ಅಂಗನವಾಡಿ ಶಿಕ್ಷಕಿಯನ್ನು ಬೈಕ್​​ನಲ್ಲಿ ಕಾಡಿಗೆ ಕರೆದೊಯ್ದ ದುರುಳರು: ಹೀನಾಯ, ಭಯಂಕರ ಕೃತ್ಯವೆಸಗಿದರು

|

Updated on: May 18, 2024 | 1:55 PM

Anganwadi Teacher Brutally Killed: ಅಂಗನವಾಡಿ ಶಿಕ್ಷಕಿ ಕಾಟಾಪುರದಲ್ಲಿ ಕರ್ತವ್ಯ ಮುಗಿಸಿ ಬಸ್‌ಗಾಗಿ ಕಾಯುತ್ತಿದ್ದಾಗ ಬಸ್‌ ತಪ್ಪಿದ ಕಾರಣ ಆಕೆಯನ್ನು ರಾಮಯ್ಯ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನ ಸ್ನೇಹಿತ ಜಂಪಯ್ಯ ಸಹ ಜೊತೆ ಸೇರಿ ದಾರಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಗನವಾಡಿ ಶಿಕ್ಷಕಿಯನ್ನು ಬೈಕ್​​ನಲ್ಲಿ ಕಾಡಿಗೆ ಕರೆದೊಯ್ದ ದುರುಳರು: ಹೀನಾಯ, ಭಯಂಕರ ಕೃತ್ಯವೆಸಗಿದರು
ಅಂಗನವಾಡಿ ಶಿಕ್ಷಕಿಯನ್ನು ಕಾಡಿಗೆ ಕೊಂಡೊಯ್ದ ದುರುಳರು ಭಯಂಕರ ಕೃತ್ಯವೆಸಗಿದರು
Follow us on

ಎರಡು ದಿನಗಳ ಹಿಂದೆ ಜಿಲ್ಲೆಯ ಮುಳಗುವಿಯಲ್ಲಿ ಅಂಗನವಾಡಿ ಶಿಕ್ಷಕಿಯ (Anganwadi Teacher) ಭೀಕರ ಹತ್ಯೆಯಾಗಿತ್ತು (Murder). ತನಿಖೆಗೆ ಇಳಿದ ತೆಲಂಗಾಣ ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು, ತೀವ್ರ ಸಂಚಲನ ಮೂಡಿಸಿದೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಬಳಿಕ ತಾಡ್ವಾಯಿ ಹೊರವಲಯದ ಅರಣ್ಯದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಾಡ್ವಾಯಿ ಪೊಲೀಸರು 48 ಗಂಟೆಗಳಲ್ಲಿ ಭೇದಿಸಿದ್ದಾರೆ. ಇಬ್ಬರು ಆರೋಪಿಗಳನ್ನೂ ಬಂಧಿಸಿ, ರಿಮಾಂಡ್ ಮಾಡಲಾಗಿದೆ (Telangana Crime).

ಏತೂರುನಗರ ಮಂಡಲದ ಚಿನ್ನಬೋಯಿನಪಲ್ಲಿ ಗ್ರಾಮದ ರಾದಂ ಸುಜಾತಾ ಎಂಬ ಮಹಿಳೆ ತಡವಾಯಿ ಮಂಡಲದ ಕಾಟಾಪುರದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿ ಊರಿಗೆ ಹೊರಟ ಸುಜಾತಾ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆಯ ವೇಳೆ ಸುಜಾತಾ ಸಾವನ್ನಪ್ಪಿದ್ದು, ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತಡವಾಯಿ ಮಂಡಲದ ನಾಂಪಲ್ಲಿ ಉಪನಗರದ ಅರಣ್ಯಕ್ಕೆ ಕೊಂಡೊಯ್ದು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಈ ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಲಕ್ಷಣಗಳು ಕಂಡುಬಂದಿವೆ. ಅಂಗನವಾಡಿ ಶಿಕ್ಷಕಿಯ ಕೊಲೆ ರಹಸ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ತಡವಾಯಿ ಎಸ್‌ಐ ಶ್ರೀಕಾಂತ್ ರೆಡ್ಡಿ ಕೇವಲ 48 ಗಂಟೆಗಳಲ್ಲಿ ಪತ್ತೆ ಹಚ್ಚಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪ್ರಕರಣವನ್ನು ಭೇದಿಸಿ ಮಾಧ್ಯಮಗಳ ಮುಂದೆ ವಿವರಗಳನ್ನು ಬಹಿರಂಗಪಡಿಸಿದರು.

Also Read: ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರುಗಳದ್ದೇ ಹವಾ! ಮಹಿಳಾ ಆಟೋ ಪ್ರಯಾಣಿಕರೂ ನಿರಾಳ

ಆರೋಪಿಗಳಿಬ್ಬರನ್ನು ಏತೂರುನಗರಂ ಮಂಡಲದ ರೊಯ್ಯೂರು ಗ್ರಾಮದ ರಾಮಯ್ಯ ಮತ್ತು ಜಂಪಯ್ಯ ಎಂದು ಗುರುತಿಸಲಾಗಿದೆ. ಅಂಗನವಾಡಿ ಶಿಕ್ಷಕಿ ಕಾಟಾಪುರದಲ್ಲಿ ಕರ್ತವ್ಯ ಮುಗಿಸಿ ಬಸ್‌ಗಾಗಿ ಕಾಯುತ್ತಿದ್ದಾಗ ಬಸ್‌ ತಪ್ಪಿದ ಕಾರಣ ಆಕೆಯನ್ನು ರಾಮಯ್ಯ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನ ಸ್ನೇಹಿತ ಜಂಪಯ್ಯ ಸಹ ಜೊತೆ ಸೇರಿ ದಾರಿಯಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ಬಳಿಕ ಆಕೆಯ ಕತ್ತಿನಲ್ಲಿದ್ದ 3 ತೊಲ ಚಿನ್ನದ ಸರ ಹಾಗೂ ಎಟಿಎಂ ಕಾರ್ಡ್ ಕದ್ದೊಯ್ದಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳ ಜತೆಗೆ ಕಾಲ್ ಡೇಟಾ ಆಧಾರದಲ್ಲಿ ಪೊಲೀಸರು ಅತ್ಯಂತ ಜಾಣತನದಿಂದ ಈ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. 48 ಗಂಟೆಯೊಳಗೆ ಕೊಲೆ ರಹಸ್ಯ ಭೇದಿಸಿದ ತಡವಾಯಿ ಎಸ್‌ಐ ಮತ್ತು ತಂಡವನ್ನು ಜಿಲ್ಲಾ ಎಸ್ಪಿ ಶಬರೀಶ್ ಮತ್ತು ಡಿಎಸ್ಪಿ ರವೀಂದರ್ ಅಭಿನಂದಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:39 am, Sat, 18 May 24