ಹೋಗ್ಬೇಡಮ್ಮ, ನೀನು ಬೇಕು, ಕುಟುಂಬವ ತೊರೆದು ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು

ಇತ್ತೀಚಿನ ದಿನಗಳಲ್ಲಿ ಗಂಡನ ಬಿಟ್ಟು ಪ್ರೇಮಿ(Lover)ಯ ಜತೆ ಮಹಿಳೆ ಪರಾರಿಯಾಗಿರುವ ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ. ಪ್ರೇಮಿಗಾಗಿ ಕೊಲೆಗಳು ಕೂಡ ನಡೆದುಹೋಗಿವೆ. ಆದರೆ ಇಲ್ಲೊಂದು ಘಟನೆ ಮನಕಲಕುವಂತಿದೆ. ಗಂಡ, ಮಕ್ಕಳು ಸಂಸಾರವನ್ನು ಬಿಟ್ಟು ಪ್ರೇಮಿಯನ್ನು ಆಯ್ಕೆ ಮಾಡಿಕೊಂಡು ಹೊರಟಿರುವ ಮಹಿಳೆಗೆ ಮಕ್ಕಳು ಹೋಗಬೇಡವೆಂದು ಪರಿಪರಿಯಾಗಿ ಬೇಡುತ್ತಿರುವ ದೃಶ್ಯ ಎಂಥವರ ಮನಸ್ಸನ್ನೂ ಕದಡಿಬಿಡುತ್ತದೆ

ಹೋಗ್ಬೇಡಮ್ಮ, ನೀನು ಬೇಕು, ಕುಟುಂಬವ ತೊರೆದು ಲವರ್​ ಜತೆ ಹೊರಟ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು
ತಾಯಿ

Updated on: Aug 31, 2025 | 10:08 AM

ಇತ್ತೀಚಿನ ದಿನಗಳಲ್ಲಿ ಗಂಡನ ಬಿಟ್ಟು ಪ್ರೇಮಿ(Lover)ಯ ಜತೆ ಮಹಿಳೆ ಪರಾರಿಯಾಗಿರುವ ಸಾಕಷ್ಟು ಘಟನೆಗಳನ್ನು ಕಂಡಿದ್ದೇವೆ. ಪ್ರೇಮಿಗಾಗಿ ಕೊಲೆಗಳು ಕೂಡ ನಡೆದುಹೋಗಿವೆ. ಆದರೆ ಇಲ್ಲೊಂದು ಘಟನೆ ಮನಕಲಕುವಂತಿದೆ. ಗಂಡ, ಮಕ್ಕಳು ಸಂಸಾರವನ್ನು ಬಿಟ್ಟು ಪ್ರೇಮಿಯನ್ನು ಆಯ್ಕೆ ಮಾಡಿಕೊಂಡು ಹೊರಟಿರುವ ಮಹಿಳೆಗೆ ಮಕ್ಕಳು ಹೋಗಬೇಡವೆಂದು ಪರಿಪರಿಯಾಗಿ ಬೇಡುತ್ತಿರುವ ದೃಶ್ಯ ಎಂಥವರ ಮನಸ್ಸನ್ನೂ ಕದಡಿಬಿಡುತ್ತದೆ.

ಕುಟುಂಬ ಹಾಗೂ ಪ್ರೇಮಿ ನಡುವಿನ ಆಯ್ಕೆಯಲ್ಲಿ ಪ್ರೇಮಿಯನ್ನೇ ಆರಿಸಿಕೊಂಡ ಮಹಿಳೆ ಮಕ್ಕಳು, ಗಂಡನನ್ನು ತೊರೆದು ಪ್ರೇಮಿಯ ಜತೆ ಹೊರಡಲು ಸಿದ್ಧಳಾಗುತ್ತಾಳೆ. ಆ ನೋವಿನ ಕ್ಷಣದಲ್ಲಿ ಮಕ್ಕಳು ತಾಯಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದೆ. ಹೋಗಬೇಡಮ್ಮ ನೀನು ನಮಗೆ ಬೇಕು, ಇಲ್ಲೇ ಇದ್ದುಬಿಡು ಎಂದು ಬೇಡಿಕೊಳ್ಳುತ್ತಿರುವ ದೃಶ್ಯ ಕಣ್ಣಂಚಲ್ಲಿ ನೀರು ತರದೆ ಬಿಡದು.

ತಾಯಿ ದೂರ ಹೋದಾಗ ಮಕ್ಕಳು ಹತಾಶರಾಗಿ ಬೇಡಿಕೊಳ್ಳುವುದನ್ನು ತೋರಿಸುವ ವೈರಲ್ ವಿಡಿಯೋದಲ್ಲಿ ತಮ್ಮ ಅಮ್ಮನನ್ನುಅಲ್ಲೇ ಉಳಿಸಿಕೊಳ್ಳಲು ಸಾಧ್ಯವಾಗದೆ ಹತಾಶರಾಗಿರುವ ಮಕ್ಕಳನ್ನು ಕಾಣಬಹುದು.ಕೊನೆಯ ಅವಕಾಶಕ್ಕಾಗಿ ಸಣ್ಣ ದನಿಗಳು ಬೇಡಿಕೊಂಡಾಗ ಕಣ್ಣೀರು ಧಾರೆಯಾಗಿ ಹರಿಯಿತು.ಮಿಸ್ ಮೋಹಿನಿ ಎಂಬುವವರು ಎಕ್ಸ್​​ನಲ್ಲಿ ವೈರಲ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್​

ತಾಯಿಯ ಪ್ರೀತಿ ಅತ್ಯಂತ ಶುದ್ಧ, ನಿಷ್ಕಲ್ಮಶ ಪ್ರೀತಿ ಎಂದು ಹೇಳುತ್ತಾರೆ. ಅದೂ ಈಗ ಸ್ವಾರ್ಥವಾಗಿ ಬದಲಾದರೆ, ಮಾನವೀಯತೆಯು ಈಗಾಗಲೇ ಅದರ ಅಂತ್ಯದ ಹಾದಿಯಲ್ಲಿದೆ ಎಂದರ್ಥ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ