ಜಮ್ಮು-ಕಾಶ್ಮೀರದಲ್ಲಿ ಹಿಮ ಮಳೆಗೆ ಪ್ರವಾಸಿಗರು ಫಿದಾ

ಜಮ್ಮು-ಕಾಶ್ಮೀರದಲ್ಲಿ ಹಿಮ ಮಳೆಗೆ ಪ್ರವಾಸಿಗರು ಫಿದಾ

ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರಿ ಹಿಮ ಮಳೆಯಾಗುತ್ತಿದ್ದು, ಜನರು ಪರದಾಡುತ್ತಿದ್ದರೆ. ಆದ್ರೆ ಪ್ರವಾಸಿಗರು ಸ್ವರ್ಗದಂತೆ ಕಾಣುತ್ತಿದ್ದು, ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದಾರೆ. ರಸ್ತೆ, ವಾಹನ, ಮನೆಗಳ ಮೇಲೆ ಹಿಮ ಬೀಳುತ್ತಿದ್ದು, ಎತ್ತ ತಿರುಗಿ ನೋಡಿದರೂ ಹಿಮವೇ ಕಾಣುತ್ತಿದೆ.

100 ಪ್ರಭಾವಿ ಮಹಿಳೆಯರಲ್ಲಿ ನಿರ್ಮಲಾ:
ಫೋರ್ಬ್ಸ್‌ ನಿಯತಕಾಲಿಕೆ ಪಟ್ಟಿ ಬಿಡುಗಡೆ ಮಾಡಿರೋ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, 34ನೇ ಸ್ಥಾನ ಪಡೆದುಕೊಂಡಿದ್ದಾರೆ. ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಸತತ ಒಂಬತ್ತನೇ ಬಾರಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

‘2022ಕ್ಕೆ ಹೊಸ ಕಟ್ಟಡದಲ್ಲಿ ಅಧಿವೇಶನ’
2022ರಲ್ಲಿ ಸಂಸತ್‌ ಅಧಿವೇಶನ ಹೊಸ ಕಟ್ಟಡದಲ್ಲಿ ನಡೆಯಲಿದೆ ಅಂತ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಚಳಿಗಾಲದ ಅಧಿವೇಶದ ಮುಕ್ತಾಯದ ಹಿನ್ನೆಲೆಯಲ್ಲಿ ಮಾತನಾಡಿದ ಬಿರ್ಲಾ, 2022ರ ವೇಳೆಗೆ ಹೊಸ ಕಟ್ಟಡ ನಿರ್ಮಾಣವಾಗುವ ಭರವಸೆ ಇದೆ ಎಂದಿದ್ದಾರೆ.

ಪೊಲೀಸರ ಭರ್ಜರಿ ಬೇಟೆ:
ವಿಜಯವಾಡ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ದರೋಡೆ ಮಾಡುತ್ತಿದ್ದ ನಾಲ್ವರ ಗ್ಯಾಂಗ್‌ ಅರೆಸ್ಟ್ ಮಾಡಿದ್ದು, ಖದೀಮರಿಂದ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಹಣವನ್ನ ವಶಕ್ಕೆ ಪಡೆಯಲಾಗಿದೆ.

ಆಲಿಕಲ್ಲು ಮಳೆ ಕಾಟ..! 
ಉತ್ತರಪ್ರದೇಶದ ಜಲಾನ್​ನಲ್ಲಿ ಜನ ಕಂಗಾಲಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ಆಲಿಕಲ್ಲು ಸಹಿತ ಭಾರಿ ಮಳೆಗುತ್ತಿದೆ. ಇದ್ರಿಂದ ರಸ್ತೆ, ಮನೆ ಸೇರಿದಂತೆ ಎಲ್ಲೆಂದ್ರಲ್ಲಿ ಆಲಿಕಲ್ಲುಗಳ ರಾಶಿಯೇ ಬಿದ್ದಿದ್ದು, ಜನರ ದಿನನಿತ್ಯ ಕಾರ್ಯಗಳಿಗೆ ಅಡೆತಡೆಯುಂಟಾಗುತ್ತಿದೆ.

ಫೆ.1ಕ್ಕೆ ಕೇಂದ್ರದ 2ನೇ ಬಜೆಟ್:
ಮೊದಲ ಬಾರಿಗೆ ಪೂರ್ಣಪ್ರಮಾಣದ ಹಣಕಾಸು ಖಾತೆಯ ಜವಾಬ್ದಾರಿ ವಹಿಸಿಕೊಂಡ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್​ ಅನ್ನು 2020ರ ಫೆಬ್ರವರಿ 1ರಂದು ಮಂಡಿಸಲಿದ್ದಾರೆ. ಜನವರಿ 31ರಂದು ಆರ್ಥಿಕ ಸಮೀಕ್ಷೆಯ ವರದಿ ಬಿಡುಗಡೆ ಆಗಲಿದೆ. ಇದರ ಮರುದಿನವೇ 2020-21 ಆಯವ್ಯಯ ಮಂಡನೆ ಆಗುವ ಸಾಧ್ಯತೆ ಇದೆ.

Click on your DTH Provider to Add TV9 Kannada