ತಮಿಳುನಾಡು: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರ ತಯಾರಿಕೆ, ಮಾರಾಟ ನಿಷೇಧ

|

Updated on: Nov 01, 2023 | 9:01 AM

ತಮಿಳುನಾಡಿನಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್​ ಮಾಂಜಾ ಬಳಕೆ, ತಯಾರಿಕೆ, ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಕಾಶದಲ್ಲಿ ಗಾಳಿಪಟ ಹಾರುತ್ತಿದ್ದರೆ ಎಷ್ಟು ಸುಂದರವಾಗಿ ಕಾಣುತ್ತದೋ ಅದರಿಂದ ಅಪಾಯವೂ ಕೂಡ ಇದೆ. ಮಾಂಜಾದ ಎಳೆಗಳು ನೈಲಾನ್, ಪ್ಲಾಸ್ಟಿಕ್ ಅಥವಾ ಸಂಶ್ಲೇಷಿತ ವಸ್ತುಗಳಿಂದ ಮಾಡಿದ್ದಾಗಿರುತ್ತದೆ, ಕೆಲವೊಮ್ಮೆ ಗಾಜಿನಿಂದ ಕೂಡ ಲೇಪಿತವಾಗಿರುತ್ತವೆ.

ತಮಿಳುನಾಡು: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ ದಾರ ತಯಾರಿಕೆ, ಮಾರಾಟ ನಿಷೇಧ
ಮಾಂಜಾ
Image Credit source: BNN Network
Follow us on

ತಮಿಳುನಾಡಿನಲ್ಲಿ ಗಾಳಿಪಟ ಹಾರಿಸಲು ಬಳಸುವ ಚೈನೀಸ್​ ಮಾಂಜಾ ಬಳಕೆ, ತಯಾರಿಕೆ, ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಆಕಾಶದಲ್ಲಿ ಗಾಳಿಪಟ ಹಾರುತ್ತಿದ್ದರೆ ಎಷ್ಟು ಸುಂದರವಾಗಿ ಕಾಣುತ್ತದೋ ಅದರಿಂದ ಅಪಾಯವೂ ಕೂಡ ಇದೆ. ಮಾಂಜಾದ ಎಳೆಗಳು ನೈಲಾನ್, ಪ್ಲಾಸ್ಟಿಕ್ ಅಥವಾ ಸಂಶ್ಲೇಷಿತ ವಸ್ತುಗಳಿಂದ ಮಾಡಿದ್ದಾಗಿರುತ್ತದೆ, ಕೆಲವೊಮ್ಮೆ ಗಾಜಿನಿಂದ ಕೂಡ ಲೇಪಿತವಾಗಿರುತ್ತವೆ.

ಇವುಗಳು ಒಂದೊಮ್ಮೆ ಮನುಷ್ಯರ ಕುತ್ತಿಗೆಗೆ ಸಿಲುಕಿಕೊಂಡರೆ ಕತ್ತು ಕೊಯ್ಯುವುದು ಗ್ಯಾರಂಟಿ, ಅಂತಹ ಹಲವು ಘಟನೆಗಳು ಈ ಹಿಂದೆ ನಡೆದಿದೆ. ಹಾಗೆಯೇ ಪರಿಸರಕ್ಕೂ ಕೂಡ ಮಾರಕ.

ತಮಿಳುನಾಡಿನಲ್ಲಿ ಮಾಂಜಾ ದಾರಗಳ ಮೇಲಿನ ನಿಷೇಧ ಇದೇ ಮೊದಲಲ್ಲ, 2017ರಲ್ಲಿ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್​ ಆಫ್ ಅನಿಮಲ್ಸ್​ ಸೇರಿದಂತೆ ಇತರೆ ಸಂಸ್ಥೆಗಳು ಸಲ್ಲಿಸಿದ ಮನವಿ ಮೇರೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಅಂತಹ ದಾರಗಳ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿಷೇಧಿಸುವಂತೆ ನಿರ್ದೇಶನ ನೀಡಿತು.

ಮತ್ತಷ್ಟು ಓದಿ: Gadag News: ನಾಲ್ಕೈದು‌ ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ

ಮಾಲ್​ಗಳಲ್ಲಿ ಅಥವಾ ದೊಡ್ಡ ಮಟ್ಟದ ಮಳಿಗೆಗಳಲ್ಲಿ ಮಾಂಜಾ ದಾರ ಮಾರಾಟ ಮಾಡುವಂತಿಲ್ಲ, ಗೂಡಂಗಡಿಯಂತಹ ಸಣ್ಣ ಪುಟ್ಟ ವ್ಯಾಪಾರ ಸ್ಥಳಗಳಲ್ಲಿ ಇವು ಮಾರಾಟವಾಗುತ್ತಿದ್ದವು.

ಗಾಳಿಪಟ ಹಾರಿಸುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ , ಆದರೆ ಗಾಳಿಪಟ ಹಾರಿಸಲು ನೈಲಾನ್ ದಾರ ಬಳಸದಂತೆ ಪೋಷಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ, ಗಾಳಿಪಟ ಹಾರಿಸುವಾಗ ಬಟ್ಟೆ ದಾರವನ್ನು ಬಳಸಲು ಸೂಚಿಸಬೇಕು, ಇವು ಪ್ರಾಣಿ, ಪಕ್ಷಿಗಳಿಗೆ ಅಪಾಯ ಉಂಟು ಮಾಡುವುದಿಲ್ಲ ಕ್ರಮೇಣ ತುಂಡಾಗುತ್ತವೆ, ಆದರೆ ಮಾಂಜಾ ದಾರ ಸುಲಭವಾಗಿ ತುಂಡಾಗುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ