ಡಿಎಂಕೆ ಸಂಸದೆಗೆ ಬಸ್​​ನಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟದ್ದಕ್ಕೆ ತಮಿಳುನಾಡಿನ ಮೊದಲ ಬಸ್ ಚಾಲಕಿಯ ಉದ್ಯೋಗಕ್ಕೇ ಕುತ್ತು

|

Updated on: Jun 24, 2023 | 10:45 AM

ಶರ್ಮಿಳಾ ಅವರನ್ನು ವಜಾಗೊಳಿಸಿರುವ ಕುರಿತು ಮಾಹಿತಿ ದೊರೆತ ಬಳಿಕ ಆಕೆಗೆ ದೂರವಾಣಿ ಕರೆ ಮಾಡಿದ ಕನಿಮೋಳಿ, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ, ವೃತ್ತಿ ಜೀವನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಡಿಎಂಕೆ ಸಂಸದೆಗೆ ಬಸ್​​ನಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟದ್ದಕ್ಕೆ ತಮಿಳುನಾಡಿನ ಮೊದಲ ಬಸ್ ಚಾಲಕಿಯ ಉದ್ಯೋಗಕ್ಕೇ ಕುತ್ತು
ತಮಿಳುನಾಡಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಹಾಗೂ ಡಿಎಂಕೆ ಸಂಸದೆ ಕನಿಮೊಳಿ
Follow us on

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ (Coimbatore) ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಎಂಬವರು ಕೆಲಸ ಕಳೆದುಕೊಂಡ ಒಂದು ದಿನದ ನಂತರ ಅವರಿಗೆ ಡಿಎಂಕೆ ಸಂಸದೆ ಕನಿಮೋಳಿ (DMK MP Kanimozhi) ಬೆಂಬಲ ನೀಡಿದ್ದಾರೆ. ಜೀವನೋಪಾಯಕ್ಕಾಗಿ ಬಸ್ ಓಡಿಸುತ್ತಿದ್ದ ಶರ್ಮಿಳಾ ಅವರು ಕನಿಮೊಳಿ ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡಿದ್ದರು. ಇದಕ್ಕಾಗಿ ಮಹಿಳಾ ಬಸ್ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ಕಾರಣಕ್ಕಾಗಿ ಆಕೆಯನ್ನು ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದರು.

ಶರ್ಮಿಳಾ ಅವರನ್ನು ವಜಾಗೊಳಿಸಿರುವ ಕುರಿತು ಮಾಹಿತಿ ದೊರೆತ ಬಳಿಕ ಆಕೆಗೆ ದೂರವಾಣಿ ಕರೆ ಮಾಡಿದ ಕನಿಮೋಳಿ, ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ, ವೃತ್ತಿ ಜೀವನಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕನಿಮೋಳಿ ಅವರನ್ನು ಸತ್ಕರಿಸಿ ಬಸ್ಸಿನಲ್ಲಿ ಉಚಿತವಾಗಿ ಕರೆದೊಯ್ದ ಸ್ವಲ್ಪ ಸಮಯದ ನಂತರ ಶರ್ಮಿಳಾಳನ್ನು ಖಾಸಗಿ ಸಾರಿಗೆ ಕಂಪನಿಯು ಕೆಲಸದಿಂದ ವಜಾಗೊಳಿಸಿತ್ತು.

ಕನಿಮೋಳಿ ಅವರನ್ನು ಬಸ್ಸಿನಲ್ಲಿ ಕರೆದೊಯ್ಯುವ ಬಗ್ಗೆ ಚಾಲಕಿ, ನಿರ್ವಾಹಕಿ ಮಧ್ಯೆ ವಾಗ್ವಾದವೂ ನಡೆದಿತ್ತು ಎಂದು ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ: Taj Mahal in Tamil Nadu: ತಾಯಿಯ ನೆನಪಿಗಾಗಿ ‘ತಾಜ್​​ ಮಹಲ್​​​​ ನಿರ್ಮಿಸಿದ ಮಗ

ಕನಿಮೋಳಿ ಅವರು ಟಿಕೆಟ್​ ಪಡೆದಿದ್ದರೂ ನಿರ್ವಾಹಕಿ ಅಗೌರವ ತೋರಿದ್ದಾರೆ. ಈ ಮಧ್ಯೆ, ಆಡಳಿತ ಮಂಡಳಿಯೂ ಪ್ರಚಾರಕ್ಕಾಗಿ ಕನಿಮೋಳಿ ಅವರನ್ನು ಬಸ್​​ನಲ್ಲಿ ಕರೆದೊಯ್ದೆ ಎಂದು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ಈ ಎಲ್ಲ ಕಾರಣಗಳಿಂದ ಬೇಸರಗೊಂಡು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶರ್ಮಿಳಾ ಹೇಳಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ