ತೆಲಂಗಾಣ (Telangana) ಬಿಜೆಪಿ ಘಟಕದ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ (Bandi Sanjay kumar) ಎಸ್‌ಎಸ್‌ಸಿ ಪೇಪರ್ ಸೋರಿಕೆ ಪ್ರಕರಣದಲ್ಲಿ (SSC paper leak case) ಬಂಧನಕ್ಕೊಳಗಾಗಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳ ನಂತರ ಶುಕ್ರವಾರ ಬೃಹತ್ ರೋಡ್‌ಶೋ ನಡೆಸಿದರು. ಇಂದು(ಶುಕ್ರವಾರ) ಬೆಳಗ್ಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಂಜಯ್‌ಗೆ ಜಾಮೀನು ನೀಡಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಪಕ್ಷದ ಧ್ವಜಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗಿ, ಅಬ್ಬರದ ಸಂಗೀತಕ್ಕೆ ನೃತ್ಯ ಮಾಡುತ್ತಾ ಬಂಡಿ ಅವರನ್ನು ಸ್ವಾಗತಿಸಿದ್ದಾರೆ. ವಿವಾದಿತ ಬಿಜೆಪಿ ನಾಯಕನಿಗೆ ಅವರ ಅನುಯಾಯಿಗಳು ಮಾಲಾರ್ಪಣೆ ಮಾಡಿದ್ದಾರೆ. ಬಂಡಿ ಸಂಜಯ್ ಕುಮಾರ್ ಡಾ ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
10 ನೇ ತರಗತಿಯ ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಫೋಟೋ ಆನ್‌ಲೈನ್‌ನಲ್ಲಿ ಹರಿದಾಡಿದ ನಂತರ ಬಂಡಿ ಸಂಜಯ್ ಅವರನ್ನು ಬುಧವಾರ ಬಂಧಿಸಿ ಏಪ್ರಿಲ್ 19 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇಬ್ಬರು ಆರೋಪಿಗಳಲ್ಲಿ ಒಬ್ಬ ಪತ್ರಕರ್ತ ರಾಜಕಾರಣಿಗೆ ವಾಟ್ಸಾಪ್‌ನಲ್ಲಿ ಇದನ್ನು ಕಳುಹಿಸಿದ್ದು ಈತನನ್ನು ಸಹ ಬಂಧಿಸಲಾಗಿದೆ.
#WATCH | Telangana BJP president Bandi Sanjay holds rally in Karimnagar after being released on bail in the SSC paper leak case pic.twitter.com/gWpCABuK0x
— ANI (@ANI) April 7, 2023
ಬಿಜೆಪಿ ನಾಯಕನ ಬಂಧನವು ದಕ್ಷಿಣ ರಾಜ್ಯದಲ್ಲಿ ಭಾರೀ ಕೋಲಾಹಲವುಂಟು ಮಾಡಿದೆ. ಈ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು 2024 ಲೋಕಸಭೆ ಚುನಾವಣೆಗೆ ಮೊದಲು ದಕ್ಷಿಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿಯ ಜನಪ್ರಿಯತೆಯ ನಿರ್ಣಾಯಕ ಪರೀಕ್ಷೆ ಎಂದು ಇದನ್ನು ನೋಡಲಾಗುತ್ತಿದೆ.
#WATCH | Telangana BJP President Bandi Sanjay along with his supporters pays floral tributes to Dr BR Ambedkar in Karimnagar, following his bail in the SSC paper leak case pic.twitter.com/Q7HkoD1p0B
— ANI (@ANI) April 7, 2023
2023 ರ ತೆಲಂಗಾಣ ಚುನಾವಣೆಯು ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪ್ರಧಾನ ಮಂತ್ರಿ ಮಹತ್ವಾಕಾಂಕ್ಷೆಯ ಪರೀಕ್ಷೆ ಮತ್ತು ರಾಷ್ಟ್ರೀಯವಾಗಿ ಬಿಜೆಪಿಗೆ ಸವಾಲು ಹಾಕುವ ಅವರ ಭಾರತ ರಾಷ್ಟ್ರ ಸಮಿತಿಯ ಸಾಮರ್ಥ್ಯದ ಪರೀಕ್ಷೆಯಾಗಿದೆ.
ಇದನ್ನೂ ಓದಿ: Bandi Sanjay Kumar: ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ಗೆ ಜಾಮೀನು
ಬಂಡಿ ಸಂಜಯ್ ವಿರುದ್ಧದ ಆರೋಪಗಳು ರಾಜಕೀಯ ಸೇಡಿನದ್ದು ಎಂದು ಬಂಡಿ ಸಂಜಯ್ ವಕೀಲರು ಹೇಳಿದ್ದಾರೆ. ಇಂದು ಬೆಳಗ್ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಅನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂಬ ಷರತ್ತು ಸೇರಿದಂತೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ