ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್‌ಎಐಎಲ್)ಗೆ ಸ್ಟೀಲ್ ಲೋಡ್ ಸಾಗಿಸುತ್ತಿದ್ದ ಸರಕು ರೈಲು ಹಳಿತಪ್ಪಿದ್ದು, ವ್ಯಾಗನ್ ಹಳಿ ಮೇಲೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ, ಯಾವುದೇ ಗಾಯಗಳಾಗಿಲ್ಲ. ರೈಲು ಬಳ್ಳಾರಿಯಿಂದ ತಮಿಳುನಾಡಿನ ಕಾಂಚೀಪುರಂಗೆ ತೆರಳುತ್ತಿತ್ತು. ಘಟನೆಯಲ್ಲಿ ಕೆಲವು ಬೈಕ್ಗಳಿಗೆ ಹಾನಿಯಾಗಿದೆ.
ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಇದ್ದಕ್ಕಿದ್ದಂತೆ ಗೊಂದಲ ಉಂಟಾಯಿತು, ರಸ್ತೆಯ ಮಧ್ಯೆ ಗೂಡ್ಸ್ ರೈಲು ಕಾಣಿಸಿತ್ತು, ಯಾರಿಗೂ ಯಾವುದೇ ಗಾಯಗಳಾಗಿಲ್ಲ.
ಮತ್ತಷ್ಟು ಓದಿ: ಹಸಿರು ಮಾರ್ಗದಲ್ಲಿ ಹಳಿ ತಪ್ಪಿದ ರೀ ರೈಲ್, ಮೆಟ್ರೋ ಪ್ರಯಾಣಿಕರು ಪರದಾಟ, ನಿಲ್ದಾಣದಲ್ಲಿ ಜನವೋ ಜನ
ಲಾರಿ ಚಾಲಕರೊಬ್ಬರು ನೀಡಿದ ಮಾಹಿತಿ ಪ್ರಕಾರ, ನಾನು ಲಾರಿ ಚಾಲಕ, ಸರಕಗಳನ್ನು ತುಂಬಿದ ಬಳಿಕ ಬಿಲ್ಲಿಂಗ್ ಪ್ರಕ್ರಿಯೆ ಮಾಡುತ್ತಿದ್ದ ಸಂದರ್ಭದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿತ್ತು. ಸುಮಾರು 3-4 ಗಂಟೆಗಳಲ್ಲಿ ಸಾಮಾನ್ಯ ಸರಕು ಸೇವೆಯನ್ನು ಪುನಸ್ಥಾಪಿಸಲಾಗುತ್ತಿದೆ. ಈ ಘಟನೆ ಪರಿಣಾಮ ಯಾವುದೇ ರೈಲುಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ