ತಮಿಳುನಾಡು: ಗಾಂಜಾ ದೊಡ್ಡಮಟ್ಟದಲ್ಲಿ ಅಪಾಯಕಾರಿಯಾಗಿದೆ. ದಕ್ಷಿಣ ರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಕೃಷಿ ಮತ್ತು ಮಾರಾಟ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಡ್ರಗ್ಸ್ ನ ಹಿಡಿತದಿಂದ ಯುವಕರನ್ನು ಬಚಾವು ಮಾಡಲು ಆಯಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದರಿಂದ ಪೊಲೀಸರೂ ಎಚ್ಚೆತ್ತಿದ್ದು, ವ್ಯಾಪಕ ತಪಾಸಣೆಗಳ ಮೂಲಕ ಪಾತಕಗಳನ್ನು ಪತ್ತೆ ಹಚ್ಚುತ್ತೊಇರುತ್ತಾರೆ.
ಈ ಹಿನ್ನೆಲೆಯಲ್ಲಿ ತಿರುಚ್ಚಿ ಜಿಲ್ಲೆಯಲ್ಲಿ (Trichy District) ಗಾಂಜಾ ನಿರ್ಮೂಲನೆಗೆ ಪೊಲೀಸರು ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಜಿಯಾಪುರಂ ಸರಾಗ್ ಭಾಗದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಶೋಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲೊಂದು ಕಡೆ.. ನೀರಿಲ್ಲದ ಕೆರೆಯಲ್ಲಿ ಮೂವರು ಮಹಿಳೆಯರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಮೊದಲು ಸೂಕ್ಷ್ಮವಾಗಿ ಪೊಲೀಸರು ಅವರ ಮೇಲೆ ನಿಗಾ ಇಟ್ಟಿದ್ದರು. ಆದರೆ ಮೊದಲೇ ಅದು ನೀರಿಲ್ಲದ ಕೆರೆಯಾಗಿತ್ತು. ಆದರೂ ಮಹೀಲೆಯರು ಅಲ್ಲಿ ಏನನ್ನೂ ಅಗೆದೆಗೆದು ಹೊರ ತೆಗೆಯುತ್ತಿದ್ದರು! ಅದು ಪೊಲೀಸರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿತು. ಮತ್ತಷ್ಟು ನಿಗಾ ಇಟ್ಟಿದ್ದರು.
ಯಾರಾದರೂ ಬಂದು ಮಹಿಳೆಯರಿಗೆ ಗಾಂಜಾ ನೀಡಬಹುದು ಎಂದು ಮೊದಲು ಪೊಲೀಸರು ಭಾವಿಸಿದ್ದರು. ಆದರೆ ಅಲ್ಲಿ ಮಣ್ಣು ಅಗೆಯುತ್ತಿದ್ದಾಗ ಪೊಲೀಸರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಅಲ್ಲಿನ ನೋಟ ನೋಡಿದಾಗ ಸಿಡಿಲು ಬಡಿದಂತಾಗಿದೆ. ಮಹಿಳೆಯರು ಖಾಲಿ ಕೆರೆಯನ್ನು ಅಗೆಯುತ್ತಾ, ಅಗೆಯುತ್ತಾ ಗಾಂಜಾ ಬೆಳೆಯನ್ನು ಹೊರ ಹಾಕುತ್ತಿದ್ದರು! ಪೊಲೀಸರು ದಾಳಿ ನಡೆಸಿ, ಅಲ್ಲಿ ಇನ್ನಷ್ಟು ಭೂ ಶೋಧನೆ ನಡೆಸಿದಾಗ ಅಪಾರ ಪ್ರಮಾಣದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಂತರ, ಮೂವರೂ ಮಹಿಳೆಯರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆಂಧ್ರಪ್ರದೇಶದಿಂದ ತಮಿಳುನಾಡಿಗೆ ಹೆಚ್ಚಿನ ಗಾಂಜಾ ಕಳ್ಳಸಾಗಣೆಯಾಗುತ್ತಿದ್ದು, ಈ ಮಹಿಳೆಯರು ತಿರುಚ್ಚಿ ಜಿಲ್ಲೆಯ ಹಲವೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾರೆ.
To read more in Telugu click here