Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag News: ನಾಲ್ಕೈದು‌ ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ

ಗದಗ-ಬೆಟಗೇರಿ ಅವಳಿ ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರ ಕತ್ತು, ಕಾಲು, ಕೈಗೆ ಗಾಯವಾಗಿದೆ.

Gadag News: ನಾಲ್ಕೈದು‌ ಜನರ ಜೀವಕ್ಕೆ ಕುತ್ತು ತಂದ ನಿಷೇಧಿತ ಗಾಳಿಪಟ ಮಾಂಜಾ ದಾರ
ಗಾಳಿಪಟ ದಾರದಿಂದ ಗಾಯಗೊಂಡವರು
Follow us
ವಿವೇಕ ಬಿರಾದಾರ
|

Updated on:Jun 05, 2023 | 10:34 AM

ಗದಗ: ಗಾಳಿಪಟ (Kite) ಹಾರಿಸಲು ಬಳಕೆ ಮಾಡುವ “ಮಾಂಜಾ” ದಾರ (Manja Thread) ನಿಷೇಧ ಕಾಗದದಲ್ಲಷ್ಟೇ ಉಳಿದಿದೆ. ಅಪಾಯಕಾರಿ ಮಾಂಜಾ ದಾರ ಮಾರಾಟ, ಬಳಕೆ ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು, ಫ್ಯಾನ್ಸಿ ಸ್ಟೋರ್‌ಗಳು, ಸಣ್ಣಪುಟ್ಟ ಅಂಗಡಿಗಳಲ್ಲಿ ಈ ದಾರವು ಸುಲಭವಾಗಿ ಸಿಗುತ್ತಿದೆ. ಇವುಗಳು ಪ್ರಾಣಿ-ಪಕ್ಷಿಗಳು ಮಾತ್ರವಲ್ಲದೆ ಮನುಷ್ಯರ ಪ್ರಾಣಕ್ಕೂ ಕಂಟಕವಾಗಿವೆ. ಗದಗ-ಬೆಟಗೇರಿ (Gadag-Betigeri) ಅವಳಿ ನಗರದ ರಸ್ತೆಯಲ್ಲಿ ಹರಿತವಾದ ಗಾಳಿಪಟ ದಾರದಿಂದ ಬೈಕ್ ಸವಾರರ ಕತ್ತು, ಕಾಲು, ಕೈಗೆ ಗಾಯವಾಗಿದೆ. ನಿನ್ನೆ (ಜೂ.05) ಕಾರಹುಣ್ಣಿಮೆ ಒಂದೇ ದಿನ ಓರ್ವ ರೈಲ್ವೇ ಪೊಲೀಸ್ ಸೇರಿ ನಾಲ್ಕೈದು‌ ಜನರಿಗೆ ಗಾಯವಾಗಿದೆ.

ಇನ್ನು ಬ್ಯಾನ್ ಆದ ಮಾಂಝಾ ದಾರದಿಂದ ಗಾಳಿಪಟ ಹಾರಾಟ ಮಾಡಲಾಗುತ್ತಿದೆ. ಇದರಿಂದ ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಕುತ್ತು ಇದೆ. ಇದನ್ನು ಮಾರಾಟ ಮತ್ತು ಬಳಕೆ ಮಾಡದಂತೆ ತಡೆಗಟ್ಟಬೇಕೆಂದು ಸಂಘಟನೆಗಳು 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಜಿಲ್ಲಾಡಳಿತ ಡೋಂಟ್​ ಕೇರ್​ ಎಂದಿದೆ.

ಇದನ್ನೂ ಓದಿ: Gadag News: ಗದಗ ಜಿಲ್ಲಾ ಪೊಲೀಸರ ಭರ್ಜರಿ ಮೊಬೈಲ್ ಕಾರ್ಯಾಚರಣೆ; ಒಂದೇ ತಿಂಗಳಲ್ಲಿ ಲಕ್ಷಾಂತರ ರೂ. ಮೊಬೈಲ್​ಗಳು ಪತ್ತೆ

ನಿಷೇಧ ಆದೇಶ ಹೊರಡಿಸಿದ್ದ ಸರ್ಕಾರ

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ತೀರ್ಪಿನಂತೆ ರಾಜ್ಯ ಸರಕಾರ 2017ರಲ್ಲಿ ಮಾಂಜಾ ದಾರದ ತಯಾರಿಕೆ, ಬಳಕೆ, ಮಾರಾಟವನ್ನು ನಿಷೇಧಿಸಿ ಗೆಜೆಟ್‌ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ ಎಂದು ಸಾವರ್ಜನಿಕರು ಆರೋಪ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Mon, 5 June 23

‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ