನ್ನು ಚಾಕುವಿನಿಂದ ಇರಿದು ಕೊಂದ ಶಾಲಾ ಶಿಕ್ಷಕ ಜಿ ಸಂದೀಪ್ ವಿರುದ್ಧ ಕ್ರೈಂ ಬ್ರಾಂಚ್, ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್- I ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಚಾರ್ಜ್‌ಶೀಟ್‌ನ ಪ್ರಕಾರ, ಸಂದೀಪ್ ಉದ್ದೇಶಪೂರ್ವಕವಾಗಿ ಡಾ ವಂದನಾ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದು 11 ಬಾರಿ ಇರಿದಿದ್ದಾನೆ.

ವಂದನಾ ಹತ್ಯೆಯ ನಂತರ, ರಾಜ್ಯ ಸರ್ಕಾರವು ವೈದ್ಯಕೀಯ ವೃತ್ತಿಪರರಿಗೆ ದೈಹಿಕ ಹಾನಿ ಉಂಟುಮಾಡುವ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಶಿಫಾರಸು ಮಾಡುವ ಸುಗ್ರೀವಾಜ್ಞೆಯನ್ನು ಹೊರಡಿಸಿತು. ಮೇ 23 ರಂದು ರಾಜ್ಯಪಾಲ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 pm, Wed, 2 August 23