ಹೈದರಾಬಾದ್: ದಿಶಾ ಮೇಲೆ ಕಾಮುಕರು ಎಸಗಿದ ಹೇಯಕೃತ್ಯ ಜನರ ಮನಸಲ್ಲಿ ಹಾಗೇ ಇದೆ. ಆದ್ರೆ, ಈ ಘಟನೆ ಮಾಸುವ ಮುನ್ನ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ..
‘ದಿಶಾ’ ಕೇಸ್ ಮಾಸುವ ಮೊದ್ಲೇ ಮತ್ತೊಂದು ಹೇಯ ಕೃತ್ಯ..!
ನವೆಂಬರ್ 27ರಂದು ರಾತ್ರಿ ಕಾಮುಕರು ವಿಕೃತಿ ಮೆರೆದಿದ್ರು. ಹೈದರಾಬಾದ್ನ ಚಟಾನ್ಪಲ್ಲಿ ಬ್ರಿಡ್ಜ್ ಬಳಿ ದಿಶಾ ಮೇಲೆ ಅತ್ಯಾಚಾರವೆಸಗಿ ಬಳಿಕ ಬೆಂಕಿ ಹಚ್ಚಿ ಸುಟ್ಟು ಹಾಕಿದ್ರು. ಆ ನರರಾಕ್ಷಸರಿಗೆ ಖಾಕಿ ಎನ್ಕೌಂಟರ್ ಶಿಕ್ಷೆ ಕೊಟ್ಟಿತ್ತು. ಆದ್ರೀಗ ಆ ಘೋರ ಘಟನೆ ಮಾಸುವ ಮುನ್ನವೇ ಈಗ ಹೈದರಾಬಾದ್ನಲ್ಲಿ ಮತ್ತೊಂದು ಅತ್ಯಾಚಾರ ಬೆಳಕಿಗೆ ಬಂದಿದೆ.
18 ವರ್ಷದ ಯುವತಿ ಮೇಲೆ ಆಟೋ ಚಾಲಕನೊಬ್ಬ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆಟೋ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ಪೊಲಿಸ್ರು ಆ ಕ್ರೂರಿಗಾಗಿ ಹುಟುಕಾಟ ನಡೆಸಿದ್ದಾರೆ.
ಪಾಟ್ನಾದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್:
ಹೈದರಾಬಾದ್ನಲ್ಲಿ ಆಟೋ ಚಾಲಕ ರಕ್ಕಸ ರೂಪ ತಾಳಿದ್ರೆ, ಇತ್ತ ಬಿಹಾರದ ಪಾಟ್ನಾದಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಆಗಿದೆ. ಡಿಸೆಂಬರ್ 9ರಂದು ಅದೇ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯನ್ನ ಕರೆದೊಯ್ದು ರೇಪ್ ಮಾಡಿದ್ದಾರೆ. ಈ ವಿಚಾರವನ್ನು ವಿದ್ಯಾರ್ಥಿನಿ ಯಾರಿಗೂ ಹೇಳಿರಲಿಲ್ಲ. ಆದ್ರೆ, ಸಂತ್ರಸ್ತೆಯ ಸ್ನೇಹಿತೆ ಆಕೆಯ ಪೋಷಕರು ಹೇಳಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಈ ಸುದ್ದಿ ಗೊತ್ತಾಗ್ತಿದ್ದಂತೆ ವಿದ್ಯಾರ್ಥಿಗಳು ರೊಚ್ಚಿಗೆದ್ರು. ಪಾಟ್ನಾದ ಕಾರ್ಗಿಲ್ ಚೌಕ್ ಬಳಿ ಜಮಾಯಿಸಿ ಬಿಹಾರ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದ್ರು. ರಸ್ತೆಯಲ್ಲಿ ಟೈರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ರು. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಪೊಲೀಸ್ರು ಅಲರ್ಟ್ ಆದ್ರು.
ಸಿಟ್ಟಿಗೆದ್ದಿದ್ದ ವಿದ್ಯಾರ್ಥಿಗಳ ಮೇಲೆ ಜಲಫಿರಂಗಿ ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಿಸಿದ್ರು. ಒಟ್ನಲ್ಲಿ, ದಿಶಾ ಕೇಸ್ ಮರೆಯುವ ಮುನ್ನವೇ ಮತ್ತೆ ಅತ್ಯಾಚಾರಗಳು ನಡೆಯುತ್ತಿವೆ. ಹೈದಾರಾಬಾದ್ ಮತ್ತು ಪಾಟ್ನಾದಲ್ಲಿ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಅವರಿಗೆ ತಕ್ಷ ಶಿಕ್ಷೆ ಆಗಲಿ ಅಂತಾ ಜನ ಹೋರಾಟದ ಹಾದಿ ತುಳಿದಿದ್ದಾರೆ.