ತಮಿಳುನಾಡು: ಬಾಲಕಿಯ ಕತ್ತು ಸೀಳಿ ಚಿನ್ನದ ಸರ ಕದ್ದುಹೋದ ಇನ್​ಸ್ಟಾಗ್ರಾಂ ಫ್ರೆಂಡ್​

ಇನ್​ಸ್ಟಾಗ್ರಾಂನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ, ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ತಮಿಳುನಾಡಿನ ಕೃಷ್ಣಾಪುರದಲ್ಲಿ ನಡೆದಿದೆ. ಆಕೆ10ನೇ ತರಗತಿ ಓದುತ್ತಿದ್ದರೆ, ಆತ ದ್ವಿತೀಯ ಪಿಯುಸಿಯಲ್ಲಿ ಓದತ್ತಿದ್ದು, ಅದೇ ಪ್ರದೇಶದವನು. ಇನ್​ಸ್ಟಾಗ್ರಾಂನಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ, ಆತನ ದಾಳಿಯಿಂದ ಅಂತಿಮವಾಗಿ ತಪ್ಪಿಸಿಕೊಂಡು ಮನೆಗೆ ತಲುಪಿದ್ದಾಳೆ

ತಮಿಳುನಾಡು: ಬಾಲಕಿಯ ಕತ್ತು ಸೀಳಿ ಚಿನ್ನದ ಸರ ಕದ್ದುಹೋದ ಇನ್​ಸ್ಟಾಗ್ರಾಂ ಫ್ರೆಂಡ್​
ಅಪರಾಧ
Image Credit source: DNA Forensics

Updated on: Feb 24, 2025 | 2:37 PM

ಚೆನ್ನೈ, ಫೆಬ್ರವರಿ 24: ಇನ್​ಸ್ಟಾಗ್ರಾಂನಲ್ಲಿ ಪರಿಚಿತನಾದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಕತ್ತು ಸೀಳಿ, ಚಿನ್ನದ ಸರವನ್ನು ಕದ್ದೊಯ್ದಿರುವ ಘಟನೆ ತಮಿಳುನಾಡಿನ ಕೃಷ್ಣಾಪುರದಲ್ಲಿ ನಡೆದಿದೆ. ಆಕೆ 10ನೇ ತರಗತಿ ಓದುತ್ತಿದ್ದರೆ, ಆತ ದ್ವಿತೀಯ ಪಿಯುಸಿಯಲ್ಲಿ ಓದತ್ತಿದ್ದು, ಅದೇ ಪ್ರದೇಶದವನು.

ಇನ್​ಸ್ಟಾಗ್ರಾಂನಲ್ಲಿ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ, ಆತನ ದಾಳಿಯಿಂದ ಅಂತಿಮವಾಗಿ ತಪ್ಪಿಸಿಕೊಂಡು ಮನೆಗೆ ತಲುಪಿದ್ದಾಳೆ. ಫೆಬ್ರವರಿ 23ರಂದು ರಾತ್ರಿ ಹುಡುಗ ಆಕೆಗೆ 10 ಗಂಟೆ ಸುಮಾರಿಗೆ ಮನೆಯಿಂದ ಹೊರಬರಲು ಸೂಚಿಸಿದ್ದ, ಆಕೆ ಹೊರಗೆ ಬಂದಾಗ ಅವಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ, ಹಲವು ಬಾರಿ ಕತ್ತಿಗೆ ಚಾಕುವಿನಿಂದ ಇರಿದಿದ್ದಾನೆ. ಅಷ್ಟೇ

ಅಲ್ಲದೆ 12 ಗ್ರಾಂ ಚಿನ್ನದ ಸರವನ್ನೂ ದೋಚಿ ಪರಾರಿಯಾಗಿದ್ದ. ಆ ನೋವಿನಲ್ಲೇ ಆಕೆ ಹೇಗೋ ಮನೆಗೆ ತಲುಪಿದ್ದಾಳೆ, ಆಕೆಯ ಸ್ಥಿತಿಯನ್ನು ನೋಡಿ ಪೋಷಕರು ಬೆಚ್ಚಿಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಕೆಯ ತಂದೆಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಆತನ ಮೂವರು ಸ್ನೇಹಿತರನ್ನು ಸಹ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.

ಮತ್ತಷ್ಟು ಓದಿ: ಮದುವೆಯಾಗುವುದಿಲ್ಲ ಎಂದಿದ್ದಕ್ಕೆ ಶಾಲೆಯಲ್ಲೇ ಶಿಕ್ಷಕಿಗೆ ಚಾಕುವಿನಿಂದ ಇರಿದು ಕೊಲೆ

ಪೊಲೀಸರ ಪ್ರಕಾರ, ಹುಡುಗಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರಿಂದ ತನಗೆ ಕೋಪ ಬಂದಿತ್ತು ಎಂದು ಹೇಳಿದ್ದು, ಲೈಂಗಿಕ ದೌರ್ಜನ್ಯದ ಆರೋಪವನ್ನು ನಿರಾಕರಿಸಿದ್ದಾರೆ, ಸಾಮೂಹಿಕ ಅತ್ಯಾಚಾರವಾಗಿಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:32 pm, Mon, 24 February 25