ತಮಿಳುನಾಡಿನ ಮಾರಂಡಹಳ್ಳಿ ಮತ್ತು ರಾಯಕೋಟ್ಟೈ ನಿಲ್ದಾಣಗಳ ನಡುವೆ ಶುಕ್ರವಾರ ಗೂಡ್ಸ್ ರೈಲು ಹಳಿತಪ್ಪಿದ್ದು, ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದೆ, ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಧರ್ಮಪುರಿ-ಹೊಸೂರು ವಿಭಾಗದಲ್ಲಿ ಮಾರಂಡಹಳ್ಳಿ ಮತ್ತು ರಾಯಕೋಟ್ಟೈ ನಿಲ್ದಾಣಗಳ ನಡುವೆ ಸರಕು ರೈಲು ಹಳಿತಪ್ಪಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಅಪ್ ಮತ್ತು ಡೌನ್ ಲೈನ್‌ಗಳನ್ನು ನಿರ್ಬಂಧಿಸಲಾಗುತ್ತಿದೆ, ಮರು ಸ್ಥಾಪನೆ ಕಾರ್ಯ ನಡೆಯುತ್ತಿದೆ, ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಡಿಆರ್‌ಎಂ ಬೆಂಗಳೂರು ಟ್ವೀಟ್ ಮಾಡಿದ್ದಾರೆ. ಘಟನೆಯ ಬಗ್ಗೆ ನೈಋತ್ಯ ರೈಲ್ವೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.
CANCELLATION OF TRAINS: Due to derailment of goods train between Marandahalli – Rayakottai of Bengaluru Division, the following trains are cancelled .
1. Tr. 16212 Salem- Yesvantpur UR Express JCO 21.04.23
2. Tr. 06278 Dharmapuri – KSR Bengaluru MEMU JCO 21.04.23— DRM Bengaluru (@drmsbc) April 20, 2023
ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಗೂಡ್ಸ್ ರೈಲು ಹಳಿತಪ್ಪಿದ ಕಾರಣ, ಕೆಲವು ರೈಲುಗಳನ್ನು ಧರ್ಮಪುರಿ-ಹೊಸೂರು ಮಾರ್ಗದ ಬದಲು ಜೋಲಾರ್‌ಪೆಟ್ಟೈ-ತಿರುಪ್ಪತ್ತೂರು ಮೂಲಕ ಓಡಿಸಲಾಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.